ಬೆಂಗಳೂರು ಪಟಾಕಿ ಅಗ್ನಿ ದುರಂತ: ಮೃತರ ಗುರುತು ಪತ್ತೆ, ಪರಿಹಾರ ಘೋಷಿಸಿದ ತಮಿಳುನಾಡು ಸರ್ಕಾರ

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ ನಸುಕಿನಜಾವ 4.30 ರ ವರೆಗೆ ಕಾರ್ಯಾಚರಣೆ ನಡೆಸಲಾಗಿದೆ. 14 ಜನ ಮೃತರಾಗಿದ್ದರೆ. 11 ದೇಹಗಳ ಗುರುತು ಪತ್ತೆಯಾಗಿದೆ. ಮೂರು ದೇಹಗಳ ಗುರುತು ಪತ್ತೆಯಾಗಬೇಕಿದೆ ಎಂದರು.

ಬೆಂಗಳೂರು ಪಟಾಕಿ ಅಗ್ನಿ ದುರಂತ: ಮೃತರ ಗುರುತು ಪತ್ತೆ, ಪರಿಹಾರ ಘೋಷಿಸಿದ ತಮಿಳುನಾಡು ಸರ್ಕಾರ
ಸುಟ್ಟು ಕರಕಲಾದ ಪಟಾಕಿ ಗೋಡೌನ್
Follow us
Kiran Surya
| Updated By: ವಿವೇಕ ಬಿರಾದಾರ

Updated on:Oct 08, 2023 | 11:28 AM

ಬೆಂಗಳೂರು ಅ.08: ಬೆಳಕಿನ ಹಬ್ಬ ದೀಪಾವಳಿ ಹಬ್ಬಕ್ಕೆಂದು ಆನೆಕಲ್​ ತಾಲೂಕಿನ ಅತ್ತಿಬೆಲೆಯಲ್ಲಿನ ಸಂಗ್ರಹಿಸಿದ್ದ ಪಟಾಕಿ ಗೋಡೌನಲ್ಲಿ (Firecrackers Godown) ಭಾರಿ ಅಗ್ನಿ ಅವಘಡ (Explosion) ಸಂಭವಿಸಿ 14 ಜನ ಕಾರ್ಮಿಕರು (Workers) ಸಜೀವದಹನವಾಗಿದ್ದರು. ಇದರಲ್ಲಿ ಇಬ್ಬರು ಬಾಲ ಕಾರ್ಮಿಕರು ನಿಧರಾಗಿದ್ದಾರೆ. ಈ ದುರಂತದಲ್ಲಿ ಮೃತಪಟ್ಟ ಕಾರ್ಮಿಕರ ಪೈಕಿ ಬಹುತೇಕರು ತಮಿಳುನಾಡು ಮೂಲದವರು ಎಂದು ಗುರುತಿಸಲಾಗಿದೆ.

ಘಟನೆ ಬಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ ನಸುಕಿನಜಾವ 4.30 ರ ವರೆಗೆ ಕಾರ್ಯಾಚರಣೆ ನಡೆಸಲಾಗಿದೆ. 14 ಜನ ಮೃತರಾಗಿದ್ದರೆ. 11 ದೇಹಗಳ ಗುರುತು ಪತ್ತೆಯಾಗಿದೆ. ಮೂರು ದೇಹಗಳ ಗುರುತು ಪತ್ತೆಯಾಗಬೇಕಿದೆ. ಸ್ಥಳಕ್ಕೆ ತಮಿಳುನಾಡಿನ ಇಬ್ಬರು ಸಚಿವರು ಆಗಮಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತಿದ್ದಾರೆ ಎಂದು ಹೇಳಿದರು.

10 ಶವಗಳನ್ನು ಡಿಎನ್​ಎ ಪರೀಕ್ಷೆಗೆ ಒಳಪಡಿಸಿದ ನಂತರ ಕುಟುಂಬಸ್ಥರಿಗೆ ಹಸ್ತಾಂತರ ಮಾಡುತ್ತೇವೆ. ಗೋಡೌನ್​ ಮಾಲೀಕ ರಾಮಸ್ವಾಮಿ ರೆಡ್ಡಿಯನ್ನು ವಶಕ್ಕೆ ಪಡೆದಿದ್ದೇವೆ. ನಿರ್ವಹಣೆ ಮಾಡುತ್ತಿದ್ದ ರಾಮಸ್ವಾಮಿ ಪುತ್ರ ನವೀನ್ ರೆಡ್ಡಿ ಸಹ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಅತ್ತಿಬೆಲೆ ಪಟಾಕಿ ಗೋಡೌನ್​ ಅಗ್ನಿ ದುರಂತ: ಮೃತರ ಸಂಖ್ಯೆ 14ಕ್ಕೆ ಏರಿಕೆ, ಗೋದಾಮು ಮಾಲೀಕನ ಪುತ್ರ ಪೊಲೀಸರ ವಶಕ್ಕೆ

ಅವಘಡದಲ್ಲಿ ನಿಧರಾದ, ಗಾಯಾಳುಗಳ ಮಾಹಿತಿ

ದುರಂತದಲ್ಲಿ 14 ಕಾರ್ಮಿಕರು ಸಾವೀಗಿಡಾಗಿದ್ದು, ಮೂವರಿಗೆ ಗಾಯಗಳಾಗಿವೆ. ಮೃತರು ತಮಿಳುನಾಡಿನ ಧರ್ಮಪುರಿ ಜಿಲ್ಲೆ, ಕಲ್ಲಕುರುಚಿ ಜಿಲ್ಲೆಯವರು ಎಂದು ತಿಳಿದುಬಂದಿದೆ. ಇದರಲ್ಲಿ ಎಂಟು ಜನ ಯುವಕರು ಧರ್ಮಪುರಿ ಜಿಲ್ಲೆ ಹರೂರ್ ತಾಲೂಕಿನ ಅಮ್ಮಾಪೇಟ್ಟೈ ನಿವಾಸಿಗಳು ಎಂದು ಮಾಹಿತಿ ದೊರೆತಿದೆ.

ಧರ್ಮಪುರಿ ಜಿಲ್ಲೆಯ ಎಂಟು ಯುವಕರು ಸಾವು

ಪ್ರಕಾಶ್ (20), ವೆಟ್ಟಪ್ಪನ್(25), ಆದಿಕೇಶವನ್(23), ವಿಜಯರಾಘವನ್(20), ಇಳಂಬರುತಿ(19), ಆಕಾಶ್(23), ಗಿರಿ(22), ಸಚಿನ್(22) ಮೃತ ಯುವಕರು.

ಕಲ್ಲಕುರುಚಿ ಜಿಲ್ಲೆಯ ಮೂವರು ಯುವಕರು ಸಾವು

ಪ್ರಭಾಕರನ್(17), ವಸಂತರಾಜ್(23), ಅಪ್ಪಾಸ್(23) ಮೃತರು. ಇನ್ನೂ ಮೂವರ ಮೃತದೇಹಗಳ ಗುರುತು ಪತ್ತೆಯಾಗಿಲ್ಲ. ಮೃತದೇಹಗಳು ಅತ್ತಿಬೆಲೆಯ ಆಕ್ಸ್​ಫರ್ಡ್​ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಗಾಯಗೊಂಡವರು

ಬಾಲಾಜಿ ಪಟಾಕಿ ಗೋದಾಮು ಮಾಲಿಕ ರಾಮಸ್ವಾಮಿ ರೆಡ್ಡಿ ಮಗ ನವೀನ್, ರಾಜೇಶ್​ ಮತ್ತು ವೆಂಕಟೇಶ್​. ಸಂಜಯ, ಚಂದ್ರು, ಪೌಲ್​ ಕಬೀರ್​​. ಇವರನ್ನು ಅತ್ತಿಬೆಲೆಯ ಆಕ್ಸ್​ಫರ್ಡ್​ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆನೇಕಲ್ ಉಪ ವಿಭಾಗದ ಅತ್ತಿಬೆಲೆ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತ ಕುಂಟುಂಬಗಳಿಗೆ ಪರಿಹಾರ ಘೋಷಣೆ

ಮೃತರ ಕುಟುಂಬಸ್ಥರಿಗೆ ತಮಿಳುನಾಡು ಸರ್ಕಾರ ಮೂರು ಲಕ್ಷ ರೂ. ಪರಿಹಾರ ಘೋಷಿಸಿದೆ. ಹೆಚ್ಚಿನ ಪರಿಹಾರಕ್ಕೆ ಮೃತರ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಸ್ಟಾಲಿನ್ ಜೊತೆ ಚರ್ಚಿಸಿ ಮತ್ತಷ್ಟು ಪರಿಹಾರ ಕೊಡಿಸುತ್ತೇವೆ ಎಂದು ಅತ್ತಿಬೆಲೆಯಲ್ಲಿ ತಮಿಳುನಾಡು ಸಚಿವ ಮಾ.ಸುಬ್ರಮಣಿಯನ್ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:27 am, Sun, 8 October 23