ಚಾಮರಾಜನಗರ: ತಪ್ಪಾದ ಚಿಕಿತ್ಸೆಯಿಂದ ಜೀವಂತ ಶವವಾದ ವೃದ್ಧೆ: ದಂತ ವೈದ್ಯನಿಗೆ 9 ಲಕ್ಷ ರೂ. ದಂಡ ವಿಧಿಸಿದ ಕೋರ್ಟ್
ದಂತ ವೈದ್ಯನ ತಪ್ಪಾದ ಚಿಕಿತ್ಸೆಯಿಂದ ಚಾಮರಾಜನಗರದ ವೃದ್ಧೆಯೊಬ್ಬರು ಜೀವಂತ ಶವದರೀತಿಯಾಗಿದ್ದಾರೆ. ಹೌದು ಚಾಮರಾಜನಗರದ ರಥದ ಬೀದಿಯಲ್ಲಿರುವ ಗಿರಿಜಾ ಡೆಂಟಲ್ ಕೇರ್ಗೆ ಹೋದ ವದ್ಧೆಗೆ ವೈದ್ಯ ಹೆಚ್ಚಿನ ಡೋಸೆಜ್ ಅನಸ್ಥೇಶಿಯಾ ಇಂಜೆಕ್ಷನ್ ನೀಡಿದ ಪರಿಣಾಮ ದೇಹದ ಎಡಭಾಗಕ್ಕೆ ಸ್ವಾಧೀನ ಇಲ್ಲದಂತಾಗಿದೆ.
ಚಾಮರಾಜನಗರ ಅ.06: ದಂತ ವೈದ್ಯನ (Dental Doctor) ತಪ್ಪಾದ ಚಿಕಿತ್ಸೆಯಿಂದ ಚಾಮರಾಜನಗರದ (Chamarajnagar) ವೃದ್ಧೆಯೊಬ್ಬರು ಜೀವಂತ ಶವದರೀತಿಯಾಗಿದ್ದಾರೆ. ಹೌದು ಚಾಮರಾಜನಗರ ನಗರ ನಿವಾಸಿಯಾಗಿರುವ ವೃದ್ಧೆ ಸುಕನ್ಯ ಅವರು 2021ರ ಫೆಬ್ರವರಿ 3 ನೇ ತಾರೀಖಿನಂದಯ ಹಲ್ಲು ನೋವಿನ ಚಿಕಿತ್ಸೆ ಪಡೆಯಲು ಚಾಮರಾಜನಗರದ ರಥದ ಬೀದಿಯಲ್ಲಿರುವ ಗಿರಿಜಾ ಡೆಂಟಲ್ ಕೇರ್ಗೆ ಹೋಗಿದ್ದರು. ದಂತ ವೈದ್ಯ ಹೆಚ್.ಎಸ್ ಮಂಜುನಾಥ್ ಸುಕನ್ಯರಿಗೆ ರೂಟ್ ಕೆನಲ್ ಚಿಕಿತ್ಸೆ ನೀಡುವ ಸಲುವಾಗಿ ಎಡ ದವಡೆಗೆ ಮರಗಟ್ಟುವ ಅನಸ್ಥೇಶಿಯಾ ಇಂಜೆಕ್ಷನ್ ನೀಡಿದ್ದನು.
ಅನಸ್ಥೇಶಿಯಾ ಇಂಜೆಕ್ಷನ್ನ ಡೋಸೆಜ್ ಹೆಚ್ಚಾದ ಪರಿಣಾಮ ವೃದ್ಧೆ ಸುಕನ್ಯ ಸ್ಥಳದಲ್ಲೇ ಕುಸಿದು ಬಿದ್ದು 20 ದಿನ ಕೋಮಗೆ ಜಾರಿದ್ದರು. ಕೋಮದಿಂದ ಹೊರಬಂದ ಬಳಿಕ ಸುಕನ್ಯ ಅವರು ದೇಹದ ಎಡಭಾಗ ಸಂಪೂರ್ಣ ಸ್ವಾಧೀನ ಕಳೆದುಕೊಂಡಿದ್ದಾರೆ. ಎಡಭಾಗ ಸ್ವಾಧೀನ ಕಳೆದುಕೊಂಡ ಸುಕನ್ಯ ಕಳೆದ ಎರಡುವರೆ ವರ್ಷದಿಂದ ಮಾಡದ ತಪ್ಪಿಗೆ ನೋವು ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ: ಗುರುತಿನ ಚೀಟಿ ವಿಚಾರಕ್ಕೆ ಕಂಡಕ್ಟರ್ ಜೊತೆ ಮಾತಿನ ಚಕಮಕಿ: ದಂತ ವೈದ್ಯ ವಿದ್ಯಾರ್ಥಿ ವಿರುದ್ಧ ಎಫ್ಐಆರ್
ಇನ್ನು ತಾಯಿಗೆ ಹೀಗಾಗುತ್ತಿದ್ದಂತೆ ಸುಕನ್ಯರ ಪುತ್ರ ಸುಮನ್ ಗಿರಿಜಾ ಡೆಂಟಲ್ ಕೇರ್ನ ವೈದ್ಯ ಮಂಜುನಾಥ್ ವಿರುದ್ಧ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಈಗ ಒಂದುವರೆ ವರ್ಷದ ಬಳಿಕ ಜಿಲ್ಲಾ ಗ್ರಾಹಕರ ನ್ಯಾಯಾಲಯ ತೀರ್ಪು ನೀಡಿದ್ದು, ವೈದ್ಯನಿಗೆ 9 ಲಕ್ಷದ 24 ಸಾವಿರ 605 ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ. ಆದರೆ ಸುಕನ್ಯ ಖರ್ಚು ಮಾಡಿದ್ದು ಮಾತ್ರ 15 ರಿಂದ 20 ಲಕ್ಷ ರೂ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:54 pm, Fri, 6 October 23