ಅತ್ತಿಬೆಲೆ ಪಟಾಕಿ ಅಗ್ನಿ ದುರಂತದಲ್ಲಿ 14 ಸಾವು: ಐವರ ವಿರುದ್ಧ ಎಫ್ಐಆರ್ ದಾಖಲು
Attibele Fire Accident: ಬೆಂಗಳೂರಿನ ಅತ್ತಿಬೆಲೆ ಪಟಾಕಿ ದುರಂತದಲ್ಲಿ 14 ಅಮಾಯಕ ಜೀವಗಳು ಬಲಿಯಾಗಿವೆ. ಇನ್ನು ಘಟನೆ ಸಂಬಂಧ ಐವರು ವಿರುದ್ಧ ಎಫ್ಐಆರ್ ದಾಖಲಾಗಿದೆ. ಮೃತ ಸಂಬಂಧಿಯೊಬ್ಬರು ನೀಡಿದ ದೂರಿನ ಮೇರೆಗೆ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಯಾರ್ಯಾರ ಮೇಲೆ ಎಫ್ಐಆರ್ ದಾಖಲಾಗಿದೆ ಎನ್ನುವ ವಿವರ ಇಲ್ಲಿದೆ.
ಬೆಂಗಳೂರು, (ಅಕ್ಟೋಬರ್ 08): ಅತ್ತಿಬೆಲೆ ಪಟಾಕಿ ದುರಂತದಲ್ಲಿ 14 ಅಮಾಯಕ ಜೀವಗಳು ಬಲಿಯಾಗಿವೆ. ಬೆಂಕಿಯ ಅಟ್ಟಹಾಸ ಬಳಿಕ ಘಟನಾ ಸ್ಥಳದಲ್ಲಿ ಒಂದೊಂದು ಸೀನ್ಗಳಂತು ಭೀಕರತೆಯನ್ನ ತೆರೆದಿಡ್ತಿದೆ. ಮಾಲೀಕನ ನಿರ್ಲಕ್ಷ್ಯವೋ.. ಏಕಾಏಕಿ ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಅನ್ನೋದು ನಿಗೂಢವಾಗಿದೆ. ಒಂದೊಂದೇ ಮಾಹಿತಿಗಳನ್ನ ಕಲೆ ಹಾಕುತ್ತಿರೋ ಪೊಲೀಸರಿಗೆ ಸ್ಫೋಟಕ ಸಾಕ್ಷ್ಯಗಳೂ ಸಿಗುತ್ತಿದ್ದು, ಇನ್ನು ಈ ಬಗ್ಗೆ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮೃತರ ಸಂಬಂಧಿ ಲೋಕೇಶ್ವರನ್ ಎನ್ನುವರು ಕೊಟ್ಟ ದೂರಿನ ಮೇರೆಗೆ ಐಪಿಸಿ 427, 285, 286, 304, 337, 338 ಎಕ್ಸ್ ಪ್ಲೋಸಿವ್ ಆಕ್ಟ್ ಅಡಿ ಒಟ್ಟು ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಆರೋಪಿಗಳು
- ಎ1 ಆರೋಪಿ: ಗೋಡೌನ್ ಮಾಲೀಕ ರಾಮಸ್ವಾಮಿ ರೆಡ್ಡಿ
- ಎ2: ನವೀನ್ ರೆಡ್ಡಿ (ರಾಮಸ್ವಾಮಿ ರೆಡ್ಡಿ ಪುತ್ರ)
- ಎ 3: ಮ್ಯಾನೇಜರ್ ಲೋಕೇಶ್
- ಎ 4: ಕಟ್ಟಡ ಮಾಲೀಕರು ಜಯಮ್ಮ
- ಎ 5: ಅನಿಲ್ ರೆಡ್ಡಿ
ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ಹೇಳಿದ್ದಿಷ್ಟು
ಅತ್ತಿಬೆಲೆಯಲ್ಲಿರುವ ಪಟಾಕಿ ಗೋಡೌನ್ ಅಗ್ನಿ ದುರಂತ ಪ್ರಕರಣದ ಟಿವಿ9ಗೆ ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ಪ್ರತಿಕ್ರಿಯಿಸಿದ್ದು, ಮೇಲ್ನೋಟಕ್ಕೆ ಅಗ್ನಿಶಾಮಕ ವಸ್ತುಗಳನ್ನ ಇಟ್ಕೊಂಡಿರಲಿಲ್ಲ ಎನ್ನುವುದು ಪ್ರಾಥಮಿವಾಗಿ ಗೋಚರವಾಗಿದೆ. ಪ್ರಥಮ ವರ್ತಮಾನ ವರದಿಯನ್ನ ಕಠಿಣ ಕಾನೂನಿಗೆ ಅನ್ವಯ ಮಾಡಿದ್ದೇವೆ. ಕೊಲೆಯಲ್ಲದ ನರಹತ್ಯೆ ಅಡಿ ಪ್ರಕರಣ ದಾಖಲಿಸಿದ್ದೇವೆ ಘಟನೆ ಬಗ್ಗೆ ತಜ್ನರು ವರದಿ ಕೊಡುತ್ತಾರೆ. ಫೈರ್ ಪೋರ್ಸ್, ಎಫ್ ಎಸ್ ಎಲ್ ವರದಿ ಆದಾರದ ಮೇಲೆ ತನಿಕೆ ಮುಂದುವರೆಯುತ್ತೆ ಎಂದು ಮಾಹಿತಿ ನೀಡಿದರು.
ಅಗ್ನಿಶಾಮಕದಳ, ಎಫ್ಎಸ್ಎಲ್ ವರದಿ ಆಧಾರದ ಮೇಲೆ ತನಿಖೆ ನಡೆಯಲಿದ್ದು, ಗೋಡೌನ್ ಮಾಲೀಕ, ಆತನ ಪುತ್ರ, ಜಾಗ ಕೊಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ಕಡೆಯೂ ಪಟಾಕಿ ಗೋದಾಮು ಪರಿಶೀಲನೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಡಿಜಿ ಐಜಿ ಆದೇಶದ ಮೇರೆಗೆ ಎಲ್ಲೆಲ್ಲೆ ಈ ರೀತಿ ಗೋದಾಮು ಇವೆಯೋ ಅಲ್ಲೆಲ್ಲ ಪರಿಶೀಲಿಸಿ ಅವುಗಳ ಬಗ್ಗೆ ಕ್ರಮಕ್ಕೆ ಮುಂದಾಗಿದ್ದಾರೆ. ಯಾರು ಬಾಲಕಾರ್ಮಿಕರು ಇದ್ದರು ಎನ್ನುವುದನ್ನು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗ್ತಿದೆ. ಸಂಬಂಧಿಕರ ಗುರುತಿನ ಆಧಾರದ ಮೇಲೆ ಅವರಿಗೆ ಹಸ್ತಾಂತರ ಮಾಡಲಾಗುತ್ತಿದೆ. ಗೋದಾಮ್ ನಿಂದ ಎಕ್ಸಿಟ್.ಹಾಗೂ ಎಂಟ್ರಿ ಸೇರಿದಂತೆ ಎಲ್ಲವನ್ನೂ ತನಿಕೆ ಮಾಡುತ್ತೇವೆ ಎಂದು ಹೇಳಿದರು.
ಅವಘಡದಲ್ಲಿ ನಿಧರಾದ, ಗಾಯಾಳುಗಳ ಮಾಹಿತಿ
ದುರಂತದಲ್ಲಿ 14 ಕಾರ್ಮಿಕರು ಸಾವೀಗಿಡಾಗಿದ್ದು, ಮೂವರಿಗೆ ಗಾಯಗಳಾಗಿವೆ. ಮೃತರು ತಮಿಳುನಾಡಿನ ಧರ್ಮಪುರಿ ಜಿಲ್ಲೆ, ಕಲ್ಲಕುರುಚಿ ಜಿಲ್ಲೆಯವರು ಎಂದು ತಿಳಿದುಬಂದಿದೆ. ಇದರಲ್ಲಿ ಎಂಟು ಜನ ಯುವಕರು ಧರ್ಮಪುರಿ ಜಿಲ್ಲೆ ಹರೂರ್ ತಾಲೂಕಿನ ಅಮ್ಮಾಪೇಟ್ಟೈ ನಿವಾಸಿಗಳು ಎಂದು ಮಾಹಿತಿ ದೊರೆತಿದೆ.
ಧರ್ಮಪುರಿ ಜಿಲ್ಲೆಯ ಎಂಟು ಯುವಕರು ಸಾವು
- ಪ್ರಕಾಶ್ (20)
- ವೆಟ್ಟಪ್ಪನ್(25),
- ಆದಿಕೇಶವನ್(23)
- ವಿಜಯರಾಘವನ್(20)
- ಇಳಂಬರುತಿ(19)
- ಆಕಾಶ್(23), ಗಿರಿ(22)
- ಸಚಿನ್(22)
ಕಲ್ಲಕುರುಚಿ ಜಿಲ್ಲೆಯ ಮೂವರು ಯುವಕರು ಸಾವು
- ಪ್ರಭಾಕರನ್(17)
- ವಸಂತರಾಜ್(23)
- ಅಪ್ಪಾಸ್(23)
ಗಾಯಗೊಂಡವರು
ಬಾಲಾಜಿ ಪಟಾಕಿ ಗೋದಾಮು ಮಾಲೀಕ ರಾಮಸ್ವಾಮಿ ರೆಡ್ಡಿ ಮಗ ನವೀನ್, ರಾಜೇಶ್ ಮತ್ತು ವೆಂಕಟೇಶ್. ಸಂಜಯ, ಚಂದ್ರು, ಪೌಲ್ ಕಬೀರ್. ಇವರನ್ನು ಅತ್ತಿಬೆಲೆಯ ಆಕ್ಸ್ಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆನೇಕಲ್ ಉಪ ವಿಭಾಗದ ಅತ್ತಿಬೆಲೆ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.