ಬೆಂಗಳೂರು: ಡಿಜೆಯಲ್ಲಿ ಕನ್ನಡ, ತಮಿಳು ಹಾಡು ಹಾಕಲು ಸ್ನೇಹಿತರ ಮಧ್ಯೆ ವಾಗ್ವಾದ, ಕೊಲೆಯಲ್ಲಿ ಅಂತ್ಯ

ಬಾಣಸವಾಡಿ ಬಳಿ ಜಾತ್ರೆ ವೇಳೆ ಸ್ನೇಹಿತರ ನಡುವೆ ಜಗಳ ನಡೆದಿದೆ. ಜಾತ್ರೆಯಲ್ಲಿ ಕನ್ನಡ ಮತ್ತು ತಮಿಳು ಹಾಡುಗಳ ಬಗ್ಗೆ ಇಬ್ಬರೂ ಜಗಳವಾಡಿದ್ದಾರೆ. ಜಗಳದ ವೇಳೆ ಪ್ರವೀಣ್ ತನ್ನ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದಾರೆ. ಹೆಲ್ಮೆಟ್‌ನಿಂದ ಪ್ರವೀಣ್ ತಲೆಗೆ ಹಲ್ಲೆ ನಡೆಸಿದ್ದಾರೆ. ಪರಿಣಾಮವಾಗಿ ಪ್ರವೀಣ್ ತಲೆಗೆ ಪೆಟ್ಟಾಗಿದ್ದು, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ.

ಬೆಂಗಳೂರು: ಡಿಜೆಯಲ್ಲಿ ಕನ್ನಡ, ತಮಿಳು ಹಾಡು ಹಾಕಲು ಸ್ನೇಹಿತರ ಮಧ್ಯೆ ವಾಗ್ವಾದ, ಕೊಲೆಯಲ್ಲಿ ಅಂತ್ಯ
ಮೃತ ಪ್ರವೀಣ್
Follow us
TV9 Web
| Updated By: Ganapathi Sharma

Updated on: Nov 10, 2023 | 5:59 PM

ಬೆಂಗಳೂರು, ನವೆಂಬರ್ 10: ಬೆಂಗಳೂರಿನಲ್ಲಿ ನಡೆದ ಜಾತ್ರೆಯೊಂದರಲ್ಲಿ ಕನ್ನಡ ಮತ್ತು ತಮಿಳು ಹಾಡುಗಳನ್ನು ಹಾಕುವ (Kannada vs Tamil songs) ವಿಚಾರವಾಗಿ ಸ್ನೇಹಿತರ ನಡುವೆ ನಡೆದ ಜಗಳ ಕೊಲೆಯಲ್ಲಿ (Murder) ಅಂತ್ಯವಾಗಿದೆ. ಬೆಂಗಳೂರಿನ ಲಿಂಗರಾಜಪುರ ಜಾತ್ರೆಯಲ್ಲಿ ಡಿಜೆಯಲ್ಲಿ ಯಾವ ಹಾಡು ಹಾಕಬೇಕು ಎಂದು ಜಗಳವಾಡಿದ ಹಳೇ ಬಾಗಲೂರು ಲೇಔಟ್ ನಿವಾಸಿ ಪ್ರವೀಣ್ ಎಂಬವರ ಮೇಲೆ ಅವರ ಸ್ನೇಹಿತ ಹೆಲ್ಮೆಟ್‌ನಿಂದ ಹಲ್ಲೆ ನಡೆಸಿದ್ದಾರೆ. ದಾಳಿಯ ವೇಳೆ ಪ್ರವೀಣ್ ಅವರ ತಲೆಗೆ ತೀವ್ರ ಪೆಟ್ಟಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಬಾಣಸವಾಡಿ ಬಳಿ ಜಾತ್ರೆ ವೇಳೆ ಸ್ನೇಹಿತರ ನಡುವೆ ಜಗಳ ನಡೆದಿದೆ. ಜಾತ್ರೆಯಲ್ಲಿ ಕನ್ನಡ ಮತ್ತು ತಮಿಳು ಹಾಡುಗಳ ಬಗ್ಗೆ ಇಬ್ಬರೂ ಜಗಳವಾಡಿದ್ದಾರೆ. ಜಗಳದ ವೇಳೆ ಪ್ರವೀಣ್ ತನ್ನ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದಾರೆ. ಹೆಲ್ಮೆಟ್‌ನಿಂದ ಪ್ರವೀಣ್ ತಲೆಗೆ ಹಲ್ಲೆ ನಡೆಸಿದ್ದಾರೆ. ಪರಿಣಾಮವಾಗಿ ಪ್ರವೀಣ್ ತಲೆಗೆ ಪೆಟ್ಟಾಗಿದ್ದು, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಂದರ್, ಆರ್ಮುಗಂ ಮತ್ತು ಪ್ರಭು ಅವರನ್ನು ಬಂಧಿಸಲಾಗಿದೆ ಎಂದು ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಡಿ ದೇವರಾಜ ತಿಳಿಸಿದ್ದಾರೆ.

ಇದನ್ನೂ ಓದಿ: ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗಿದ್ದ ಗ್ಯಾಂಗ್​ಸ್ಟರ್​ನನ್ನು ಹೊಡೆದು ಕೊಂದ ವೈದ್ಯರು

ಮೃತ ಪ್ರವೀಣ್ ನಗರದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಪ್ರವೀಣ್ ಈ ಹಿಂದೆಯೂ ಹಲವು ಬಾರಿ ತನ್ನ ಸ್ನೇಹಿತರ ಜತೆ ಜಗಳವಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 2021 ರಲ್ಲಿ, ಅವರು ಟ್ರಾಫಿಕ್ ಪೊಲೀಸರೊಂದಿಗೆ ಜಗಳವಾಡಿದ್ದರು ಮತ್ತು ಆ ಬಗ್ಗೆ ಎಫ್‌ಐಆರ್ ದಾಖಲಿಸಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ