AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಐಸಿಸಿ ಅಧ್ಯಕ್ಷರಿಗೆ ನಾನು ಪತ್ರ ಬರೆದಿದ್ದು ನಿಜ: ಗೃಹಸಚಿವ ಪರಮೇಶ್ವರ್

ವಿಧಾನ ಪರಿಷತ್​ಗೆ ಕಾಂಗ್ರೆಸ್ ಸರ್ಕಾರ ಮೂವರ ಹೆಸರನ್ನು ಶಿಫಾರಸ್ಸು ಮಾಡಿದೆ. ಈ ಪೈಕಿ ಸುಧಾಮ್ ದಾಸ್‌ ಮತ್ತು ಸೀತಾರಾಮ್ ಹೆಸರು ಆಯ್ಕೆಗೆ ಕೆಲವು ಸಚಿವರ ವಿರೋಧ ವ್ಯಕ್ತವಾಗಿದೆ. ಇದು ಎಐಸಿಸಿ ಅಂಗಳಕ್ಕೂ ತಲುಪಿತ್ತು. ಸದ್ಯ ಸುಧಾಮ್ ದಾಸ್ ಹೆಸರು ಶಿಫಾರಸ್ಸು ವಿರೋಧಿಸಿ ಎಐಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿರುವುದು ನಿಜ ಎಂದು ಗೃಹಸಚಿವ ಪರಮೇಶ್ವರ್ ಅವರು ಒಪ್ಪಿಕೊಂಡಿದ್ದಾರೆ.

ಎಐಸಿಸಿ ಅಧ್ಯಕ್ಷರಿಗೆ ನಾನು ಪತ್ರ ಬರೆದಿದ್ದು ನಿಜ: ಗೃಹಸಚಿವ ಪರಮೇಶ್ವರ್
ಗೃಹಸಚಿವ ಡಾ.ಜಿ.ಪರಮೇಶ್ವರ್
Sunil MH
| Updated By: Rakesh Nayak Manchi|

Updated on:Aug 19, 2023 | 5:45 PM

Share

ಬೆಂಗಳೂರು, ಆಗಸ್ಟ್ 19: ಮಾಜಿ ಸಚಿವೆ, ನಟಿ ಉಮಾಶ್ರೀ ಹೆಸರಿಗೆ ಯಾವುದೇ ತಕರಾರರು ಇಲ್ಲದಿದ್ದರೂ ಸೀತಾರಾಮ್ ಮತ್ತು ಸುಧಾಮ್ ದಾಸ್ ಹೆಸರನ್ನು ವಿಧಾನ ಪರಿಷತ್ ಸ್ಥಾನಕ್ಕೆ ಶಿಫಾರಸ್ಸು ಮಾಡಿರುವುದು ಕಾಂಗ್ರೆಸ್​​ ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಗಿದೆ. ಸುಧಾಮ್ ಹೆಸರು ಆಯ್ಕೆಗೊಳಿಸಿದ್ದನ್ನು ವಿರೋಧಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆಯಲಾಗಿತ್ತು. ಇದು ನಿಜವೆಂದು ಸ್ವತಃ ಗೃಹಸಚಿವ ಡಾ.ಜಿ.ಪರಮೇಶ್ವರ್ (Dr.G. Parameshwar) ಅವರು ಒಪ್ಪಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಪರಮೇಶ್ವರ್, ಆಕ್ಷೇಪ ವ್ಯಕ್ತಪಡಿಸಿ ಎಐಸಿಸಿ ಅಧ್ಯಕ್ಷರಿಗೆ ನಾನು ಪತ್ರ ಬರೆದಿದ್ದು ನಿಜ, ನನ್ನ ಪತ್ರಕ್ಕೆ ಪ್ರತಿಕ್ರಿಯೆಯೂ ಬಂದಿದೆ. ನಾನು ಬರೆದ ಪತ್ರಕ್ಕೆ ಸಕರಾತ್ಮಕ ಮತ್ತು ನಕರಾತ್ಮಕ ಉತ್ತರ ಬಂದಿದೆ. ಹಾಗಂತ ಎಲ್ಲವನ್ನೂ ನಿಮಗೆ ಹೇಳಲು ಆಗಲ್ಲ ಎಂದು ಹೇಳಿದರು.

ಸುದಾಮ್ ದಾಸ್ ಶಿಫಾರಸು ವಾಪಸ್ಸ್ ಪಡೆಯುತ್ತಾರಾ ಎಂಬ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, ಅದು ನನಗೆ ಗೊತ್ತಿಲ್ಲ. ಪತ್ರ ಬರೆದಿದ್ದೇನೆ, ಆ ಪತ್ರಕ್ಕೆ ಉತ್ತರ ಬಂದಿದೆ ಎಂದಷ್ಟೇ ಹೇಳಿದರು.

ಇದನ್ನೂ ಓದಿ: ವಿಧಾನಪರಿಷತ್ ಸ್ಥಾನಕ್ಕೆ ಸೀತಾರಾಂ, ಉಮಾಶ್ರೀ, ಸುಧಾಮ್‌ ದಾಸ್‌ ಹೆಸರಿಗೆ ಅನುಮೋದನೆ; ದಲಿತ ಸಚಿವರು, ನಾಯಕರಿಗೆ ತೀವ್ರ ಹಿನ್ನಡೆ

ತಾನು ಪತ್ರ ಬರೆದಿರುವುದು ಸತ್ಯ ಎಂದು ನಿನ್ನೆಯಷ್ಟೇ ಕೆಹೆಚ್​ ಮುನಿಯಪ್ಪ ಅವರು ಹೇಳಿಕೆ ನೀಡಿದ್ದರು. ಮೂರು ತಿಂಗಳ ಹಿಂದಿನ ತನಕ ಸರ್ಕಾರಿ ಅಧಿಕಾರಿ ಆಗಿದ್ದ ಸುಧಾಮ್ ದಾಸ್ ಅವರು ಈಗಷ್ಟೇ ಪಕ್ಷಕ್ಕೆ ಬಂದಿದ್ದಾರೆ. ಇನ್ನೊಂದಿಷ್ಟು ದಿನಗಳ ಕಾಲ ಸುಧಾಮ್ ದಾಸ್ ಪಕ್ಷಕ್ಕೆ ಕೆಲಸ ಮಾಡಲಿ. 30 ವರ್ಷಗಳಿಂದ ಕೆಲಸ ಮಾಡಿದ ದಲಿತ ನಾಯಕರಿಗೆ ಅವಕಾಶ ನೀಡಲಿ ಎಂಬುದಷ್ಟೇ ನಮ್ಮ ಸಲಹೆ ಎಂದು ಹೇಳಿದ್ದರು.

ಸುಧಾಮ್ ದಾಸ್​ಗೆ ಪರಿಷತ್ ಸ್ಥಾನ ನೀಡಿರುವುದಕ್ಕೆ ದಲಿತ ಸಮುದಾಯದ ಸಚಿವರಾದ ಡಾ.ಜಿ.ಪರಮೇಶ್ವರ್, ಹೆಚ್.ಸಿ.ಮಹದೇವಪ್ಪ ಆರ್.ಬಿ.ತಿಮ್ಮಾಪುರ ಕೆ.ಹೆಚ್.ಮುನಿಯಪ್ಪ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದರು. ಎಂ.ಆರ್. ಸೀತಾರಮ್ ಹೆಸರಿಗೂ ಸಹ ಕಾಂಗ್ರೆಸ್ ಪಕ್ಷದೊಳಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಸೀತಾರಾಮ್ ವಿರುದ್ಧ ಆರ್ಥಿಕ ಅಪರಾಧದ ಕೇಸ್ ಇದ್ದರೂ ಸಹ ಅವರನ್ನು ಯಾಕೆ ಆಯ್ಕೆ ಮಾಡಲಾಗಿದೆ ಎಂದು ಪ್ರಶ್ನಿಸುತ್ತಿದ್ದಾರೆ.

ನಟಿಯೂ ಆಗಿರುವ ಮಾಜಿ ಸಚಿವೆ ಉಮಾಶ್ರೀ ಅವರ ಹೆಸರನ್ನು ಕಲಾವಿದರ ಕೋಟಾದಡಿ ಶಿಫಾರಸು ಮಾಡಿದರೆ, ಶಿಕ್ಷಣ ಕ್ಷೇತ್ರದ ಕೋಟಾದಡಿ ಎಂ.ಆರ್.ಸೀತಾರಾಮ್​ ಹಾಗೂ ಸಮಾಜಸೇವೆ ಹೆಸರಲ್ಲಿ ನಿವೃತ್ತ ಇಡಿ ಅಧಿಕಾರಿ ಸುಧಾಮ್ ದಾಸ್​ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:41 pm, Sat, 19 August 23