ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಎತ್ತಿನ ಬಂಡಿ ಓಡಿಸಿ ಬಂಡಿ ಓಟದ ಸ್ಪರ್ಧೆ ಉದ್ಘಾಟಿಸಿದರು!

ಖಾನಾಪುರದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ನಿಸ್ಸಂದೇಹವಾಗಿ ಸಾಹಸಪ್ರಿಯೆ. ಅವರ ಪತಿ ಹೇಮಂತ್ ನಿಂಬಾಳ್ಕರ್ ಒಬ್ಬ ಹಿರಿಯ ಪೊಲೀಸ್ ಅಧಿಕಾರಿಯಾಗಿರುವ ಹಿನ್ನೆಲೆಯಲ್ಲಿ ಅಂಜಲಿ ಅವರು ಸಾಹಸಗಳನ್ನು ಇಷ್ಟಪಡುವುರದರಲ್ಲಿ ಆಶ್ಚರ್ಯವೇನೂ ಇಲ್ಲ ಬಿಡಿ ಮಾರಾಯ್ರೇ. ನಿಮಗೆ ನೆನಪಿರಬಹುದು. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅವರು ಬೆಳಗಾವಿ ಜಿಲ್ಲೆಯ ಖಾನಾಪುರ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕಿಯಾಗಿ ಆಯ್ಕೆಯಾಗಿದ್ದರು. ಒಂದು ವೇಳೆ ಕಾಂಗ್ರೆಸ್ ಪಕ್ಷವೇನಾದರೂ ಬಹುಮತ ಪಡೆದು ಸರ್ಕಾರ ರಚಿಸಿದ್ದರೆ, ಅಂಜಲಿ ಆರೋಗ್ಯ ಸಚಿವೆಯಾಗುವ ಚಾನ್ಸ್ ಇರುತಿತ್ತು. ಆರೋಗ್ಯ ಖಾತೆಯೇ ಯಾಕೆ ಅಂತೀರಾ? ಅಂಜಲಿ ಅವರು ಓದಿರುವುದು ಡಾಕ್ಟರಿಕೆ ಮಾರಾಯ್ರೇ. ಅವರ ಕ್ವಾಲಿಫಿಕೇಷನ್ ಎಮ್ ಬಿ ಬಿ ಎಸ್, ಎಮ್ ಎಸ್. ಅಂಜಲಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆಯಾಗಿದ್ದು ಸರ್ಜನ್ ಕೂಡ ಆಗಿದ್ದಾರೆ.

ಓಕೆ, ಅವರ ಬಗ್ಗೆ ಯಾಕೆ ಚರ್ಚಿಸಬೇಕಾಗಿದೆ ಮತ್ತು ಸಾಹಸಪ್ರಿಯೆ ಅಂತ ಯಾಕೆ ಹೇಳಬೇಕಾಗಿದೆ ಎಂದರೆ ಬುಧವಾರದಂದು ಅವರು ತಮ್ಮ ಕ್ಷೇತ್ರ ಖಾನಾಪುರದ ಭಾಗವಾಗಿರುವ ಕಾಂಜಳೆ ಗ್ರಾಮದಲ್ಲಿ ಎತ್ತಿನ ಬಂಡಿ ಓಡಿಸುವ ಸ್ಪರ್ಧೆಗೆ ಚಾಲನೆ ನೀಡಿದರು.

ಗಣ್ಯರು ಒಂದು ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟಿಸಿದ ನಂತರ ಏನು ಮಾಡುತ್ತಾರೆ ಅಂತ ನಿಮಗೆ ಗೊತ್ತಿದೆ. ಅವರನ್ನು ವಿಕೆಟ್ ಗಳ ಮುಂದೆ ನಿಲ್ಲಿಸಿ ಬಾಲನ್ನು ಸುಮ್ಮನೆ ಎಸೆಯಲಾಗುತ್ತದೆ. ಅದನ್ನವರು ಬಾರಿದಸುವ ಪ್ರಯತ್ನ ಮಾಡುತ್ತಾರೆ. ಚೆಂಡು ಅವರು ಹಿಡಿದಿರುವ ಬ್ಯಾಟಿಗೆ ತಾಕುವುದಿಲ್ಲ ಅನ್ನೋದು ನಿಜವಾದರೂ ಅವರು ಬ್ಯಾಟ್ ಬೀಸಿದ್ದರಿಂದ ಟೂರ್ನಮೆಂಟ್ ಉದ್ಘಾಟನೆಯಾದಂತೆ! ಇದು ಅಲಿಖಿತ ನಿಯಮ.

ಆದರೆ ಎತ್ತಿನ ಬಂಡಿ ಓಡಿಸುವ ಸ್ಪರ್ಧೆಯನ್ನು ಅಂಜಲಿ ನಿಂಬಾಳ್ಕರ್ ಅವರು ಹೇಗೆ ಉದ್ಘಾಟಿಸಿದರು ಅಂತ ನೀವೇ ನೋಡಿ. ಹೌದು ಮಾರಾಯ್ರೇ ಖುದ್ದು ಅವರೇ ಎತ್ತಿನ ಬಂಡಿ ಓಡಿಸಿದರು! ಬಂಡಿ ಮತ್ತು ಕಾರು ಓಡಿಸುವ ನಡುವೆ ಬಹಳ ವ್ಯತ್ಯಾಸವಿದೆ, ಆದರೆ ಅಂಜಲಿ ಎರಡರಲ್ಲೂ ಪ್ರವೀಣೆ

ಅದಕ್ಕೇ ಹೇಳಿದ್ದು, ಅಂಜಲಿ ನಿಂಬಾಳ್ಕರ್ ಸಾಹಸಪ್ರಿಯೆ ಅಂತ!

ಇದನ್ನೂ ಓದಿ:   ಮೈಸೂರಿನಲ್ಲಿ ಸೇತುವೆಯಿಂದ ನದಿಗೆ ಹಾರಿದ ಯುವತಿಯ ರಕ್ಷಣೆ! ವಿಡಿಯೋ ವೈರಲ್

Click on your DTH Provider to Add TV9 Kannada