ಎಸ್​ಟಿ ಸೋಮಶೇಖರ್,​​ ಬೆಂಬಲಿಗರನ್ನು ಕಾಂಗ್ರೆಸ್​ಗೆ ಕರೆತರಬೇಕೆಂದು ಕೆಪಿಸಿಸಿ ಅಧ್ಯಕ್ಷರು ಟಾಸ್ಕ್​ ನೀಡಿದ್ದಾರೆ: ಶಾಸಕ ಎನ್​ ಶ್ರೀನಿವಾಸ್​​​

ಎಸ್.ಟಿ.ಸೋಮಶೇಖರ್ ಅಥವಾ ಬೆಂಬಲಿಗರನ್ನು ಕಾಂಗ್ರೆಸ್​ಗೆ ಕರೆತರಬೇಕು ಎಂದು ಕೆಪಿಸಿಸಿ ಅಧ್ಯಕ್ಷರು ಟಾಸ್ಕ್​ ನೀಡಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಶಾಸಕ ಎನ್.ಶ್ರೀನಿವಾಸ್ ಹೇಳಿದ್ದಾರೆ. ಶಾಸಕ ಎಸ್.ಟಿ.ಸೋಮಶೇಖರ್​ ಸಹ ಕಾಂಗ್ರೆಸ್​ಗೆ ಬರುವ ವಿಶ್ವಾಸವಿದೆ. ಬೆಂಬಲಿಗರು ಬರುತ್ತೇವೆ ಅಂದ್ಮೇಲೆ ಸೋಮಶೇಖರ್ ಬಿಜೆಪಿಯಲ್ಲಿ ಇರ್ತಾರಾ ಎಂದು ಪ್ರಶ್ನಿಸಿದರು.

ಎಸ್​ಟಿ ಸೋಮಶೇಖರ್,​​ ಬೆಂಬಲಿಗರನ್ನು ಕಾಂಗ್ರೆಸ್​ಗೆ ಕರೆತರಬೇಕೆಂದು ಕೆಪಿಸಿಸಿ ಅಧ್ಯಕ್ಷರು ಟಾಸ್ಕ್​ ನೀಡಿದ್ದಾರೆ: ಶಾಸಕ ಎನ್​ ಶ್ರೀನಿವಾಸ್​​​
ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Aug 17, 2023 | 5:43 PM

ಬೆಂಗಳೂರು, ಆಗಸ್ಟ್​ 17: ಯಶವಂತಪುರ ಬಿಜೆಪಿ ಶಾಸಕ ಎಸ್​ಟಿ ಸೋಮಶೇಖರ್ (ST Somashekar)​ ಕಾಂಗ್ರೆಸ್​ ಪಕ್ಷಕ್ಕ ಮರು ಸೇರ್ಪಡೆಯಾಗಲು ಬಯಸಿದ್ದು, ಸ್ವಲ್ಪ ಕಾಲಾವಕಾಶ ಕೇಳಿದ್ದಾರೆ ಎನ್ನಲಾಗುತ್ತಿದೆ. ಇದರ ಮಧ್ಯೆ ಎಸ್.ಟಿ.ಸೋಮಶೇಖರ್ ಅಥವಾ ಬೆಂಬಲಿಗರನ್ನು ಕಾಂಗ್ರೆಸ್​ಗೆ ಕರೆತರಬೇಕು ಎಂದು ಕೆಪಿಸಿಸಿ ಅಧ್ಯಕ್ಷರು ಟಾಸ್ಕ್​ ನೀಡಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಶಾಸಕ ಎನ್.ಶ್ರೀನಿವಾಸ್ ಹೇಳಿದ್ದಾರೆ. ಹೇರೋಹಳ್ಳಿಯಲ್ಲಿರುವ ಯಶವಂತಪುರ ಶಾಸಕರ ಕಚೇರಿಯಲ್ಲಿ ನಡೆದ ಸಭೆ ಮಾತನಾಡಿದ ಅವರು, ಶಾಸಕರು ನಮ್ಮ ಪಕ್ಷಕ್ಕೆ ಬರುವುದಾದರೆ ಸಿದ್ದರಾಮಯ್ಯ ಒಪ್ಪಿಕೊಳ್ಳುತ್ತಾರೆ. ಶಾಸಕ ಸೋಮಶೇಖರ್ ಬೆಂಬಲಿಗರು ಕಾಂಗ್ರೆಸ್ ಸೇರುವುದಾಗಿ ಹೇಳಿದ್ದಾರೆ ಎಂದರು.

ಸ್ಥಳೀಯವಾಗಿ ಶಾಸಕರು, ಬೆಂಬಲಿಗರ ಕತ್ತು ಕೊಯ್ಯುವ ಕೆಲಸ ನಡೆಯುತ್ತಿದೆ: ಶಾಸಕ ಎನ್.ಶ್ರೀನಿವಾಸ್

ಶಾಸಕ ಎಸ್.ಟಿ.ಸೋಮಶೇಖರ್​ ಸಹ ಕಾಂಗ್ರೆಸ್​ಗೆ ಬರುವ ವಿಶ್ವಾಸವಿದೆ. ಬೆಂಬಲಿಗರು ಬರುತ್ತೇವೆ ಅಂದ್ಮೇಲೆ ಸೋಮಶೇಖರ್ ಬಿಜೆಪಿಯಲ್ಲಿ ಇರ್ತಾರಾ ಎಂದು ಪ್ರಶ್ನಿಸಿದರು. ಸ್ಥಳೀಯವಾಗಿ ಶಾಸಕರು, ಬೆಂಬಲಿಗರ ಕತ್ತು ಕೊಯ್ಯುವ ಕೆಲಸ ನಡೆಯುತ್ತಿದೆ. ಎಸ್.ಟಿ.ಸೋಮಶೇಖರ್​ ಬಿಜೆಪಿಯಲ್ಲಿ ಗೆದ್ದಿದ್ದು ಸ್ವಂತ ಬಲದಿಂದ. ಅವರನ್ನು ಸೋಲಿಸಲು ಬಿಜೆಪಿಯವರು JDS ಜೊತೆ ಕೈಜೋಡಿಸಿದ್ದರು. ಇದೆಲ್ಲಾ ಕಾರಣಗಳಿಂದ ಶಾಸಕ ಸೋಮಶೇಖರ್, ಬೆಂಬಲಿಗರು ಬೇಸರಗೊಂಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್​ಗೆ ಮರು ಸೇರ್ಪಡೆಗೆ ಬೆಂಬಲಿಗರ ಮನವಿ, ಸಮಯ ಕೇಳಿದ ಬಿಜೆಪಿ ಶಾಸಕ ಎಸ್​ಟಿ ಸೋಮಶೇಖರ್

ಬಿಜೆಪಿಯಲ್ಲಿ ನಮಗೆ ಉಳಿಗಾಲವಿಲ್ಲ, ನಮ್ಮ ವಿರುದ್ಧ ಪಿತೂರಿ ನಡೆಯುತ್ತಿದೆ. ಆದಷ್ಟು ಬೇಗ ಒಂದು ನಿರ್ಧಾರ ಮಾಡಿ ಎಂದು ಶಾಸಕ ಎಸ್.ಟಿ.ಸೋಮಶೇಖರ್​ಗೆ ಬೆಂಬಲಿಗರು ಒತ್ತಾಯಿಸಿದ್ದಾರೆ. ಆದರೆ ಎಸ್.ಟಿ.ಸೋಮಶೇಖರ್ ಸ್ವಲ್ಪ ಸಮಯ ಬೇಕು ಎಂದಿದ್ದಾರೆ ಎಂದು ತಿಳಿಸಿದರು.

‘ಕಾಂಗ್ರೆಸ್​ನಲ್ಲಿ ಕಾಂಗ್ರೆಸ್ ಕೆಲಸ, ಬಿಜೆಪಿಯಲ್ಲಿ BJP ಕೆಲಸ ಮಾಡುವೆ’: ಎಸ್.ಟಿ.ಸೋಮಶೇಖರ್

ನಗದಲ್ಲಿ ಶಾಸಕ ಎಸ್.ಟಿ.ಸೋಮಶೇಖರ್​ ಮಾತನಾಡಿ, ‘ಕಾಂಗ್ರೆಸ್​ನಲ್ಲಿ ಕಾಂಗ್ರೆಸ್ ಕೆಲಸ, ಬಿಜೆಪಿಯಲ್ಲಿ BJP ಕೆಲಸ ಮಾಡುವೆ’ ನಾವು ಎಲ್ಲರ ಮೇಲೂ ವಿಶ್ವಾಸ ಇಡಬೇಕಾಗುತ್ತದೆ. ನನ್ನ ಪ್ರಕಾರ ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ. ಕಾಂಗ್ರೆಸ್​ ಅಧಿಕಾರಕ್ಕೆ ಬಂದ ನಂತರ ಏಕೆ ಬದಲಾದರಿ ಎಂದು ಕೇಳಿದ್ದೇನೆ ಎಂದರು.

ಇದನ್ನೂ ಓದಿ: ಕಾಂಗ್ರೆಸ್​ನತ್ತ ಮುಖ ಮಾಡಿದ್ರಾ ಶಾಸಕ ಎಸ್​ಟಿ ಸೋಮಶೇಖರ್? ಕಟೀಲ್, ಸಿಟಿ ರವಿ ಮೇಲಿಂದ ಮೇಲೆ ಕಾಲ್

ಕುಡಿಯುವ ನೀರಿನ ಬಗ್ಗೆ ಭಿಕ್ಷೆ ಕೇಳಬೇಕೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್​ ಗಿರಿನಾಥ್​ಗೆ ಕೇಳಿದ್ದೇನೆ. ಇಂದು ಬೆಳಗ್ಗೆ ರಾಕೇಶ್ ಸಿಂಗ್​ಗೂ ರೇಗಿದ್ದೇನೆ. ಇವತ್ತಿನವರೆಗೂ ಒಂದೇ ಒಂದು ರೂಪಾಯಿ ಅನುದಾನ ಬಿಡುಗಡೆಯಾಗಿಲ್ಲ ಎಂದು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ