ದೊಡ್ಡಬಳ್ಳಾಪುರ: ಫೋಟೋಶೂಟ್ ಮಾಡುತ್ತಿದ್ದ ಯುವಕನನ್ನು ಕೊಲೆ ಮಾಡಿದ ದುಷ್ಕರ್ಮಿಗಳು

ದೀಪಾವಳಿ ಹಬ್ಬದ ಪ್ರಯುಕ್ತ ದೊಡ್ಡಬಳ್ಳಾಪುರ ತಾಲೂಕಿನ ರಾಮೇಶ್ವರ ಗ್ರಾಮದ ಡಾಬಾದ ಮುಂದೆ ಸೀನರಿ ಹಾಕಲಾಗಿತ್ತು. ಇಲ್ಲಿ ಫೋಟೋಶೂಟ್ ಮಾಡುತ್ತಿದ್ದ ಯುವಕನನ್ನು ನಾಲ್ವರು ಯುವಕರು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ದೊಡ್ಡಬೆಳವಂಗಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದೊಡ್ಡಬಳ್ಳಾಪುರ: ಫೋಟೋಶೂಟ್ ಮಾಡುತ್ತಿದ್ದ ಯುವಕನನ್ನು ಕೊಲೆ ಮಾಡಿದ ದುಷ್ಕರ್ಮಿಗಳು
ಪ್ರಾತಿನಿಧಿಕ ಚಿತ್ರ
Follow us
ನವೀನ್ ಕುಮಾರ್ ಟಿ
| Updated By: Rakesh Nayak Manchi

Updated on: Nov 12, 2023 | 9:02 PM

ದೇವನಹಳ್ಳಿ, ನ.12: ಫೋಟೋಶೂಟ್ ಮಾಡುತ್ತಿದ್ದ ಯುವಕನನ್ನು ನಾಲ್ವರು ಯುವಕರು ಹತ್ಯೆ ಮಾಡಿದ ಘಟನೆ ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ರಾಮೇಶ್ವರ ಗ್ರಾಮದಲ್ಲಿ ನಡೆದಿದೆ. ಕಚೇರಿಪಾಳ್ಯ ನಿವಾಸಿ ಸೂರ್ಯ (22) ಕೊಲೆಯಾದ ದುರ್ದೈವಿ.

ದೀಪಾವಳಿ ಹಬ್ಬದ ಪ್ರಯುಕ್ತ ರಾಮೇಶ್ವರ ಗ್ರಾಮದ ಡಾಬಾದ ಸೀನರಿ ಹಾಕಲಾಗಿತ್ತು. ಇದರ ಮುಂದೆ ನಿಂತು ಸೂರ್ಯ ತನ್ನ ಸ್ನೇಹಿತರಿಂದ ಫೋಟೋ ತೆಗೆಸಿಕೊಳ್ಳುತ್ತಿದ್ದನು. ಈ ವೇಳೆ ನಾಲ್ವರು ಅಪರಿಚಿತ ಯುವಕರು ಬಂದು ಸೂರ್ಯನ ಜೊತೆ ಕಿರಿಕ್ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಡಿಜೆಯಲ್ಲಿ ಕನ್ನಡ, ತಮಿಳು ಹಾಡು ಹಾಕಲು ಸ್ನೇಹಿತರ ಮಧ್ಯೆ ವಾಗ್ವಾದ, ಕೊಲೆಯಲ್ಲಿ ಅಂತ್ಯ

ಸೂರ್ಯನ ಬಳಿ ಇದ್ದ ಕ್ಯಾಮರಾ ಕಿತ್ತುಕೊಳ್ಳಲು ಯತ್ನಿಸಿದಾಗ ವಿರೋಧ ವ್ಯಕ್ತಪಡಿಸಿದ್ದಾನೆ. ಹೀಗಾಗಿ ಸೂರ್ಯನನ್ನು ದುಷ್ಕರ್ಮಿಗಳು ಹತ್ಯೆಗೈದು ಸ್ಥಳದಿಂದ ಪರಾರಿಯಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ದೊಡ್ಡಬೆಳವಂಗಲ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ