ಶಿವಮೊಗ್ಗ: ಶಿಕಾರಿಪುರ ಬಿಜೆಪಿ ಅಧ್ಯಕ್ಷನಿಂದ ಮಹಿಳೆಯ ಮೇಲೆ ಹಲ್ಲೆಗೆ ಯತ್ನ, ಮೊಬೈಲ್​ನಲ್ಲಿ ದೃಶ್ಯ ಸೆರೆ

ಶಿಕಾರಿಪುರ ತಾಲೂಕಿನ ಬಿಜೆಪಿ ಅಧ್ಯಕ್ಷ ಹಾಗೂ ಅರಶಿಣಗೆರೆ ಅಧ್ಯಕ್ಷ ವೀರೇಂದ್ರ ಪಾಟೀಲ್ ಅವರು ಜಾಗದ ವಿಚಾರವಾಗಿ ಮಹಿಳೆ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಬಗ್ಗೆ ಎಫ್​ಐಆರ್ ದಾಖಲಾಗಿದೆ. ಗುಂಪು ಕಟ್ಟಿಕೊಂಡು ಮನೆಗೆ ನುಗ್ಗಿ ಹಲ್ಲೆಗೆ ಯತ್ನಿಸಿದ್ದು, ಇದರ ದೃಶ್ಯವನ್ನು ಮಹಿಳೆಯ ಕುಟುಂಬಸ್ಥರು ಸೆರೆ ಹಿಡಿದಿದ್ದಾರೆ.

Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: Rakesh Nayak Manchi

Updated on:Nov 10, 2023 | 12:19 PM

ಶಿವಮೊಗ್ಗ, ನ.10: ಜಿಲ್ಲೆಯ ಶಿಕಾರಿಪುರ ತಾಲೂಕಿನ ಬಿಜೆಪಿ (BJP) ಅಧ್ಯಕ್ಷ ಹಾಗೂ ಅರಶಿಣಗೆರೆ ಅಧ್ಯಕ್ಷ ವೀರೇಂದ್ರ ಪಾಟೀಲ್ ಅವರು ಜಾಗದ ವಿಚಾರವಾಗಿ ಮಹಿಳೆ ಮೇಲೆ ಹಲ್ಲೆ (Assault) ನಡೆಸಲು ಯತ್ನಿಸಿದ ಘಟನೆ ಅರಿಶಿಣಗಟ್ಟದಲ್ಲಿ ನಡೆದಿದೆ. ಶರ್ಟ್ ಹರಿದ ಸ್ಥಿತಿಯಲ್ಲಿ ಮಹಿಳೆ ಮೇಲೆ ಹಲ್ಲೆಗೆ ಯತ್ನಿಸಿದ ದೃಶ್ಯವನ್ನು ಮಹಿಳೆಯ ಕುಟುಂಬಸ್ಥರು ಮೊಬೈಲ್​ನಲ್ಲಿ ಸೆರೆ ಹಿಡಿದ್ದಾರೆ.

ಗುಂಪು ಕಟ್ಟಿಕೊಂಡು ಶೋಭಾ ಹಾಗೂ ಪತಿ ರಾಮು ಎಂಬುವರ ಮನೆಗೆ ನುಗ್ಗಿದ ವೀರೇಂದ್ರ ಪಾಟೀಲ್, ಮಹಿಳೆ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಹಲವು ಬಾರಿ ಈ ರೀತಿ ಗಲಾಟೆ ಮಾಡಿರುವುದಾಗಿ ಕುಟುಂಬಸ್ಥರು ಅರೋಪಿಸುತ್ತಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ ಡಿಸಿಸಿ ಬ್ಯಾಂಕ್​ ‌ಹಗರಣದಲ್ಲಿ ಎಂಪಿ ಪಾತ್ರವೂ ಇದೆ: ಬಿವೈ ರಾಘವೇಂದ್ರ ವಿರುದ್ಧ ಬೇಳೂರು ಗಂಭೀರ ಆರೋಪ

ವಿಡಿಯೋದಲ್ಲಿ ಇರುವಂತೆ, ವೀರೇಂದ್ರ ಪಾಟೀಲ್ ಅವರು ಮಹಿಳೆ ಶೋಭಾ ಅವರ ಕುತ್ತಿಗೆ, ಕೈ ಹಿಡಿದು ಅವಾಜ್ ಹಾಕಿದ್ದನ್ನು ಕೂಡ ಕಾಣಬಹುದು. ಅಲ್ಲದೆ, ವೀರೇಂದ್ರ ಮತ್ತು ಮಹಿಳೆ ನಡುವಿನ ಹೊಡೆದಾಟದ ವೇಳೆ ಮಹಿಳೆಯ ಮಗಳು ಕಿರುಚಾಡುವುದನ್ನು ಕೇಳಬಹುದು ಮತ್ತು ಅಮ್ಮನ ಬಟ್ಟೆ ಹರಿಯುತ್ತಿದ್ದಾರೆ ಎಂದು ಹೇಳುವುದನ್ನು ಕೇಳಬಹುದು.

ಚುನಾವಣೆಗೆ ಕೊಟ್ಟ ಹಣ ವಾಪಸ್ ಕೊಟ್ಟಿಲ್ಲವೆಂದು ಹಲ್ಲೆ

ರಾಯಚೂರು: ಚುನಾವಣೆಗೆ ಕೊಟ್ಟ ಹಣ ವಾಪಸ್ ಕೊಟ್ಟಿಲ್ಲವೆಂದು ಜೆಡಿಎಸ್ ಶಾಸಕಿ ಕರೆಮ್ಮ ಜಿ ನಾಯಕ್ ಬೆಂಬಲಿಗರು ಹಲ್ಲೆ ನಡೆಸಿದ ಆರೋಪ ಜಿಲ್ಲೆಯ ದೇವದುರ್ಗ ತಾಲೂಕಿನ ಆಲ್ಕೋಡ್ ಗ್ರಾಮದಲ್ಲಿ ಕೇಳಿಬಂದಿದೆ. ಚನ್ನಪ್ಪಗೌಡ ಎಂಬಾತನ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಘಟನೆ ಅಕ್ಟೋಬರ್ 1 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಾಸಕಿ ಕರೆಮ್ಮ ನಾಯಕ್ ಬೆಂಬಲಿಗ ವಿಶ್ವನಾಥ ಪಾಟೀಲ್ ಅನ್ನೋರಿಂದ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಚಡ್ಡಿ, ಬನಿಯನ್​ನಲ್ಲೇ ಹೊರಗೆ ಎಳೆದೊಯ್ದು ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದೆ.

ಚುನಾವಣೆ ವೇಳೆ 3 ಲಕ್ಷ 20 ಹಣವನ್ನು ಶಾಸಕಿ ಕರೆಮ್ಮಳ ಪರವಾಗಿ ಚುನಾವಣೆ ಖರ್ಚಿಗೆಂದು ಚನ್ನಪ್ಪಗೌಡಗೆ ವಿಶ್ವನಾಥ ಪಾಟೀಲ್ ಕೊಟ್ಟಿದ್ದ. ಆಲ್ಕೋಡ್ ಪಂಚಾಯತ್ ವ್ಯಾಪ್ತಿಯಲ್ಲಿ ಖರ್ಚು ಮಾಡುವ ಸಲುವಾಗಿ ಹಣ ನೀಡಲಾಗಿತ್ತು ಎನ್ನಲಾಗಿದೆ. ಎಲೆಕ್ಷನ್ ಬಳಿಕ ಕೊಟ್ಟ ಹಣವನ್ನು ಬಡ್ಡಿ ಸಮೇತ ವಾಪಸ್ ಕೊಡುವಂತೆ ಕ್ಯಾತೆ ತೆಗೆದಿದ್ದಾನೆ. ಅಲ್ಲದೆ, ಹಣ ನೀಡುವುದು ತಡವಾಗಿದ್ದಕ್ಕೆ ಮನೆಗೆ ಜನರನ್ನ ಕರೆದೊಯ್ದು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಹಲ್ಲೆಗೈದ ದೃಶ್ಯ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. ತಮ್ಮ ವಿರುದ್ಧದ ಆರೋಪಕ್ಕೆ ಪ್ರತಿಕ್ರಿಯಿಸಿದ ವಿಶ್ವನಾಥ್, ಚುನಾವಣೆ ಖರ್ಚಿಗೆ ಹಣ ಕೊಟ್ಟಿದ್ದಲ್ಲ. ಆತ ತನ್ನ ಸ್ವಂತಕ್ಕೆ ನನ್ನ ಬಳಿ ಹಣ ಪಡೆದಿದ್ದ. ಆ ದುಡ್ಡಲ್ಲಿ ಕಾರು, ಬೈಕ್ ತೆಗೆದುಕೊಂಡಿದ್ದಾನೆ. ಹಣ ವಾಪಸ್ ಕೇಳಿದ್ದೇನೆ ಹೊರೆತು ಹಲ್ಲೆ ನಡೆಸಿಲ್ಲ ಎಂದಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:57 am, Fri, 10 November 23

ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್