ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗಿದ್ದ ಗ್ಯಾಂಗ್​ಸ್ಟರ್​ನನ್ನು ಹೊಡೆದು ಕೊಂದ ವೈದ್ಯರು

ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ಹೋಗಿದ್ದ ಗ್ಯಾಂಗ್​ಸ್ಟರ್​ನನ್ನು ವೈದ್ಯರು ಹಾಗೂ ಆಸ್ಪತ್ರೆಯ ಇತರೆ ಸಿಬ್ಬಂದಿ ಸೇರಿ ಹೊಡೆದು ಕೊಂದಿರುವ ಘಟನೆ ಬಿಹಾರದ ಬೇಗುಸರಾಯ್​ನಲ್ಲಿ ನಡೆದಿದೆ. ಘಟನೆಯ ನಂತರ ಆ ಗ್ಯಾಂಗ್​ಸ್ಟರ್​ನ ಅನುಯಾಯಿಗಳು ಆಸ್ಪತ್ರೆ ಹಾಗೂ ವೈದ್ಯರಿಗೆ ಸಂಬಂಧಿಸಿದ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದಾರೆ.

ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗಿದ್ದ ಗ್ಯಾಂಗ್​ಸ್ಟರ್​ನನ್ನು ಹೊಡೆದು ಕೊಂದ ವೈದ್ಯರು
ಸಾವು
Follow us
ನಯನಾ ರಾಜೀವ್
|

Updated on: Nov 10, 2023 | 11:20 AM

ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ಹೋಗಿದ್ದ ಗ್ಯಾಂಗ್​ಸ್ಟರ್​ನನ್ನು ವೈದ್ಯರು ಹಾಗೂ ಆಸ್ಪತ್ರೆಯ ಇತರೆ ಸಿಬ್ಬಂದಿ ಸೇರಿ ಹೊಡೆದು ಕೊಂದಿರುವ ಘಟನೆ ಬಿಹಾರದ ಬೇಗುಸರಾಯ್​ನಲ್ಲಿ ನಡೆದಿದೆ. ಘಟನೆಯ ನಂತರ ಆ ಗ್ಯಾಂಗ್​ಸ್ಟರ್​ನ ಅನುಯಾಯಿಗಳು ಆಸ್ಪತ್ರೆ ಹಾಗೂ ವೈದ್ಯರಿಗೆ ಸಂಬಂಧಿಸಿದ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದಾರೆ.

ಗ್ಯಾಂಗ್​ಸ್ಟರ್ ಚಂದನ್ ಕುಮಾರ್ ಚಿಕಿತ್ಸೆಗೆಂದು ರೂಪನಗರ ಗ್ರಾಮದ ರಿಯಾ ಆಸ್ಪತ್ರೆಗೆ ಹೋಗಿದ್ದ, ವೈದ್ಯರೊಂದಿಗೆ ವಾಗ್ವಾದಕ್ಕಿಳಿದ ಬಳಿಕ ಆತನನ್ನು ವೈದ್ಯರು ಹಾಗೂ ಆಸ್ಪತ್ರೆಯ ಇತರೆ ಸಿಬ್ಬಂದಿ ಸೇರಿ ಹೊಡೆದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.

ವೈದ್ಯರು ಮತ್ತು ಇತರ ಸಿಬ್ಬಂದಿ ಹತ್ಯೆಗೆ ಸಂಚು ರೂಪಿಸಿದ್ದರು ಮತ್ತು ಗ್ಯಾಂಗ್​ಸ್ಟರ್​ನನ್ನು ಕೊಲ್ಲಲು ಹರಿತವಾದ ವಸ್ತುಗಳನ್ನು ಬಳಸಿದ್ದರು, ಆರೋಪಿ ವೈದ್ಯನನ್ನು ಅಜಿತ್ ಪಾಸ್ವಾನ್ ಎಂದು ಗುರುತಿಸಲಾಗಿದೆ.

ಮತ್ತಷ್ಟು ಓದಿ: ಬೆಳಗಾವಿ: ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದು ಸೀರೆ ಕಳ್ಳತನ; ಎಂಟು ಮಂದಿ ಅರೆಸ್ಟ್

ಆತನ ಬೆಂಬಲಿಗರು ಆಸ್ಪತ್ರೆ ಮತ್ತು ಗುಡಿಸಲುಗಳಿಗೆ ಬೆಂಕಿ ಹಚ್ಚಿದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಗ್ಯಾಂಗ್​ಸ್ಟರ್ ಚಿಕಿತ್ಸೆಗೆಂದು ಆಸ್ಪತ್ರೆಗೆ ಭೇಟಿ ನೀಡಿದ್ದ, ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದರು, ಆಗ ಇಬ್ಬರ ನಡುವೆ ವಾಗ್ವಾದ ನಡೆದಿದೆ, ಅದು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಎಸ್​ಪಿ ಯೋಗೇಂದ್ರ ಕುಮಾರ್ ತಿಳಿಸಿದ್ದಾರೆ.

ಡಿಎಸ್​ಪಿ ಅಮಿತ್ ಕುಮಾರ್ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದ್ದು, ಘಟನೆಯಲ್ಲಿ ಭಾಗಿಯಾಗಿರುವ ವೈದ್ಯರು ಹಾಗೂ ಕಾಂಪೌಂಡರ್​ನನ್ನು ಬಂಧಿಸಲು ಹುಡುಕಾಟ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ