ಆಂಧ್ರಪ್ರದೇಶದಲ್ಲಿ ಭೀಕರ ಅಗ್ನಿ ದುರಂತ; ರಸ್ತೆ ಬದಿಯಲ್ಲಿದ್ದ 30 ಗುಡಿಸಲುಗಳು ಸಂಪೂರ್ಣ ಭಸ್ಮ
ಗ್ಯಾಸ್ ಸಿಲಿಂಡರ್ ಸ್ಫೋಟವಾಗಿ ಹೊತ್ತಿಕೊಂಡ ಬೆಂಕಿ ವೇಗವಾಗಿ ಒಂದಾದ ಬಳಿಕ ಒಂದು ಗುಡಿಸಲುಗಳಿಗೆ ಹಬ್ಬಿದೆ. ಸದ್ಯ ಈ ದುರ್ಘಟನೆಯಲ್ಲಿ ಆದ ಜೀವ ಹಾನಿಯ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಆಂಧ್ರಪ್ರದೇಶದಲ್ಲೊಂದು ಭೀಕರ ಅಗ್ನಿದುರಂತ (Fire Accident) ನಡೆದಿದೆ. ಇಲ್ಲಿನ ವಿಜಯನಗರ ಜಿಲ್ಲೆಯ ಮೆಂಟಡಾ ಮಂಡಲದ ಜಕ್ಕುವಾ ಎಂಬ ಹಳ್ಳಿಯಲ್ಲಿ ನಡೆದ ಬೆಂಕಿ ಅನಾಹುತದಲ್ಲಿ ಬರೋಬ್ಬರಿ 30 ಗುಡಿಸಲುಗಳು ಸುಟ್ಟು ಭಸ್ಮವಾಗಿವೆ. ಈ ಗುಡಿಸಲುಗಳು ಕುರಕುಲಾ ರಸ್ತೆಯಲ್ಲಿ ಇದ್ದವಾಗಿದ್ದವು. ಮನೆಯೊಂದರಲ್ಲಿ ನಡೆದ ಅಡುಗೆ ಅನಿಲ ಸ್ಫೋಟವೇ ಈ ದುರಂತಕ್ಕೆ ಕಾರಣ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳೀಯರೇ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ.
ಗ್ಯಾಸ್ ಸಿಲಿಂಡರ್ ಸ್ಫೋಟವಾಗಿ ಹೊತ್ತಿಕೊಂಡ ಬೆಂಕಿ ವೇಗವಾಗಿ ಒಂದಾದ ಬಳಿಕ ಒಂದು ಗುಡಿಸಲುಗಳಿಗೆ ಹಬ್ಬಿದೆ. ಸದ್ಯ ಈ ದುರ್ಘಟನೆಯಲ್ಲಿ ಆದ ಜೀವ ಹಾನಿಯ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದರೆ ಆ 30 ಗುಡಿಸಲುಗಳಲ್ಲಿ ವಾಸವಾಗಿದ್ದ ಜನರಿಗೆ ಮನೆ ನಾಶವಾದಂತಾಗಿದೆ. ಅದರಲ್ಲಿದ್ದ ಸಾಮಗ್ರಿಗಳೆಲ್ಲ ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ. ಹೀಗೆ ಆಶ್ರಯ ಕಳೆದುಕೊಂಡವರಿಗೆ ಸಮೀಪದ ಶಾಲೆಯಲ್ಲಿ ಉಳಿದುಕೊಳ್ಳುವ, ಆಹಾರ ವ್ಯವಸ್ಥೆ ಮಾಡಲಾಗಿದೆ. ಸದ್ಯ ಸ್ಥಳದಲ್ಲಿ ಬೆಂಕಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದಾಗಿ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬಸ್ ನಿಲ್ದಾಣದಲ್ಲಿ ಪುನೀತ್ ಫೋಟೋಗೆ ಮುತ್ತಿಟ್ಟು ಕಂಬನಿ ಸುರಿಸಿದ ಅಜ್ಜಿ; ವಿಡಿಯೋ ವೈರಲ್