ವಿಧಾನಪರಿಷತ್ ಸ್ಥಾನಕ್ಕೆ ಸೀತಾರಾಂ, ಉಮಾಶ್ರೀ, ಸುಧಾಮ್ ದಾಸ್ ಹೆಸರಿಗೆ ಅನುಮೋದನೆ; ದಲಿತ ಸಚಿವರು, ನಾಯಕರಿಗೆ ತೀವ್ರ ಹಿನ್ನಡೆ
Karnataka Legislative Council; ಸೀತಾರಾಂ ಹಾಗೂ ಸುಧಾಮ್ ದಾಸ್ ಅವರನ್ನು ನಾಮನಿರ್ದೇಶ ಮಾಡುವುದನ್ನು ಪ್ರತಿಭಟಿಸಿ ದಲಿತ ಸಚಿವರು, ನಾಯಕರು ಹೈಕಮಾಂಡ್ಗೆ ಪತ್ರ ಬರೆದಿದ್ದರು. ಇವರಿಬ್ಬರ ಬದಲಿಗೆ ಬೇರೆ ಕಾರ್ಯಕರ್ತರಿಗೆ ಅವಕಾಶ ನೀಡುವಂತೆ ಒತ್ತಾಯಿಸಿದ್ದರು. ಇಷ್ಟೇ ಅಲ್ಲದೆ, ಇವರಿಬ್ಬರ ವಿರುದ್ಧ ರಾಜ್ಯಪಾಲರಿಗೂ ದೂರು ನೀಡಿದ್ದರು. ಇವೆಲ್ಲವನ್ನೂ ಮೀರಿ ಪರಿಷತ್ ಸ್ಥಾನ ಪಡೆಯುವಲ್ಲಿ ಇಬ್ಬರೂ ಯಶಸ್ವಿಯಾಗಿದ್ದಾರೆ.
ಬೆಂಗಳೂರು, ಆಗಸ್ಟ್ 19: ದಲಿತ ಸಚಿವರು, ನಾಯಕರ ತೀವ್ರ ವಿರೋಧದ ನಡುವೆಯೂ ವಿಧಾನಪರಿಷತ್ ಸ್ಥಾನಕ್ಕೆ (MLC Post) ಕರ್ನಾಟಕ ಕಾಂಗ್ರೆಸ್ (Karnataka Congress) ಸರ್ಕಾರ ಶಿಫಾರಸು ಮಾಡಿದ್ದ ಮೂವರ ಹೆಸರುಗಳಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಶನಿವಾರ ಅನುಮೋದನೆ ನೀಡಿದ್ದಾರೆ. ಸೀತಾರಾಂ, ಉಮಾಶ್ರೀ, ಸುಧಾಮ್ ದಾಸ್ ಹೆಸರುಗಳಿಗೆ ರಾಜ್ಯಪಾಲರ ಮುದ್ರೆ ಬಿದ್ದಿದೆ. ಇದರೊಂದಿಗೆ ಕಾಂಗ್ರೆಸ್ ಸರ್ಕಾರದ ದಲಿತ ಸಚಿವರು, ನಾಯಕರಿಗೆ ತೀವ್ರ (Dalit Leaders) ಹಿನ್ನಡೆಯಾದಂತಾಗಿದೆ. ಸೀತಾರಾಂ ಹಾಗೂ ಸುಧಾಮ್ ದಾಸ್ ಅವರನ್ನು ಪರಿಷತ್ಗೆ ನಾಮನಿರ್ದೇಶನ ಮಾಡುವುದಕ್ಕೆ ಕಾಂಗ್ರೆಸ್ನ ಒಂದು ವರ್ಗದ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಸೀತಾರಾಂ ಹಾಗೂ ಸುಧಾಮ್ ದಾಸ್ ಅವರನ್ನು ನಾಮನಿರ್ದೇಶ ಮಾಡುವುದನ್ನು ಪ್ರತಿಭಟಿಸಿ ದಲಿತ ಸಚಿವರು, ನಾಯಕರು ಹೈಕಮಾಂಡ್ಗೆ ಪತ್ರ ಬರೆದಿದ್ದರು. ಇವರಿಬ್ಬರ ಬದಲಿಗೆ ಬೇರೆ ಕಾರ್ಯಕರ್ತರಿಗೆ ಅವಕಾಶ ನೀಡುವಂತೆ ಒತ್ತಾಯಿಸಿದ್ದರು. ಇಷ್ಟೇ ಅಲ್ಲದೆ, ಇವರಿಬ್ಬರ ವಿರುದ್ಧ ರಾಜ್ಯಪಾಲರಿಗೂ ದೂರು ನೀಡಿದ್ದರು. ಇವೆಲ್ಲವನ್ನೂ ಮೀರಿ ಪರಿಷತ್ ಸ್ಥಾನ ಪಡೆಯುವಲ್ಲಿ ಇಬ್ಬರೂ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಎಐಸಿಸಿ ಅಧ್ಯಕ್ಷರಿಗೆ ನಾನು ಪತ್ರ ಬರೆದಿದ್ದು ನಿಜ: ಗೃಹಸಚಿವ ಪರಮೇಶ್ವರ್
ಈ ಮಧ್ಯೆ, ಸೀತಾರಾಂ ಹಾಗೂ ಸುಧಾಮ್ ದಾಸ್ ಅವರನ್ನು ಪರಿಷತ್ಗೆ ನಾಮ ನಿರ್ದೇಶನ ಮಾಡುವುದನ್ನು ವಿರೋಧಿಸಿ ಪತ್ರ ಬರೆದಿರುವುದನ್ನು ಗೃಹ ಸಚಿವ ಜಿ ಪರಮೇಶ್ವರ ಒಪ್ಪಿಕೊಂಡಿದ್ದಾರೆ. ಪತ್ರ ಬರೆದಿರುವುದು ನಿಜ. ಆ ಪತ್ರಕ್ಕೆ ಉತ್ತರ ಬಂದಿದೆ. ಏನಿದ್ದರೂ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಅವರು ಹೇಳಿದ್ದಾರೆ.
ವಿರೋಧಿಸಿದವರು ಯಾರೆಲ್ಲ?
ಸುಧಾಮ್ ದಾಸ್ ಹಾಗೂ ಸೀತಾರಾಂಗೆ ಪರಿಷತ್ ಸ್ಥಾನ ನೀಡುವುದಕ್ಕೆ ದಲಿತ ಸಮುದಾಯದ ಸಚಿವರಾದ ಜಿ ಪರಮೇಶ್ವರ್, ಹೆಚ್ಸಿ ಮಹದೇವಪ್ಪ ಆರ್ಬಿ ತಿಮ್ಮಾಪುರ, ಕೆಹೆಚ್ ಮುನಿಯಪ್ಪ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:43 pm, Sat, 19 August 23