ಆಪರೇಷನ್ ಹಸ್ತ; ಬಿಜೆಪಿ ಫುಲ್ ಅಲರ್ಟ್, ಶಾಸಕರ ಮುನಿಸು ಶಮನಕ್ಕೆ ಕೇಸರಿ ಕಲಿಗಳ ಶತಪ್ರಯತ್ನ

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಹಸ್ತದ ಗಾಳಿ ಬೀಸುತ್ತಿದೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ಕೈ ನಾಯಕರ ಬಲೆಗೆ ತಮ್ಮ ಶಾಸಕರು ಬೀಳದಂತೆ ನೋಡಿಕೊಳ್ಳಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಮುನಿಸು ಶಮನಗೊಳಿಸಲು ಎಸ್​.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಅವರನ್ನು ಆಹ್ವಾನಿಸಿ ಸಂಧಾನ ನಡೆಸುವಲ್ಲಿ ನಾಯಕರು ನಿರತರಾಗಿದ್ದಾರೆ.

ಆಪರೇಷನ್ ಹಸ್ತ; ಬಿಜೆಪಿ ಫುಲ್ ಅಲರ್ಟ್, ಶಾಸಕರ ಮುನಿಸು ಶಮನಕ್ಕೆ ಕೇಸರಿ ಕಲಿಗಳ ಶತಪ್ರಯತ್ನ
ಬಿಜೆಪಿ ಕರ್ನಾಟಕ
Follow us
| Updated By: Rakesh Nayak Manchi

Updated on:Aug 19, 2023 | 4:28 PM

ಬೆಂಗಳೂರು, ಆಗಸ್ಟ್ 19: ಲೋಕಸಭೆ ಚುನಾವಣೆ ಸಮೀಪದಲ್ಲಿರುವಾಗಲೇ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಹಸ್ತದ ಗಾಳಿ ಬೀಸಲು ಆರಂಭವಾಗಿದೆ. ಬೆಂಬಲಿಗರ ಸಹಿತ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವ ಯತ್ನ ನಡೆಸಲಾಗುತ್ತಿದೆ. ಬಿಜೆಪಿ ಶಾಸಕರಾದ ಎಸ್​.ಟಿ.ಸೋಮಶೇಖರ್ (ST Somashekhar), ಶಿವರಾಮ್ ಹೆಬ್ಬಾರ್ (Shivaram Hebbar) ಸೇರಿದಂತೆ ಕೆಲವು ಶಾಸಕರು ಮತ್ತೆ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಹೈ ಅಲರ್ಟ್ ಆದ ಬಿಜೆಪಿ (BJP), ಶಾಸಕರ ಮುನಿಸು ಶಮನಕ್ಕೆ ಶತಪ್ರಯತ್ನ ನಡೆಸುತ್ತಿದೆ.

ಸೋಮಶೇಖರ್ ಅವರಿ​ಗೆ ಸಣ್ಣಪುಟ್ಟ ವಿಚಾರದಲ್ಲಿ ಅಸಮಾಧಾನವಿದೆ. ಆದರೆ ಅದು ಸರಿಪಡಿಸಲಾರದಷ್ಟು, ಪಕ್ಷ ಬಿಡುವಷ್ಟು ದೊಡ್ಡದಲ್ಲ ಎಂದು ಹೇಳಿದ ಬಿಜೆಪಿ ನಾಯಕ ಸಿ.ಟಿ.ರವಿ, ಬಿಬಿಎಂಪಿ, ಸ್ಥಳೀಯ ಚುನಾವಣೆಗಳ ಆಸೆ ತೋರಿಸಿ ಸೋಮಶೇಖರ್ ಬೆಂಬಲಿಗರನ್ನು ಕಾಂಗ್ರೆಸ್ ನಾಯಕರು ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಅಲ್ಲದೆ, ಆಪರೇಷನ್ ಹಸ್ತದ ಬಗ್ಗೆ ಆಕ್ರೋಶ ಹೊರಹಾಕಿದ ಅವರು, ನಿಮಗೆ ಸ್ಪಷ್ಟ ಬಹುಮತವಿದೆ ಅಂತ ಅತಿಯಾಗಿ ಮಾಡಲು ಹೋಗಬೇಡಿ. ‌ನಾವೇನಾದರೂ ಮಾಡಿದರೆ ನೀವು ಮತ್ತೆ ಮೇಲೆ ಏಳಲು ಆಗುವುದಿಲ್ಲ. ಆಪರೇಷನ್‌ಗೆ ಆಪರೇಷನ್ ಮಾಡಲು ಗೊತ್ತು ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಎಸ್​ಟಿ ಸೋಮಶೇಖರ್,​​ ಬೆಂಬಲಿಗರನ್ನು ಕಾಂಗ್ರೆಸ್​ಗೆ ಕರೆತರಬೇಕೆಂದು ಕೆಪಿಸಿಸಿ ಅಧ್ಯಕ್ಷರು ಟಾಸ್ಕ್​ ನೀಡಿದ್ದಾರೆ: ಶಾಸಕ ಎನ್​ ಶ್ರೀನಿವಾಸ್​​​

ನಮ್ಮ ಪಕ್ಷ ಉಳಿಸಿಕೊಳ್ಳುವುದು, ಕಟ್ಟುವುದು ನಮಗೆ ಗೊತ್ತಿದೆ. ಪಗಡೆ, ಚೆಸ್ ಏಕಮುಖ ಅಲ್ಲ. ಅವರು ದಾಳ ಉರುಳಿಸಿದರೆ ನಾವೂ ಆಡುತ್ತೇವೆ. ನಾವು ಚೆಕ್ ಮೇಟ್ ಮಾಡಿದರೆ ಸಣ್ಣಪುಟ್ಟ ಸೈನಿಕರಿಗೆ ಮಾಡುವುದಿಲ್ಲ. ನಾವು ರಾಜನಿಗೇ ಚೆಕ್‌ಮೇಟ್ ಮಾಡುತ್ತೇವೆ ಎಂದು ಹೇಳುವ ಮೂಲಕ ಸಿಟಿ ರವಿ ಅವರು ಕಾಂಗ್ರೆಸ್​ನ ಪ್ರಬಲ ನಾಯಕರಿಗೆ ಗಾಲ ಹಾಕುವ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರ ಜೊತೆ ಮಾಜಿ ಸಿಎಂ ಬೊಮ್ಮಾಯಿ ಚರ್ಚೆ

ಬಿಜೆಪಿಗೆ ಪಕ್ಷಾಂತರಗೊಂಡ ಕೆಲವು ಶಾಸಕರು ಪಕ್ಷದ ಕೆಲವು ನಾಯಕರ ನಡೆಯಿಂದ ಬೇಸತ್ತು ಮತ್ತೆ ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇಂತಹ ಶಾಸಕರ ಮುನಿಸು ಶಮನಕ್ಕೆ ಹಾಗೂ ಸಮಸ್ಯೆ ಬಗೆಹರಿಸಲುವ ಜವಾಬ್ದಾರಿಯನ್ನು ರಾಜಹುಲಿ ಯಡಿಯೂರಪ್ಪ ಅವರು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಗಲಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ ಸರ್ಕಾರದ ವಿರುದ್ಧ ಆ 23ರಂದು ಬೃಹತ್​ ಪ್ರತಿಭಟನೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಇನ್ನೆರಡು ದಿನಗಳಲ್ಲಿ ಅಸಮಾಧಾನಿತ ಶಾಸಕರಾದ ಸೋಮಶೇಖರ್, ಹೆಬ್ಬಾರ್​ ಅವರು ಬೊಮ್ಮಾಯಿ ಅವರನ್ನು ಭೇಟಿಯಾಗಲಿದ್ದಾರೆ. ಇದರ ಬೆನ್ನಲ್ಲೇ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೊತೆ ಬೊಮ್ಮಾಯಿ ಅವರು ಸುದೀರ್ಘ ಮಾತುಕತೆ ನಡೆಸಿದರು. ಅಲ್ಲದೆ, ಶಾಸಕರ ಅಸಮಾಧಾನ ಕುರಿತು ವರಿಷ್ಠರ ಗಮನಕ್ಕೆ ತರಲು ಚಿಂತನೆ ನಡೆಸಿದ್ದಾರೆ.

ಮಾಜಿ ಸ್ಪೀಕರ್ ಕಾಗೇರಿ ಭೇಟಿಯಾದ ಶಿವರಾಮ್ ಹೆಬ್ಬಾರ್

ಆಪರೇಷನ್ ಹಸ್ತದ ಗಾಳಿ ಬೀಸುತ್ತಿರುವಾಗಲೇ ಬಿಜೆಪಿಯ ಕೆಲವು ನಾಯಕರ ವಿರುದ್ಧ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಅಸಮಾಧಾನ ಹೊರಹಾಕಿದ್ದಾರೆ. ಆದರೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಬಗ್ಗೆ ಇನ್ನೂ ತೀರ್ಮಾನಿಸಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿರುವ ಹಿನ್ನೆಲೆ ಹೆಬ್ಬಾರ್ ಅವರನ್ನು ತಮ್ಮ ಕಚೇರಿಗೆ ಆಹ್ವಾನಿಸಿದ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಮಸ್ಯೆಗಳನ್ನು ಆಲಿಸಿ ಮುನಿಸು ಶಮನಕ್ಕೆ ಕಾಗೇರಿ ಯತ್ನಿಸಿದ್ದಾರೆ. ನಂತರ ಮಾತನಾಡಿದ ಕಾಗೇರಿ, ಇದೊಂದು ಸಾಧಾರಣ ಭೇಟಿ ಎಂದಿದ್ದಾರೆ.

ಬಿಜೆಪಿ ಕಚೇರಿಗೆ ಭೇಟಿ ನೀಡಿದ ಎಸ್​ಟಿ ಸೋಮಶೇಖರ್

ಸೋಮಶೇಖರ್ ಅವರು ಪಕ್ಷದ ಕೆಲವು ನಾಯಕರ ನಡೆ ಬಗ್ಗೆ ಅಸಮಾಧಾನ ಹೊರಹಾಕಿದ ನಂತರ ಮೊದಲ ಬಾರಿಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದ್ದಾರೆ. ಕಚೇರಿಗೆ ಮೊದಲೇ ಆಗಮಿಸಿದ್ದ ಸಿಟಿ ರವಿ ಅವರು ಸೋಮಶೇಖರ್ ಜೊತೆ ಮಾತುಕತೆ ನಡೆಸಿದ್ದು, ಇತ್ತೀಚೆಗೆ ಕ್ಷೇತ್ರದಲ್ಲಾದ ಪಕ್ಷದ ಬೆಳವಣಿಗೆ ಕುರಿತು ಸೋಮಶೇಖರ್ ಮಾಹಿತಿ ನೀಡಿದ್ದಾರೆ.

ನಿನ್ನೆ (ಆಗಸ್ಟ್ 18) ಡಾಲರ್ಸ್ ಕಾಲೋನಿಯಲ್ಲಿರುವ ಯರಿಯೂರಪ್ಪ ಅವರ ನಿವಾಸದಲ್ಲಿ ಬೆಂಗಳೂರು ಸಂಸದರು ಹಾಗೂ ಶಾಸಕರ ತುರ್ತು ಸಭೆ ನಡೆಸಲಾಗಿತ್ತು. ಈ ಸಭೆಗೆ ಸೋಮಶೇಖರ್ ಅವರು ಭಾಗಿಯಾಗಿರಲಿಲ್ಲ. ಸದ್ಯ ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು, ನಾನು ಕ್ಷೇತ್ರದಲ್ಲಿ ಇದ್ದಿದ್ದರಿಂದ ಸಭೆಯ ಮಾಹಿತಿ ತಡವಾಗಿ ಸಿಕ್ಕಿತ್ತು. ಹೀಗಾಗಿ ಭಾಗಿಯಾಗಲು ಆಗಿಲ್ಲ. ಇಂದು ಭೇಟಿಯಾಗೋಣ ಎಂದು ಆರ್.ಅಶೋಕ್, ಬೊಮ್ಮಾಯಿ ಹೇಳಿದ್ದಾಗಿ ತಿಳಿಸಿದರು.

ಬಿಜೆಪಿ ನಾಯಕರು ಜವಾಬ್ದಾರಿ ವಹಿಸಿ ಅಸಮಾಧಾನಿತ ಶಾಸಕರನ್ನು ಸಮಾಧಾನ ಮಾಡುವ ಯತ್ನವೇನೋ ಮಾಡುತ್ತಿದ್ದಾರೆ. ಆದರೆ, ಈ ಸಂಧಾನಗಳು ಎಷ್ಟರಮಟ್ಟಿಗೆ ಫಲ ನೀಡುತ್ತದೆ? ಶಾಸಕರನ್ನು ತಮ್ಮ ಪಕ್ಷದಲ್ಲಿ ಉಳಿಸಿಕೊಳ್ಳುವಲ್ಲಿ ನಾಯಕರು ಯಶಸ್ವಿಯಾಗುತ್ತಾರೆಯೇ? ಎಂಬುದನ್ನು ಕಾದುನೋಡಬೇಕಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:24 pm, Sat, 19 August 23

ತಾಜಾ ಸುದ್ದಿ
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?