ಮಂಡ್ಯ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಮೋದಿಗೆ ಪತ್ರ; 2 ದಿನದಲ್ಲಿ ನಿರ್ಮಾಣವಾಯ್ತು ಚರಂಡಿ

| Updated By: ವಿವೇಕ ಬಿರಾದಾರ

Updated on: Nov 12, 2023 | 10:46 AM

ಮಂಡ್ಯ ಜಿಲ್ಲೆಯ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಸಾಫ್ಟ್ ವೇರ್ ಇಂಜಿನಿಯರ್ ಚಂದ್ರಶೇಖರ್ ಜುಲೈ 5 ರಂದು ಆನ್​ಲೈನ್ ಮೂಲಕ ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದರು. ದೂರು ಪತ್ರ ಸಲ್ಲಿಸಿದ ಕೆಲವೇ ದಿನಗಳಲ್ಲಿ ಪ್ರಧಾನಿಗಳ ಕಚೇರಿಯಿಂದ ಸ್ಪಂದನೆ ಬಂದಿದೆ. ಮುಂದೇನಾಯ್ತು ಈ ಸ್ಟೋರಿ ಓದಿ..

ಮಂಡ್ಯ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಮೋದಿಗೆ ಪತ್ರ; 2 ದಿನದಲ್ಲಿ ನಿರ್ಮಾಣವಾಯ್ತು ಚರಂಡಿ
ಪತ್ರ (ಎಡಚಿತ್ರ) ಪ್ರಧಾನಿ ಮೋದಿ (ಬಲಚಿತ್ರ)
Follow us on

ಮಂಡ್ಯ ನ.12: ಮಂಡ್ಯ (Mandya) ತಾಲೂಕಿನ ಬೂದನೂರು ಗ್ರಾಮದ ಓರ್ವ ಸಾಫ್ಟ್ ಇಂಜಿನಿಯರ್​ ತಮ್ಮ ಮನೆ ಮುಂದೆ ಚರಂಡಿ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ಪತ್ರ ಬರೆದಿದ್ದಾರೆ. ಬೂದನೂರು ಗ್ರಾಮದ ಸಾಫ್ಟ್ ಇಂಜಿನಿಯರ್ ಚಂದ್ರಶೇಖರ್ ಕೊರೋನಾ ಬಳಿಕ ವರ್ಕ್ ಫ್ರಮ್ ಹೋಂ ಮಾಡುತ್ತಿದ್ದಾರೆ. ಚಂದ್ರಶೇಖರ್ ತಮ್ಮ ಮನೆ ಮುಂದೆ ಚರಂಡಿ ನಿರ್ಮಾಣ ಮಾಡುವಂತೆ ಗ್ರಾಮ ಪಂಚಾಯಿತಿ ಪಿಡಿಓ ಹಾಗೂ ಸದಸ್ಯರಿಗೆ ಹತ್ತಾರು ಬಾರಿ ಮನವಿ ಮಾಡಿಕೊಂಡಿದ್ದರು. ಅಲ್ಲದೆ ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೂ ತಂದಿದ್ದರು. ಆದರೆ ಅಧಿಕಾರಿಗಳು ಇವರ ಮನವಿಗೆ ತಲೆಕೆಡಿಸಿಕೊಂಡಿರಲಿಲ್ಲ.

ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಸಾಫ್ಟ್ ವೇರ್ ಇಂಜಿನಿಯರ್ ಚಂದ್ರಶೇಖರ್ ಜುಲೈ 5 ರಂದು ಆನ್​ಲೈನ್ ಮೂಲಕ ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದರು. ದೂರು ಪತ್ರ ಸಲ್ಲಿಸಿದ ಕೆಲವೇ ದಿನಗಳಲ್ಲಿ ಪ್ರಧಾನಿಗಳ ಕಚೇರಿಯಿಂದ ಸ್ಪಂದನೆ ಬಂದಿದ್ದು, ಸೂಕ್ತ ಕ್ರಮವಹಿಸುವಂತೆ ಕರ್ನಾಟಕ ಸರ್ಕಾರದ ಅಧೀನ ಕಾರ್ಯದರ್ಶಿಗೆ ತಾಕೀತು ಮಾಡಲಾಗಿತ್ತು.

ಇದನ್ನೂ ಓದಿ: ಇನ್ಸ್​ಪೆಕ್ಟರ್ ವಿರುದ್ಧ ಸುಳ್ಳು ಆರೋಪ ಮಾಡಿ ರಾಷ್ಟ್ರಪತಿ, ಪ್ರಧಾನಿಗೆ ಪತ್ರ: ಇಬ್ಬರು ಕಾನ್ಸ್​ಟೇಬಲ್ ಸಸ್ಪೆಂಡ್​

ಪ್ರಧಾನಿ ಕಾರ್ಯಾಲಯದಿಂದ ಸೂಚನೆ ಬರುತ್ತಿದ್ದಂತೆ ಎಚ್ಚೆತ್ತ ಕರ್ನಾಟಕ ಸರ್ಕಾರದ ಅಧೀನ ಕಾರ್ಯದರ್ಶಿ ಸುಶೀಲ ಅವರು, “ತಕ್ಷಣ ಸ್ವಚ್ಛ ಭಾರತ್‌ ಮಿಷನ್ ಯೋಜನೆಯಡಿ ಚರಂಡಿ ನಿರ್ಮಿಸಿ. ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥಪಡಿಸುವಂತೆ” ಮಂಡ್ಯ ತಾಲೂಕು ಪಂಚಾಯಿತಿ ಸಿಇಒಗೆ ಪತ್ರ ಬರೆದಿದ್ದರು.

ಅಧೀನ ಕಾರ್ಯದರ್ಶಿ ರಿಂದ ಪತ್ರ ಬರುತ್ತಿದ್ದಂತೆ ನವೆಂಬರ್ 9ರಿಂದ ಚರಂಡಿ ಕಾಮಗಾರಿ ಆರಂಭವಾಗಿದ್ದು, ಬೂದನೂರು ಗ್ರಾಮ ಪಂಚಾಯಿತಿ ಎರಡೇ ದಿನದಲ್ಲಿ ಕಾಮಗಾರಿ ಪೂರ್ಣಗೊಳಿಸಿದೆ. ಆದರೆ ಅಧಿಕಾರಿಗಳು ಸಂಪೂರ್ಣ ಚರಂಡಿ ನಿರ್ಮಾಣ ಮಾಡದೆ ಅರ್ಧಂಬರ್ಧ ಕಾಮಗಾರಿ‌ ಮಾಡಿ ಕೈತೊಳೆದುಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:36 am, Sun, 12 November 23