ಮಂಡ್ಯ ನ.10: ಮದ್ದೂರು (Madduru) ಪಟ್ಟಣ ಪೊಲೀಸ್ (Police) ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತೆ (17) ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ. ಅತ್ಯಾಚಾರವೆಸಗಿದ ಮೂವರು ಕೂಡ ಬಾಲಕರಾಗಿದ್ದಾರೆ. ಮೂವರು ಸಂತ್ರಸ್ತೆಯನ್ನು ಪುಸಲಾಯಿಸಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಇನ್ನು ಕಿರಾತಕರು ಅತ್ಯಾಚಾರವೆಸಗಿದನ್ನು ವಿಡಿಯೋ ಮಾಡಿಕೊಂಡು ವೈರಲ್ ಮಾಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತೆ ತಂದೆ ದೂರಿನ ಆಧಾರದ ಮೇಲೆ ಪೊಲೀಸರು ಮೂವರನ್ನು ಬಂಧಸಿದ್ದಾರೆ. ಮೂವರು ಬಾಲಕರಾಗಿದ್ದು, ಮದ್ದೂರು ಮೂಲದವರು ಎಂದು ತಿಳಿದುಬಂದಿದೆ.
ಅತ್ಯಾಚಾರವೆಸಗಿದ ಮೂವರಲ್ಲಿ ಓರ್ವ, ಸಂತ್ರಸ್ತೆಯನ್ನು ಮೈಸೂರಿನ ಯುವ ದಸರಾದಲ್ಲಿ ಪರಿಚಯಸಿಕೊಂಡಿದ್ದನು. ಬಳಿಕ ಬಾಲಕ, ಸಂಸತ್ರಸ್ತೆಯೊಂದಿಗೆ ಸಲುಗೆಯಿಂದ ವರ್ತಿಸಲು ಆರಂಭಿಸಿದನು. ಅಲ್ಲದೆ ಪ್ರೀತಿಸುತ್ತಿರುವುದಾಗಿ ನಂಬಿಸಿದನು. ಆನಂತರ ನವೆಂಬರ್ 4 ರಂದು ಮದ್ದೂರಿನ ಲಾಡ್ಜ್ ಕರೆದುಕೊಂಡು ಹೋಗಿ ಬಾಲಕ ಮತ್ತು ಆತನ ಸ್ನೇಹಿತರು ಸಾಮೂಹಿಕ ಆತ್ಯಾಚಾರವೆಸಗಿದ್ದಾರೆ.
ಇದನ್ನೂ ಓದಿ: ಮಹಿಳೆಯ ಮನೆಯ ದರೋಡೆ ಮಾಡಿ, ಕೆಲಸದಾಕೆ ಮೇಲೆ ಸಾಮೂಹಿಕ ಅತ್ಯಾಚಾರ, ಐವರು ಸೆಕ್ಯುರಿಟಿ ಗಾರ್ಡ್ಗಳ ಬಂಧನ
ಈ ವೇಳೆ ಆರೋಪಿಗಳು ಆತ್ಯಾಚಾರದ ದೃಶ್ಯವನ್ನು ಮೊಬೈಲ್ನಲ್ಲಿ ಸರೆಹಿಡಿದಿದ್ದಾರೆ. ಬಳಿಕ ಅಪ್ರಾಪ್ತೆ ಮೊಬೈಲ್ಗೆ ವಿಡಿಯೋ ಕಳುಹಿಸಿ ಕರೆದಾಗೆಲ್ಲ ಬರುವಂತೆ ಬ್ಯ್ಲಾಕ್ಮೇಲ್ ಮಾಡಿದ್ದಾರೆ. ಈ ಬಗ್ಗೆ ಸಂತ್ರಸ್ತೆ ಪೋಷಕರ ಬಳಿ ಹೇಳಿಕೊಂಡಿದ್ದಾಳೆ. ಪೋಷಕರು ಮದ್ದೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಆತ್ಯಾಚಾರ, ಪೋಕ್ಸೊ, ಆಟ್ರಾಸಿಟಿ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ