ಅನೈತಿಕ ಸಂಬಂಧದಲ್ಲಿ ತೊಡಗಿರುವ ಪತ್ನಿ ಪತಿಯಿಂದ ಜೀವನಾಂಶ ಕೋರುವಂತಿಲ್ಲ: ಹೈಕೋರ್ಟ್
ಅನೈತಿಕ ಸಂಬಂಧದಲ್ಲಿ ತೊಡಗಿರುವ ಪತ್ನಿ ತನ್ನ ಪತಿಯಿಂದ ಜೀವನಾಂಶವನ್ನು ಕೋರುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಅಲ್ಲದೆ, ಪರಿಹಾರದ ಜತೆಗೆ ಜೀವನಾಂಶ ನೀಡುವಂತೆ ಕೋರಿದ್ದ ಅರ್ಜಿಯನ್ನು ಚಿಕ್ಕಮಗಳೂರಿನ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
![ಅನೈತಿಕ ಸಂಬಂಧದಲ್ಲಿ ತೊಡಗಿರುವ ಪತ್ನಿ ಪತಿಯಿಂದ ಜೀವನಾಂಶ ಕೋರುವಂತಿಲ್ಲ: ಹೈಕೋರ್ಟ್](https://images.tv9kannada.com/wp-content/uploads/2023/10/karnataka-high-court-7.jpg?w=1280)
ಬೆಂಗಳೂರು, ಅ.8: ಅನೈತಿಕ ಸಂಬಂಧದಲ್ಲಿ ತೊಡಗಿರುವ ಪತ್ನಿ ತನ್ನ ಪತಿಯಿಂದ ಜೀವನಾಂಶವನ್ನು ಪಡೆಯಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ (Karnataka High Court) ಆದೇಶಿಸಿದೆ. ಅಲ್ಲದೆ, ಪರಿಹಾರದ ಜತೆಗೆ ಜೀವನಾಂಶ ನೀಡುವಂತೆ ಕೋರಿದ್ದ ಅರ್ಜಿಯನ್ನು ಚಿಕ್ಕಮಗಳೂರಿನ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಕಾನೂನುಬದ್ಧವಾಗಿ ವಿವಾಹವಾದ ಪತ್ನಿ ಜೀವನಾಂಶಕ್ಕೆ ಅರ್ಹರು ಎಂಬ ಅರ್ಜಿದಾರರ ವಾದವನ್ನು ಅವರ ನಡವಳಿಕೆಯ ದೃಷ್ಟಿಯಿಂದ ಒಪ್ಪಿಕೊಳ್ಳಲಾಗುವುದಿಲ್ಲ. ಅವರು ಪ್ರಾಮಾಣಿಕರಲ್ಲ ಮತ್ತು ಅನೈತಿಕ ಜೀವನ ನಡೆಸುತ್ತಿದ್ದಾರೆ ಎಂದು ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಡಿವಿ ಕಾಯ್ದೆಯಡಿ ಸೆಕ್ಷನ್ 18 ರ ಅಡಿಯಲ್ಲಿ ರಕ್ಷಣೆ ಆದೇಶ, ಸೆಕ್ಷನ್ 19 ರ ಅಡಿಯಲ್ಲಿ ವಸತಿ ಆದೇಶ ಮತ್ತು ಸೆಕ್ಷನ್ 20 ರ ಅಡಿಯಲ್ಲಿ ತಿಂಗಳಿಗೆ 3,000 ರೂಪಾಯಿಗಳ ನಿರ್ವಹಣೆ ರೂಪದಲ್ಲಿ ಮತ್ತು ಸೆಕ್ಷನ್ 22 ರ ಅಡಿಯಲ್ಲಿ 25,000 ರೂಪಾಯಿಗಳ ಪರಿಹಾರವನ್ನು ಕೋರಿದ್ದರು.
ಇದನ್ನೂ ಓದಿ: ಚಾಮರಾಜನಗರ: ತಪ್ಪಾದ ಚಿಕಿತ್ಸೆಯಿಂದ ಜೀವಂತ ಶವವಾದ ವೃದ್ಧೆ: ದಂತ ವೈದ್ಯನಿಗೆ 9 ಲಕ್ಷ ರೂ. ದಂಡ ವಿಧಿಸಿದ ಕೋರ್ಟ್
ಅದರಂತೆ ಮಾಸಿಕ ನಿರ್ವಹಣೆಗೆ ರೂ. 1,500 ಮತ್ತು ಬಾಡಿಗೆ ಭತ್ಯೆಗೆ ರೂ. 1,000 ಮತ್ತು ಪರಿಹಾರವಾಗಿ ರೂ 5,000 ನೀಡುವಂತೆ ಮ್ಯಾಜಿಸ್ಟ್ರೇಟ್ ಕೋರ್ಟ್ ಮಾರ್ಚ್ 23, 2013 ರಂದು ಆದೇಶಿಸಿತ್ತು. ಈ ಆದೇಶವನ್ನು ಮಹಿಳೆಯ ಪತಿ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಿದರು. ವಿಚಾರಣೆ ನಡೆಸಿದ ಕೋರ್ಟ್, ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ನೀಡಿದ್ದ ಆದೇಶವನ್ನು ರದ್ದುಗೊಳಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು. ತಾನು ಕಾನೂನುಬದ್ಧವಾಗಿ ವಿವಾಹವಾದ ಪತ್ನಿ ಮತ್ತು ಹೆಂಡತಿಯನ್ನು ಕಾಪಾಡಿಕೊಳ್ಳುವುದು ಗಂಡನ ಕರ್ತವ್ಯ. ಅವರು ತನ್ನ ಸಂಬಂಧಿಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿರುವುದರಿಂದ ಕೌಟುಂಬಿಕ ಹಿಂಸಾಚಾರವನ್ನು ಊಹಿಸುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
ಅವರು ಕಾನೂನುಬದ್ಧವಾಗಿ ವಿವಾಹವಾದ ಹೆಂಡತಿಯಾಗಿದ್ದರೂ, ಅಕ್ರಮ ಸಂಬಂಧವನ್ನು ಹೊಂದಿರುವ ಅವರ ನಡವಳಿಕೆಯನ್ನು ನೋಡಿದರೆ, ಅವರು ಯಾವುದೇ ಜೀವನಾಂಶಕ್ಕೆ ಅರ್ಹರಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಪತಿ ತನ್ನ ಅತ್ತಿಗೆಯ ಮಗಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಅರ್ಜಿದಾರರ ಪತ್ನಿಯ ವಾದಕ್ಕೆ ಸಂಬಂಧಿಸಿದಂತೆ, ಈ ಅಂಶವು ವಿವಾದಕ್ಕೀಡಾಗಿದ್ದರೂ ಅರ್ಜಿದಾರರು ಜೀವನಾಂಶವನ್ನು ಕೋರುತ್ತಿದ್ದಾರೆ ಮತ್ತು ಅವಳು ಪ್ರಾಮಾಣಿಕಳು ಎಂದು ಸಾಬೀತುಪಡಿಸಬೇಕು ಎಂದು ಪೀಠವು ಅಭಿಪ್ರಾಯಪಟ್ಟಿತು. ಆಕೆಯೇ ಪ್ರಾಮಾಣಿಕಳಲ್ಲದಿದ್ದಲ್ಲಿ ಆಕೆ ತನ್ನ ಗಂಡನತ್ತ ಬೆರಳು ತೋರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ