ರಬಕವಿ-ಬನಹಟ್ಟಿಯಲ್ಲಿ ಕಿರಾಣಾ ಅಂಗಡಿಯೊಂದು ಸುಟ್ಟು ಹೋಗುತ್ತಿದ್ದರೂ ಅಗ್ನಿಶಾಮಕ ದಳಕ್ಕೆ ಯಾರೋ ಫೋನ್ ಮಾಡಲ್ಲ!
ಸೋಜಿಗದ ಸಂಗತಿಯೆಂದರೆ, ಅಂಗಡಿ ಹೊತ್ತಿ ಉರಿಯುತ್ತಿರುವುದನ್ನು ಜನರೆಲ್ಲ ನೋಡುತ್ತಿದ್ದಾರೆಯೇ ಹೊರತು ಅಗ್ನಿಶಾಮಕ ದಳಕ್ಕೆ ಯಾರೊಬ್ಬರೂ ಫೋನ್ ಮಾಡುತ್ತಿಲ್ಲ.
ಈ ವರ್ಷ ನಮ್ಮ ದೇಶದಲ್ಲಿ ಅಗ್ನಿ ಅನಾಹುತಗಳು ಹೆಚ್ಚಾಗಿರೋದು ಸುಳ್ಳಲ್ಲ. ಕೇವಲ 4 ದಿನಗಳ ಮಹಾರಾಷ್ಟ್ರ ಅಹ್ಮದನಗರದಲ್ಲಿರುವ ಸರ್ಕಾರಿ ಸಿವಿಲ್ ಆಸ್ಪತ್ರೆಯಲ್ಲಿ ಬೆಂಕಿ ದುರಂತ ಸಂಭವಿಸಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 14 ಕೊರೋನಾ ಸೋಂಕಿತರು ಸಜೀವ ದಹನಗೊಂಡರು. ಕೆಲವೇ ವಾರಗಳ ಹಿಂದೆ ಬೆಂಗಳೂರಿನ ಅಪಾರ್ಟ್ಮೆಂಟ್ ಒಂದರ ಫ್ಲ್ಯಾಟ್ನಲ್ಲಿ ಬೆಂಕಿಹೊತ್ತಿ ತಾಯಿ ಮತ್ತು ಮಗಳು ಅಗ್ನಿಗೆ ಆಹುತಿಯಾದರು. ದೇಶದ ವಿವಿಧ ಭಾಗಗಳಲ್ಲಿ ಬೆಂಕಿ ಆಕಸ್ಮಿಕಗಳು ಜರುಗುತ್ತಲೇ ಇವೆ.
ಮಂಗಳವಾರ ರಾತ್ರಿ ಬಾಗಲಕೋಟ ಜಿಲ್ಲೆಯ ರಬಕವಿ-ಬನಹಟ್ಟಿ ಪಟ್ಟಣದಲ್ಲಿ ಅಗ್ನಿ ಅವಗಢ ಸಂಭವಿಸಿದೆ. ಪಟ್ಟಣದ ಮುಗತಿ ಓಣಿಯಲ್ಲಿ ಸುರೇಶ ಶೀಲವಂತ ಹೆಸರಿನ ವ್ಯಕ್ತಿಗೆ ಸೇರಿದ ಕಿರಾಣಾ ಅಂಗಡಿಯು ಸುಟ್ಟು ಭಸ್ಮವಾಗಿದೆ. ಅಂಗಡಿಗೆ ಹತ್ತಿರದಲ್ಲಿ ಪಾರ್ಕ್ ಮಾಡಿದ ಒಂದು ಬೈಕ್ ಸಹ ಅರೆಬರೆ ಸುಟ್ಟಿದೆ. ಪೆಟ್ರೋಲ್ ಟ್ಯಾಂಕಿಗೆ ಬೆಂಕಿ ತಾಕಿದ್ದರೆ ಪೂರ್ತಿ ವಾಹನವೇ ಸುಟ್ಟು ಕರಕಲಾಗುತಿತ್ತು.
ಸೋಜಿಗದ ಸಂಗತಿಯೆಂದರೆ, ಅಂಗಡಿ ಹೊತ್ತಿ ಉರಿಯುತ್ತಿರುವುದನ್ನು ಜನರೆಲ್ಲ ನೋಡುತ್ತಿದ್ದಾರೆಯೇ ಹೊರತು ಅಗ್ನಿಶಾಮಕ ದಳಕ್ಕೆ ಯಾರೊಬ್ಬರೂ ಫೋನ್ ಮಾಡುತ್ತಿಲ್ಲ. ಅಷ್ಟಕ್ಕೂ ಒಬ್ಬ ಮಹಿಳೆ, ‘ಫೈರ್ ಎಂಜಿನ್ ಗೆ ಫೋನ್ ಮಾಡೋ,’ ಅಂತ ಯಾರಿಗೋ ಹೇಳುತ್ತಿರುವುದು ವಿಡಿಯೋನಲ್ಲಿ ಕೇಳಿಸುತ್ತಿದೆ. ಅಂಗಡಿ ಅವರೆದುರು ಸುಟ್ಟು ಭಸ್ಮವಾಗುತ್ತದೆಯೇ ಹೊರತು ಯಾರೂ ಫೋನ್ ಮಾಡುವುದಿಲ್ಲ.
ಸೂರ್ಯ ಹುಟ್ಟಿ ಬಳಿಕ ಜನ ಪೂರ್ತಿ ಸುಟ್ಟುಹೋಗಿರುವ ಅಂಗಡಿಯನ್ನು ನೋಡುತ್ತಿದ್ದಾರೆ. ಎಂಥ ವಿಚಿತ್ರವಲ್ಲವೇ?