Sign In

By signing in or creating an account, you agree with Associated Broadcasting Company's Terms & Conditions and Privacy Policy.

CM ಸಿದ್ದರಾಮಯ್ಯ ಸೇರಿ ಇಡೀ ಟೀಂ ಚೇಂಜ್ ಆಗುತ್ತೆ: ಕಾಂಗ್ರೆಸ್ ಶಾಸಕ ವಿನಯ್​ ಕುಲಕರ್ಣಿ ಹೊಸ ಬಾಂಬ್​​

CM ಸಿದ್ದರಾಮಯ್ಯ ಸೇರಿ ಇಡೀ ಟೀಂ ಚೇಂಜ್ ಆಗುತ್ತೆ: ಕಾಂಗ್ರೆಸ್ ಶಾಸಕ ವಿನಯ್​ ಕುಲಕರ್ಣಿ ಹೊಸ ಬಾಂಬ್​​

ಅಶೋಕ ಯಡಳ್ಳಿ, ವಿಜಯಪುರ
| Updated By: ಸಾಧು ಶ್ರೀನಾಥ್​

Updated on: Aug 19, 2023 | 5:19 PM

ನಿರೀಕ್ಷೆಯನ್ನೂ ಮೀರಿ 135 ಶಾಸಕರಾಗಿದ್ದಾರೆ, ಅಲ್ಲದೆ ಮೂರ್ನಾಲ್ಕು ಜನ ಕೋ‌ ಮೇಂಬರ್ಸ್ ಇದ್ದಾರೆ. ಕೇವಲ 34 ಜನರಿಗೆ ಮಾತ್ರ ಮಂತ್ರಿ ಮಾಡಲು ಸಾಧ್ಯ, ಹಾಗಾಗಿ ಎಲ್ಲರಿಗೂ ಮಂತ್ರಿ ಸ್ಥಾನ ಕೊಡೊಕೆ ಆಗಿಲ್ಲ ಎಂದು ಧಾರವಾಡ ಶಾಸಕ ವಿನಯ ಕುಲಕರ್ಣಿ ಸಚಿವ ಕೆಎಚ್​​ ಮುನಿಯಪ್ಪ ಹೇಳಿಕೆಗೆ ಸಂತಸ ವ್ಯಕ್ತಪಡಿಸಿದ್ದಾರೆ

ವಿಜಯಪುರ: ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದವರಿಗೆ ಸಚಿವ ಸ್ಥಾನ ಸಿಗದ ವಿಚಾರವಾಗಿ ವಿಜಯಪುರದಲ್ಲಿ ಕೈ ಶಾಸಕ ವಿನಯ ಕುಲಕರ್ಣಿ (Dharwad Congress MLA Vinay kulkarni) ಮಾತನಾಡಿದ್ದಾರೆ. ಎರಡೂವರೆ ವರ್ಷದ ಬಳಿಕ ಟೀಂ ಪೂರ್ತಿ ಬದಲಾಗಲಿದೆ ಎಂದು ಕೈ ಶಾಸಕ ಬಾಂಬ್ ಸಿಡಿಸಿದ್ದಾರೆ. ಭವಿಷ್ಯದಲ್ಲಿ ಪಕ್ಷ ಮುಂದೆ ಬರುವಂತಹ ಚಾನ್ಸ್ ಸಾಕಷ್ಟು ಇದೆ, ಇಷ್ಟೊಂದು ಸಂಖ್ಯೆಯಲ್ಲಿ ಶಾಸಕರು ಆಯ್ಕೆಯಾಗಿದ್ದಾರೆ. ನಿರೀಕ್ಷೆಯನ್ನೂ ಮೀರಿ 135 ಶಾಸಕರಾಗಿದ್ದಾರೆ, ಅಲ್ಲದೆ ಮೂರ್ನಾಲ್ಕು ಜನ ಕೋ‌ ಮೇಂಬರ್ಸ್ ಇದ್ದಾರೆ. ಕೇವಲ 34 ಜನರಿಗೆ ಮಾತ್ರ ಮಂತ್ರಿ ಮಾಡಲು ಸಾಧ್ಯ, ಹಾಗಾಗಿ ಎಲ್ಲರಿಗೂ ಮಂತ್ರಿ ಸ್ಥಾನ ಕೊಡೊಕೆ ಆಗಿಲ್ಲ ಎಂದು ಧಾರವಾಡ ಶಾಸಕ ವಿನಯ ಕುಲಕರ್ಣಿ ಸಚಿವ ಕೆಎಚ್​​ ಮುನಿಯಪ್ಪ ಹೇಳಿಕೆಗೆ ಸಂತಸ ವ್ಯಕ್ತಪಡಿಸಿದ್ದಾರೆ (Vijayapura News).

ಮುನಿಯಪ್ಪ ಅವರು ಹೇಳಿದ ಹೇಳಿಕೆಗೆ ಎಲ್ಲ ಶಾಸಕರು ಸಂತಸ ವ್ಯಕ್ತಪಡಿಸಿದ್ದಾರೆ. ಎರಡೂವರೆ ವರ್ಷ ಆದಮೇಲೆ ನಾವೆಲ್ಲ ಸಚಿವರು ಬದಲಾವಣೆ ಆಗೋಣ, ಹೊಸಬರಿಗೆ ಅವಕಾಶ ಕೊಡೋಣ ಎಂದು ಹೇಳಿದ್ದಾರೆ. ನಿಗಮ ಮಂಡಳಿಗಳಿಗೆ 30 ಶಾಸಕರಂತೆ ಎರಡು ಬಾರಿ ನೇಮಕವಾಗುತ್ತಾರೆ. ಹಾಗೇ ಎರಡು ಬಾರಿ‌ ಸಚಿವರು ಬದಲಾವಣೆ ಆದರೆ ನಮ್ಮ ಶಾಸಕರು ಯಾರೂ ಸ್ಥಾನವಿಲ್ಲದೆ ಉಳಿಯೋದಿಲ್ಲಾ. ಎಲ್ಲರಿಗೂ ಅವಕಾಶ ಸಿಕ್ಕಂತಾಗುತ್ತದೆ. ಟೋಟಲ್ ಟೀಂ (Siddaramaiah Cabinet) ಬದಲಾವಣೆ ಆಗಬೇಕು ಎಂದು ಕೈ ಶಾಸಕ ವಿನಯ ಕುಲಕರ್ಣಿ ತಮ್ಮ ಲೆಕ್ಕಾಚಾರ ಮುಂದಿಟ್ಟರು.

ಸಿಎಂ ಸ್ಥಾನ ಬದಲಾವಣೆ ಕುರಿತು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಡಿಕೆಶಿ ಸೂಪರ್ ಸಿಎಂ ಎಂದು ವಿಜಯಪುರ ನಗರ ಶಾಸಕ ಯತ್ನಾಳ ಆರೋಪ ವಿಚಾರ ಎಲ್ಲಾ ಇಲಾಖೆಯ ಮಂತ್ರಿಗಳು ಸಮರ್ಥರಿದ್ದಾರೆ. ನಮ್ಮ ಪಕ್ಷದಲ್ಲಿ ಯಾವ ಇಲಾಖೆಯಲ್ಲೂ ಅಸಮರ್ಥರಿಲ್ಲಾ. ಎಲ್ಲಾ ಮಂತ್ರಿಗಳು ಸಮರ್ಥರಿದ್ದಾರೆ, ಅವರಿಗೆ ಆ ಕೆಪ್ಯಾಸಿಟಿ ಇದೆ, ಅನುಭವ ಇದೆ. ಹಾಗಾಗಿ ನಮ್ಮಲ್ಲಿ ಯಾರೂ, ಅವರು ಒಬ್ಬರು ಸೂಪರ್ ಎನ್ನುವಂತಹ ಮಾತಿಲ್ಲಾ, ಎಲ್ಲರೂ ಸೂಪರ್ ಇದ್ದಾರೆಂದಯ ಕುಲಕರ್ಣಿ ವ್ಯಾಖ್ಯಾನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ