Mandya: ಕರ್ತವ್ಯಲೋಪ ಸೇರಿದಂತೆ 13 ಕಾರಣ; ಮಂಡ್ಯ ತಹಶೀಲ್ದಾರ್ ಅಮಾನತು

| Updated By: shivaprasad.hs

Updated on: Mar 26, 2022 | 9:55 AM

Mandya Tahashildar: ಕರ್ತವ್ಯಲೋಪ ಸೇರಿ 13 ಕಾರಣಗಳನ್ನು ನೀಡಿ ಮಂಡ್ಯ ತಹಶೀಲ್ದಾರ್ ಚಂದ್ರಶೇಖರ್​ ಸಂಭಣ್ಣರನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ರಶ್ಮಿ ಆದೇಶ ಹೊರಡಿಸಿದ್ದಾರೆ.

Mandya: ಕರ್ತವ್ಯಲೋಪ ಸೇರಿದಂತೆ 13 ಕಾರಣ; ಮಂಡ್ಯ ತಹಶೀಲ್ದಾರ್ ಅಮಾನತು
ಅಮಾನತ್ತಿಗೆ ಒಳಗಾದ ಮಂಡ್ಯ ತಹಶೀಲ್ದಾರ್ ಚಂದ್ರಶೇಖರ್ ಶಂಭಣ್ಣ
Follow us on

ಮಂಡ್ಯ: ಕರ್ತವ್ಯಲೋಪ ಆರೋಪ ಹಿನ್ನೆಲೆಯಲ್ಲಿ ಮಂಡ್ಯ ತಹಶೀಲ್ದಾರ್​ರನ್ನು (Mandya Tahashildar) ಅಮಾನತುಗೊಳಿಸಲಾಗಿದೆ. ಮಂಡ್ಯ ತಹಶೀಲ್ದಾರ್ ಚಂದ್ರಶೇಖರ್ ಶಂಭಣ್ಣ (Chandrashekhar Shambhanna) ಅವರನ್ನು ಅಮಾನತು ಮಾಡಿ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ರಶ್ಮಿ ಆದೇಶ ಹೊರಡಿಸಿದ್ದಾರೆ. ಚಂದ್ರಶೇಖರ್ ವಿರುದ್ಧ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪವಿತ್ತು. ಹಾಗೆಯೇ ಕೊರೊನಾ ವೇಳೆ ಕರ್ತವ್ಯ ಲೋಪವೆಸಗಿದ ಆರೋಪವಿತ್ತು. ಕರ್ತವ್ಯಲೋಪ ಸೇರಿದಂತೆ 13 ಕಾರಣ ನೀಡಿ ಚಂದ್ರಶೇಖರ್ ಶಂಭಣ್ಣರನ್ನು ಅಮಾನತು ಮಾಡಲಾಗಿದೆ.

ಚಂದ್ರಶೇಖರ್ ಶಂಭಣ್ಣ ಅಮಾನತಿಗೆ ಕಾರಣವೇನು?

ಅಮಾನತಿಗೆ ಕರ್ತವ್ಯ ಲೋಪ ಸೇರಿ 13 ಕಾರಣ ನೀಡಲಾಗಿದೆ. ಕೋವಿಡ್ ಸಂದರ್ಭದಲ್ಲಿ, 144 ಸೆಕ್ಷನ್ ಇದ್ದಾಗಲೂ ನೂರಾರು ಜನರನ್ನು ಸೇರಿಸಿಕೊಂಡು ಪುತ್ರನ ಬರ್ತಡೇ ಆಚರಣೆ ಮಾಡಿದ ಆರೋಪವಿತ್ತು. ನಿವೇಶನ ಹಂಚಿಕೆಗೆ ಲಂಚ ಬೇಡಿಕೆ ಆರೋಪವಿತ್ತು. ಸೀಜ್ ಆಗಿದ್ದ ಪಡಿತರ ಅಕ್ಕಿ ನಾಪತ್ತೆ ಪ್ರಕರಣದಲ್ಲಿ ದೂರು ಕೊಡಲು ತಕ್ಷಣ ಕ್ರಮವಹಿಸದೆ ಇರುವುದು ಮತ್ತು ಅಕ್ಕಿ ನಾಪತ್ತೆಯಾಗಲು ತಹಸಿಲ್ದಾರ್ ಕೂಡ ಪರೋಕ್ಷ‌ ಕಾರಣ ಎಂಬ ಆರೋಪ ಶಂಭಣ್ಣ ಮೇಲಿತ್ತು. ಚೆಸ್ಕಾಂ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಹಾಗೂ ಅವಾಚ್ಯ ಶಬ್ಧಗಳಿಂದ ಚೆಸ್ಕಾಂ ಅಧಿಕಾರಿ, ಸಿಬ್ಬಂದಿಗಳಿಗೆ ನಿಂದನೆ‌ ಆರೋಪವೂ ಇತ್ತು. ಕಚೇರಿ‌ ನಿರ್ವಹಣೆಯಲ್ಲಿ ಕೆಲವು ಲೋಪ ಸೇರಿದಂತೆ 13 ಕಾರಣ ನೀಡಿ ಸಸ್ಪೆಂಡ್ ಮಾಡಲಾಗಿದೆ.

ಮಂಡ್ಯ: ಮಳವಳ್ಳಿಯಲ್ಲಿ ಭಾರಿ ಮಳೆಗೆ ನೆಲಕಚ್ಚಿದ ಬಾಳೆ ತೋಟ

ಮಂಡ್ಯ: ಮಳವಳ್ಳಿ ತಾಲೂಕಿನ ಚಿಲ್ಲಾಪುರದಲ್ಲಿ ಗಾಳಿ ಸಹಿತ ಭಾರಿ ಮಳೆಗೆ ಬಾಳೆ ತೋಟ ನೆಲಕಚ್ಚಿದೆ. ರೈತ ಶಿವಸ್ವಾಮಿಗೆ ಸೇರಿದ, ಕಟಾವಿಗೆ ಬಂದಿದ್ದ 2 ಸಾವಿರ ಬಾಳೆ ಗಿಡ ನಾಶವಾಗಿದೆ. ಸೂಕ್ತ ಪರಿಹಾರಕ್ಕೆ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಇದೇ ರೀತಿ ಗಾಳಿ ಮಳೆಯಿಂದ ನಷ್ಟವಾಗಿತ್ತು. ಈ ವರ್ಷವು ಬಾಳೆ ನೆಲಕಚ್ಚಿ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು, ಪರಿಹಾರಕ್ಕೆ ರೈತ ಆಗ್ರಹಿಸಿದ್ದಾರೆ.

ಬೆಂಗಳೂರು: ಆಗರ ಕ್ರಾಸ್ ಬಳಿ ಕಾಡಾನೆಗೆ ಬಸ್​ ಡಿಕ್ಕಿ; ಬಸ್​ನ ಮುಂಭಾಗ ಜಖಂ

ಬೆಂಗಳೂರು: ಕನಕಪುರ ಮುಖ್ಯ ರಸ್ತೆಯ ಆಗರ ಕ್ರಾಸ್ ಬಳಿ ಕಾಡಾನೆಗೆ ಬಿಎಂಟಿಸಿ ಬಸ್ ಡಿಕ್ಕಿಯಾಗಿದೆ. ಘಟನೆಯಲ್ಲಿ ಚಾಲಕನ ಕಾಲಿಗೆ ಗಾಯಗಳಾಗಿದ್ದು, ಆನೆ ಗುದ್ದಿದ ರಭಸಕ್ಕೆ ಬಸ್​​ನ ಮುಂಭಾಗ ಜಖಂಗೊಂಡಿದೆ.

ಇದನ್ನೂ ಓದಿ:

ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿ ಶ್ರೀಗಂಧ ಬೆಳೆಗಾರರಿಂದ ಅರೆಬೆತ್ತಲೆ ಪ್ರತಿಭಟನೆ; 27ನೇ ದಿನಕ್ಕೆ ಕಾಲಿಟ್ಟ ಹೋರಾಟ

Crime News: ಹಿರಿ ಸಹೋದರನನ್ನು ಕೊಲೆ ಮಾಡಿದವನ ಬಂಧನ, ಕೃಷಿ ಹೊಂಡದಲ್ಲಿ ತಾಯಿ-ಮಗನ ಶವ ಪತ್ತೆ

Published On - 8:51 am, Sat, 26 March 22