ಮಂಡ್ಯದ ಮನ್ ಮುಲ್ ಅಗ್ನಿ ಅವಘಡ ಪ್ರಕರಣ: ಎನ್​ಒಸಿ ಪಡೆಯದೆ ಕಟ್ಟಡ ನಿರ್ಮಾಣ

ಮಂಡ್ಯದ ಮನ್ ಮುಲ್​ನಲ್ಲಿ ನಡೆದ ಅಗ್ನಿ ಅವಘಡ ಪ್ರಕರಣದಲ್ಲಿ ಚಿತ್ರೀಕರಣಕ್ಕೆ ಅವಕಾಶ ನೀಡದ ಅಧಿಕಾರಿಗಳ ನಡೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕೋಟ್ಯಾಂತರ ರೂಪಾಯಿ ವೆಚ್ಚದ ಈ ಕಟ್ಟಡವನ್ನು ಕೆಲವು ತಿಂಗಳ ಹಿಂದೆ ಕೇಂದ್ರ ಸಚಿವ ಅಮಿತ್ ಶಾ ಅವರು ಉದ್ಘಾಟಿಸಿದ್ದರು. ಆದರೆ, ಈ ಕಟ್ಟಡ ಆರಂಭಕ್ಕೂ ಮುನ್ನ ಅಗ್ನಿಶಾಮಕ ಇಲಾಖೆಯಿಂದ ಎನ್​ಒಸಿ ಪಡೆದಿಲ್ಲ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.

ಮಂಡ್ಯದ ಮನ್ ಮುಲ್ ಅಗ್ನಿ ಅವಘಡ ಪ್ರಕರಣ: ಎನ್​ಒಸಿ ಪಡೆಯದೆ ಕಟ್ಟಡ ನಿರ್ಮಾಣ
ಮಂಡ್ಯ ಮನ್​ಮುಲ್​ನಲ್ಲಿ ಅಗ್ನಿ ಅವಘಡ
Follow us
| Updated By: Rakesh Nayak Manchi

Updated on: Oct 08, 2023 | 1:26 PM

ಮಂಡ್ಯ, ಅ.8: ಮಂಡ್ಯದ ಮನ್ ಮುಲ್​ನಲ್ಲಿ (Manmull) ನಡೆದ ಅಗ್ನಿ ಅವಘಡ (Fire Accident) ಪ್ರಕರಣದಲ್ಲಿ ಚಿತ್ರೀಕರಣಕ್ಕೆ ಅವಕಾಶ ನೀಡದ ಅಧಿಕಾರಿಗಳ ನಡೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕೋಟ್ಯಾಂತರ ರೂಪಾಯಿ ವೆಚ್ಚದ ಈ ಕಟ್ಟಡವನ್ನು ಕೆಲವು ತಿಂಗಳ ಹಿಂದೆ ಕೇಂದ್ರ ಸಚಿವ ಅಮಿತ್ ಶಾ ಅವರು ಉದ್ಘಾಟಿಸಿದ್ದರು. ಆದರೆ, ಈ ಕಟ್ಟಡ ಆರಂಭಕ್ಕೂ ಮುನ್ನ ಅಗ್ನಿಶಾಮಕ ಇಲಾಖೆಯಿಂದ ಎನ್​ಒಸಿ ಪಡೆದಿಲ್ಲ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದ ಬಳಿ ಇರುವ ಮನ್ ಮುಲ್ ಮೆಗಾ ಡೈರಿಯ ಪ್ಯಾಕಿಂಗ್ ಸೆಕ್ಷನ್​ನಲ್ಲಿ ಈ ಬೆಂಕಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಇದನ್ನೂ ಓದಿ: ಅತ್ತಿಬೆಲೆ ಪಟಾಕಿ ಅಗ್ನಿ ದುರಂತದಲ್ಲಿ 14 ಸಾವು: ಐವರ ವಿರುದ್ಧ ಎಫ್​​ಐಆರ್ ದಾಖಲು

ಅನುಮಾನ ಮೂಡಿಸಿದ ಅಧಿಕಾರಿಗಳ ನಡೆ

ಬೆಂಕಿ ಅವಘಡ ಸಂಭವಿಸಿದ್ದರೂ ಚಿತ್ರೀಕರಣ ನಡೆಸಲು ಮಾಧ್ಯಮದವರಿಗೆ ಒಳ ಪ್ರವೇಶ ನೀಡದಿರುವ ಅಧಿಕಾರಿಗಳ ಕ್ರಮ ಅನುಮಾನ ಮೂಡಿಸಿದೆ. ಸಾವಿರಾರು ಜನ ಕೆಲಸ ಮಾಡುವ ಈ ಕಟ್ಟದಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ ಎಂದು ತಿಳಿದುಬಂದಿದೆ.

ಮಂಡ್ಯ ಮೆಗಾ ಡೇರಿ ಕಟ್ಟಡ ನಿರ್ಮಾಣಕ್ಕೆ ಆಡಳಿತ ಮಂಡಳಿಯು ಅಗ್ನಿಶಾಮಕ ದಳದಿಂದ NOC ಪಡೆಯದೇ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೆ ಕಟ್ಟಡ ನಿರ್ಮಾಣ ಮಾಡಿದೆ. 2016ರ ನಿಯಮದಂತೆ ಕಟ್ಟಡ ನಿರ್ಮಾಣಕ್ಕೂ ಮುನ್ನ NOC ಪಡೆಯುವುದು ಕಡ್ಡಾಯವಾಗಿದೆ. ಆದರೆ ಮನ್​​ಮುಲ್ ಆಡಳಿತ ಮಂಡಳಿ ಈವರೆಗೂ ಕಟ್ಟಡಕ್ಕೆ NOC ಪಡೆದಿಲ್ಲ ಎಂದು ಮನ್​​ಮುಲ್ ಬಳಿ ಮಂಡ್ಯ ಅಗ್ನಿಶಾಮಕ ದಳದ ಅಧಿಕಾರಿ ಕೆ.ಪಿ.ಗುರುರಾಜ್ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ