ಮೈಸೂರಿನಲ್ಲಿ ಸೇತುವೆಯಿಂದ ನದಿಗೆ ಹಾರಿದ ಯುವತಿಯ ರಕ್ಷಣೆ! ವಿಡಿಯೋ ವೈರಲ್

ಯುವತಿ ನದಿಗೆ ಹಾರಿದ್ದನ್ನು ಕಂಡ ಸ್ಥಳೀಯ ಯುವಕರು ಕೂಡಲೇ ತೆಪ್ಪದಲ್ಲಿ ಧಾವಿಸಿದ್ದಾರೆ. ಯವಕರ ಸಮಯ ಪ್ರಜ್ಞೆಯಿಂದ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಮೈಸೂರಿನಲ್ಲಿ ಸೇತುವೆಯಿಂದ ನದಿಗೆ ಹಾರಿದ ಯುವತಿಯ ರಕ್ಷಣೆ! ವಿಡಿಯೋ ವೈರಲ್
ತೆಪ್ಪದ ಮೂಲಕ ಯುವಕರು ಯುವತಿಯನ್ನು ದಡಕ್ಕೆ ಸೇರಿಸಿದ್ದಾರೆ

ಮೈಸೂರು: ಸೇತುವೆಯಿಂದ ನದಿಗೆ ಹಾರಿದ ಯುವತಿಯನ್ನು ರಕ್ಷಣೆ ಮಾಡಿದ ಘಟನೆ ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ಹೆಮ್ಮಿಗೆ ಸೇತುವೆ ಬಳಿ ಸಂಭವಿಸಿದೆ. ಯುವತಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ನದಿಯಲ್ಲಿ ಮೀನು ಹಿಡಿಯುತ್ತಿದ್ದ ಯುವಕರು ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಯುವತಿಯನ್ನು ರಕ್ಷಣೆ ಮಾಡಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಯುವತಿ ನದಿಗೆ ಹಾರಿದ್ದನ್ನು ಕಂಡ ಸ್ಥಳೀಯ ಯುವಕರು ಕೂಡಲೇ ತೆಪ್ಪದಲ್ಲಿ ಧಾವಿಸಿದ್ದಾರೆ. ಯವಕರ ಸಮಯ ಪ್ರಜ್ಞೆಯಿಂದ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಯುವತಿಯನ್ನ ತೆಪ್ಪದಲ್ಲಿ ಹಾಕಿಕೊಂಡು ಯುವಕರು ದಡ ಸೇರಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಯುವಕರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಮರ ಬಿದ್ದು ಬೈಕ್ ಸವಾರ ದುರ್ಮರಣ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ನಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ಸವಾರ ಸಾವನ್ನಪ್ಪಿದ್ದಾರೆ. 24 ವರ್ಷದ ಬೈಕ್ ಸವಾರ ನವೀನ್ ಎಂಬಾತ ಮೃತಪಟ್ಟಿದ್ದಾರೆ. ಮೃತ ನವೀನ್ ರಾಮನಗರ ಜಿಲ್ಲೆಯ ಚನ್ನಪಟ್ಟಣದ ನಿವಾಸಿ. ಸ್ನೇಹಿತರೊಂದಿಗೆ ರಾಮನಗರದಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಇದನ್ನೂ ಓದಿ

Viral Video: ಟ್ರಾಫಿಕ್ ಕ್ಯಾಮೆರಾ ಮುಂದೆ ಬಂದು ಪೋಸ್ ಕೊಟ್ಟ ಮುದ್ದಾದ ಗಿಳಿ; ವಿಡಿಯೊ ವೈರಲ್

Murder: ರಾಡ್‌ನಿಂದ ಪತಿ ಹತ್ಯೆಗೈದು ಪೊಲೀಸರ ಮುಂದೆ ಶರಣಾದ 2ನೇ ಪತ್ನಿ, ಕೊಲೆಯ ಹಿಂದೆ ಆಸ್ತಿ ಕಬಳಿಕೆ ಆರೋಪ

Click on your DTH Provider to Add TV9 Kannada