ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಬಿಜೆಪಿ ಪ್ರತಿಭಟನೆ: ಸಚಿವ ಚಲುವರಾಯಸ್ವಾಮಿ ಹೇಳಿದ್ದಿಷ್ಟು

| Updated By: ಗಂಗಾಧರ​ ಬ. ಸಾಬೋಜಿ

Updated on: Aug 19, 2023 | 7:20 PM

Mandya News: ಬಿಜೆಪಿಯವರು ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡಲು ಸಾಧ್ಯವಿಲ್ಲ. ನಮ್ಮ ಸರ್ಕಾರ ವಿರುದ್ದವೇ ಪ್ರತಿಭಟನೆ ಮಾಡಬೇಕು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಬಿಜೆಪಿ ಹಾಗೂ ಸಂಸದೆ ಸುಮಲತಾ ವಿರುದ್ದ ವಾಗ್ದಾಳಿ ಮಾಡಿದ್ದಾರೆ.

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಬಿಜೆಪಿ ಪ್ರತಿಭಟನೆ: ಸಚಿವ ಚಲುವರಾಯಸ್ವಾಮಿ ಹೇಳಿದ್ದಿಷ್ಟು
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ
Follow us on

ಮಂಡ್ಯ, ಆಗಸ್ಟ್​ 19: ಬಿಜೆಪಿಯವರು ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡಲು ಸಾಧ್ಯವಿಲ್ಲ. ನಮ್ಮ ಸರ್ಕಾರ ವಿರುದ್ದವೇ ಪ್ರತಿಭಟನೆ ಮಾಡಬೇಕು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ (chaluvarayaswamy) ಬಿಜೆಪಿ ಹಾಗೂ ಸಂಸದೆ ಸುಮಲತಾ ವಿರುದ್ದ ವಾಗ್ದಾಳಿ ಮಾಡಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ವಿರೋಧಿಸಿ ಬಿಜೆಪಿ ಪ್ರತಿಭಟನೆ ವಿಚಾರವಾಗಿ ನಗರದಲ್ಲಿ ಮಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಬಳಿ ವಾಟರ್​ ಮಾನಿಟರಿಂಗ್​ ಕಮಿಟಿ ಇರುವುದು. ನೀರು ಬಿಡುವ ಬಗ್ಗೆ ತೀರ್ಮಾನಿಸುವುದು ಕೇಂದ್ರ ಸರ್ಕಾರ ಅಲ್ವಾ ಎಂದು ಪ್ರಶ್ನಿಸಿದರು.

ನಾವು ಸಮರ್ಥವಾಗಿ ವಾದ ಮಂಡಿಸಿದ್ದಕ್ಕೆ ನೀರಿಗಾಗಿ ತಮಿಳುನಾಡು ಸರ್ಕಾರ ಸುಪ್ರೀಂ ಮೊರೆ ಹೋಗಿದ್ದಾರೆ. ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಹಾಗಾದರೆ ಕೇಂದ್ರ ನೀರಾವರಿ ಸಚಿವರ ಜೊತೆ ಸುಮಲತಾ ಚರ್ಚಿಸಿ ಬಗೆಹರಿಸಲಿ. ರಾಜಕೀಯವಾಗಿ ತಮಿಳುನಾಡು ಸರ್ಕಾರದ ಜೊತೆ ಮೈತ್ರಿ ಇರಬಹುದು. ರಾಜ್ಯದ ಜನರ ಜೊತೆಗಿನ ಮೈತ್ರಿ ಅಲ್ಲ. 27 ಸಂಸದರು ಹೋಗಿ ನೀರು ಬಿಡಲು ಸಾಧ್ಯವಿಲ್ಲ ಎಂದು ಹೇಳಬೇಕು ಎಂದರು.

ನಮ್ಮನ್ನ ನೋಡಿ ಮಳೆ ಬರುತ್ತಿಲ್ಲ, ಅವರನ್ನ ನೋಡಿಯಾದರೂ ಮಳೆ ಬರಲಿ: ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹೇಳಿಕೆಗೆ ಚಲುವರಾಯಸ್ವಾಮಿ ತಿರುಗೇಟು

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮಳೆ ಬರುತ್ತಿಲ್ಲವೆಂಬ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹೇಳಿಕೆ ಪ್ರತಿಕ್ರಿಯೆ ನೀಡಿದ್ದು, ಕುಮಾರಸ್ವಾಮಿ ಸತ್ಯಹರಿಶ್ಚಂದ್ರರು, ಅವರೂ ರಾಜ್ಯದಲ್ಲಿದ್ದಾರೆ. ನಮ್ಮನ್ನ ನೋಡಿ ಮಳೆ ಬರುತ್ತಿಲ್ಲ, ಅವರನ್ನ ನೋಡಿಯಾದರೂ ಬರಲಿ ಎಂದು ತಿರುಗೇಟು ನೀಡಿದರು. ಹೆಚ್‌ಡಿ ಕುಮಾರಸ್ವಾಮಿ ಬಂದು ಕುಳಿತು ಪೂಜೆ ಮಾಡಲಿ, ಮಳೆಯಾದರು ಬರಲಿ. ಎಲ್ಲಾದರೂ ಅಧಿಕಾರ ನೋಡಿ ಮಳೆ ಬರುತ್ತಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಬೆಂಗಳೂರು: ನಮಗೂ ಹಸ್ತಕ್ಕೆ ಆಪರೇಷನ್ ಮಾಡಲು ಗೊತ್ತಿದೆ: ಸಿಟಿ ರವಿ

ಬಿಎಸ್​​ ಯಡಿಯೂರಪ್ಪ ಮತ್ತು ಹೆಚ್​ಡಿ ಕುಮಾರಸ್ವಾಮಿ ಸಿಎಂ ಆದಾಗಲೂ ಮಳೆ, ಬರ ಬಂದಿದೆ. ಅದೃಷ್ಟದ ಮೇಲೆ ಮಳೆ ಬರಲ್ಲ. ಕುಮಾರಸ್ವಾಮಿ ರಾಜಕೀಯ ತೀಟೆ ಬಿಟ್ಟು ವಾಸ್ತವಾಗಿ ಜನರ ಸಮಸ್ಯೆಗೆ ಸ್ಪಂದಿಸಲಿ. ಲೋಕಸಭಾ ಚುನಾವಣೆ ಇದೆ ಎಂದು ಇಲ್ಲಸಲ್ಲದ ಮಾತನಾಡಬಾರದು. ನಮಗೂ ಮಾತನಾಡಲು ಬರುತ್ತದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ವಿಧಾನಪರಿಷತ್ ಸ್ಥಾನಕ್ಕೆ ಸೀತಾರಾಂ, ಉಮಾಶ್ರೀ, ಸುಧಾಮ್‌ ದಾಸ್‌ ಹೆಸರಿಗೆ ಅನುಮೋದನೆ; ದಲಿತ ಸಚಿವರು, ನಾಯಕರಿಗೆ ತೀವ್ರ ಹಿನ್ನಡೆ

ನೈಸ್ ಹಗರಣದ ಬಗ್ಗೆ ಸರ್ಕಾರ ಗಂಭೀರವಾಗಿ ತೀರ್ಮಾನ ಮಾಡಲಿದೆ. ಹೆಚ್‌.ಡಿ.ಕುಮಾರಸ್ವಾಮಿ ಪಾದಯಾತ್ರೆ ಮಾಡಿದಾಗ ಏನೂ ತಿಂದಿಲ್ಲ. ಊಟ ಮಾಡಲ್ಲ, ಟೀ ಕುಡಿಯಲ್ಲ, ಅವರನ್ನ ನೋಡಿ ಕಲಿಯುತ್ತೇವೆ ಬಿಡಿ ಎಂದರು.

ನಾವು ಯಾರಿಗೂ ಗಾಳ ಹಾಕಿಲ್ಲ

ಪಕ್ಷಕ್ಕೆ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ನಾವು ಯಾರಿಗೂ ಗಾಳ ಹಾಕಿಲ್ಲ. ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಸೇರ್ಪಡೆ ಮಾಡಿಕೊಳ್ಳುತ್ತೇವೆ. ಸಂಸದೆ ಸುಮಲತಾ ಬಳಿ ರಾಜಕೀಯ ವಿಚಾರದ ಬಗ್ಗೆ ಚರ್ಚಿಸಿಲ್ಲ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.