ಗೆಳೆಯನನ್ನೇ ಕೊಲೆಗೈದ ಯುವಕ; ದೂರದ ಊರಿನಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನು ಬಂಧಿಸಿದ ಮಂಡ್ಯ ಪೊಲೀಸರು

| Updated By: Rakesh Nayak Manchi

Updated on: Nov 13, 2023 | 7:16 PM

ಸ್ನೇಹಿತರ ನಡುವೆ ಹಣಕಾಸಿನ ವಿಚಾರವಾಗಿ ಕಿರಿಕ್ ನಡೆದು ಅದು ಕೊಲೆಯಲ್ಲಿ ಅಂತ್ಯವಾಗಿರೊ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ ಎಮ್ ದೊಡ್ಡಿ ಗ್ರಾಮದ ಹೊರವಲಯದ ಜಮೀನಿನಲ್ಲಿ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡ ತನಿಖೆ ನಡೆಸುತ್ತಿದ್ದ ಮಂಡ್ಯದ ಕೆಎಮ್ ದೊಡ್ಡಿ ಠಾಣಾ ಪೊಲೀಸರು, ಆರೋಪಿಯನ್ನು ಯಾದಗಿರಿ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.

ಗೆಳೆಯನನ್ನೇ ಕೊಲೆಗೈದ ಯುವಕ; ದೂರದ ಊರಿನಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನು ಬಂಧಿಸಿದ ಮಂಡ್ಯ ಪೊಲೀಸರು
ಕೊಲೆಯಾದ ಮಂಟೇಸ್ವಾಮಿ (ಎಡ ಚಿತ್ರ) ಮತ್ತು ಆರೋಪಿ ರವಿ (ಬಲ ಚಿತ್ರ)
Follow us on

ಮಂಡ್ಯ, ನ.13: ಸ್ನೇಹಿತರ ನಡುವೆ ಹಣಕಾಸಿನ ವಿಚಾರವಾಗಿ ಕಿರಿಕ್ ನಡೆದು ಅದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಂಡ್ಯ (Mandya) ಜಿಲ್ಲೆ ಮದ್ದೂರು ತಾಲೂಕಿನ ಕೆ ಎಮ್ ದೊಡ್ಡಿ ಗ್ರಾಮದ ಹೊರವಲಯದ ಜಮೀನಿನಲ್ಲಿ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡ ತನಿಖೆ ನಡೆಸುತ್ತಿದ್ದ ಮಂಡ್ಯದ ಕೆಎಮ್ ದೊಡ್ಡಿ ಠಾಣಾ ಪೊಲೀಸರು, ಆರೋಪಿಯನ್ನು ಯಾದಗಿರಿ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.

ಮದ್ದೂರು ತಾಲೂಕಿನ ಯಲದಹಳ್ಳಿ ಗ್ರಾಮದ ನಿವಾಸಿ ಮಂಟೇಸ್ವಾಮಿ (32) ನವೆಂಬರ್ 6 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ತನ್ನ ಸ್ನೇಹಿತ ರವಿ ಎಂಬಾತನ ಜೊತೆ ಹಣಕಾಸಿನ ವಿಚಾರವಾಗಿ ಮಾತುಕತೆಗೆಂದು ಹೋಗಿದ್ದನು. ಇಬ್ಬರು ಸೇರಿ ಕೆಎಮ್ ದೊಡ್ಡಿ ಗ್ರಾಮದ ಹೊರ ವಲಯದಲ್ಲಿ ಮೊದಲಿಗೆ ಪಾರ್ಟಿ ಕೂಡ ಮಾಡಿದ್ದರು. ನಂತರ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ರವಿ ಮಂಟೆಸ್ವಾಮಿ ಹೊಟ್ಟೆಗೆ ಚಾಕುನಿಂದ ಚುಚ್ಚಿದ್ದನು. ಪರಿಣಾಮ ಮಂಟೇಸ್ವಾಮಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆರೋಪಿ ರವಿ ಪರಾರಿಯಾಗಿದ್ದನು.

ಇತ್ತ, ರಾತ್ರಿಯಾದರೂ ಪತಿ ಬಂದಿಲ್ಲ, ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಪತ್ನಿ ಲಾವಣ್ಯ ತನ್ನ ಸಂಬಂಧಿಕರಿಗೆ ತಿಳಿಸಿದ್ದಾರೆ. ಹೀಗಾಗಿ ಸಂಬಂಧಿಕರು ಬೆಳಗ್ಗೆ ಹೋಗಿ ನೋಡಿದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ದೊಡ್ಡಬಳ್ಳಾಪುರ: ಫೋಟೋಶೂಟ್ ಮಾಡುತ್ತಿದ್ದ ಯುವಕನನ್ನು ಕೊಲೆ ಮಾಡಿದ ದುಷ್ಕರ್ಮಿಗಳು

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಕೆಎಮ್ ದೊಡ್ಡಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಆರೋಪಿಗಳ ಬಂಧನಕ್ಕೆ ತನಿಖೆ ಕೈಗೊಂಡಿದ್ದರು. ಅದರಂತೆ ಆರೋಪಿಯನ್ನು ಯಾದಗಿರಿ ಜಿಲ್ಲೆ ದರ್ಶನಪುರದಲ್ಲಿ ಬಂಧಿಸಿದ್ದಾರೆ.

ಮಂಟೇಸ್ವಾಮಿ ಹಾಗೂ ಆರೋಪಿ ಇಬ್ಬರು ಕೂಡ ಎಮ್​ಕೆ ದೊಡ್ಡಿಯಲ್ಲಿ ಬಾರ್ ಬೆಂಡಿಗ್ ಕೆಲಸ ಮಾಡುತ್ತಿದ್ದು, ಇಬ್ಬರು ಕೂಡ ಸಾಕಷ್ಟು ವರ್ಷದಿಂದ ಸ್ನೇಹಿತರಾಗಿದ್ದರು. ಆಗಾಗ ಹಣಕಾಸಿನ ವ್ಯವಹಾರ ಕೂಡ ನಡೆದಿತ್ತು. ಇನ್ನು ಕೆಲ ದಿನಗಳ ಕೆಳಗೆ ಆರೋಪಿ ರವಿ ಎಂಬಾತನಿಂತ ಎರಡು ಲಕ್ಷ ರೂ.ವನ್ನು ಮಂಟೇಸ್ವಾಮಿ ಪಡೆದುಕೊಂಡಿದ್ದ.

ಎಷ್ಟು ಕೇಳಿದರೂ ಮಂಟೇಸ್ವಾಮಿ ವಾಪಾಸ್ ಕೊಟ್ಟಿರಲಿಲ್ಲ. ಇನ್ನು ಮಂಡ್ಯದಲ್ಲಿ ಆರೋಪಿ ರವಿ ಮನೆಯನ್ನ ಸಹ ಕಟ್ಟುತ್ತಿದ್ದಾನೆ. ಹೀಗಾಗಿ ಕೊಟ್ಟ ಹಣಕ್ಕಾಗಿ ಸಾಕಷ್ಟು ಪಿಡಿಸುತ್ತಿದ್ದನು. ಹೀಗಾಗಿ 20 ಸಾವಿರ ಹಣವನ್ನ ವಾಪಾಸ್ ಕೊಟ್ಟಿರುತ್ತಾನೆ. ಉಳಿದ ಹಣಕ್ಕಾಗಿ ಮಾತಿನ ಚಕಮಕಿ ಕೂಡ ನಡೆದಿತ್ತು.

ಮತ್ತೆ ಹಣದ ವಿಚಾರವಾಗಿ ಮಾತುಕತೆಗೆಂದು ಗ್ರಾಮದ ಹೊರವಲಯದ ಜಯಣ್ಣ ಎಂಬುವವರ ಜಮೀನಿಗೆ ಕರೆದುಕೊಂಡು ಚಾಕುವಿನಿಂದ ಚುಚ್ಚಿ ರವಿ ಎಸ್ಕೇಪ್ ಆಗಿದ್ದ. ಒಟ್ಟಾರೆಯಾಗಿ ಹಣಕಾಸಿನ ವಿಚಾರವಾಗಿ ಸ್ನೇಹಿತರ ನಡುವೆ ವೈಮನಸ್ಸು ಏರ್ಪಟ್ಟು ಒಬ್ಬ ಸ್ನೇಹಿತನ ಕೊಲೆಯಲ್ಲಿ ಅಂತ್ಯವಾಗಿರುವುದು ವಿಪರ್ಯಾಸ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:12 pm, Mon, 13 November 23