ಬೇಗ ಹುಡುಗಿ ಸಿಗಲೆಂದು ಮಂಡ್ಯ ಯುವಕರಿಂದ ಆದಿಚುಂಚನಗಿರಿ ಮಠಕ್ಕೆ ಪಾದಯಾತ್ರೆ

|

Updated on: Nov 15, 2023 | 9:17 AM

ಕೃಷಿಯಲ್ಲಿ ತೊಡಗಿರುವ ಯುವಕರಿಗೆ ‘ವಧು ಭಾಗ್ಯ’ ಕಲ್ಪಿಸಲು ರಾಜ್ಯ ಸರ್ಕಾರ ಕ್ರಿಯಾ ಯೋಜನೆ ಜಾರಿಗೆ ತರಬೇಕು ಎಂದು ಮಂಡ್ಯದ ಯುವಕ ಗಿರಿಮಲ್ಲು ಒತ್ತಾಯಿಸಿದರು. ನೂರಾರು ತೊಂದರೆಗಳಿಂದ ನಮ್ಮ ಹಳ್ಳಿ ಯುವಕರು ಮದುವೆಯ ಕನಸು ಕಾಣುವುದನ್ನು ನಿಲ್ಲಿಸಿದ್ದಾರೆ ಎಂದು ಹೇಳಿದರು.

ಬೇಗ ಹುಡುಗಿ ಸಿಗಲೆಂದು ಮಂಡ್ಯ ಯುವಕರಿಂದ ಆದಿಚುಂಚನಗಿರಿ ಮಠಕ್ಕೆ ಪಾದಯಾತ್ರೆ
ಸಾಂದರ್ಭಿಕ ಚಿತ್ರ
Follow us on

ಮಂಡ್ಯ ನ.15: ಅದೆಷ್ಟೊ ಯುವಕರು ಕನ್ಯೆ (Bride) ಸಿಗದೆ ಜಿಗುಪ್ಸೆಗೆ ಒಳಗಾಗುತ್ತಿದ್ದಾರೆ. ಅದರಲ್ಲಂತು ಯುವ ರೈತರಿಗೆ ನಮ್ಮ ಮಗಳನ್ನು ಕೊಡುವುದಿಲ್ಲವೆಂದು ಪೋಷಕರು ಸಾರಾಸಗಾಟವಾಗಿ ಹೇಳುತ್ತಿದ್ದಾರೆ. ಇದರಿಂದ 30 ವಯಸ್ಸು ದಾಟಿದರೂ ಯುವಕರಿಗೆ ಕನ್ಯೆ ಸಿಗುತ್ತಿಲ್ಲ. ಕೊರೊನಾ ನಂತರ ಯುವಕರು ಖಾಸಗಿ ಉದ್ಯೋಗ ತೊರೆದು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಇವರಿಗೆ ಯಾವ ಪೋಷಕರು ಕನ್ಯೆ ಕೊಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಂಡ್ಯದ 30 ವರ್ಷ ಮೇಲ್ಪಟ್ಟ ಯುವಕರು ಡಿಸೆಂಬರ್‌ನಲ್ಲಿ ಎರಡು ಉದ್ದೇಶಗಳೊಂದಿಗೆ ಜಿಲ್ಲೆಯ ಪ್ರಭಾವಿ ಮಠವಾದ ಶ್ರೀ ಆದಿಚುಂಚನಗಿರಿ ಮಠಕ್ಕೆ (Adichunchanagiri Mutt) ಪಾದಯಾತ್ರೆ ಕೈಗೊಳ್ಳಲು ನಿರ್ಧರಿಸಿದ್ದಾರೆ. ಒಂದು ಅದೃಷ್ಟದ ಬದಲಾವಣೆಗೆ ಮತ್ತು ಅವರ ಸಂಕಟದ ಬಗ್ಗೆ ಜಾಗೃತಿ ಮೂಡಿಸಲು.

ಈ ವರ್ಷ ನಡೆಯುತ್ತಿರುವ ಎರಡನೇ ಪಾದಯಾತ್ರೆ ಇದಾಗಿದೆ. ಕೃಷಿಯಲ್ಲಿ ತೊಡಗಿರುವ ಯುವಕರಿಗೆ ‘ವಧು ಭಾಗ್ಯ’ ಕಲ್ಪಿಸಲು ರಾಜ್ಯ ಸರ್ಕಾರ ಕ್ರಿಯಾ ಯೋಜನೆ ಜಾರಿಗೆ ತರಬೇಕು ಎಂದು ಮಂಡ್ಯದ ಯುವಕ ಗಿರಿಮಲ್ಲು ಒತ್ತಾಯಿಸಿದರು. ನೂರಾರು ತೊಂದರೆಗಳಿಂದ ನಮ್ಮ ಹಳ್ಳಿ ಯುವಕರು ಮದುವೆಯ ಕನಸು ಕಾಣುವುದನ್ನು ನಿಲ್ಲಿಸಿದ್ದಾರೆ ಎಂದು ಗಿರಿಮಲ್ಲು ಹೇಳಿದರು.

ಇದನ್ನೂ ಓದಿ: ಮನೆ ಇಲ್ಲವೆಂದು ಕನ್ಯೆ ಕೊಡುತ್ತಿಲ್ಲ, ನಿವೇಶನ ಕೊಡಿ, ಇಲ್ಲ ದಯಾಮರಣ ಅನುಮತಿ ನೀಡಿ: ಜನತಾ ದರ್ಶನದಲ್ಲಿ ವ್ಯಕ್ತಿ ಅಳಲು

ಇದೇನು ಮೊದಲ ಪಾದಯಾತ್ರೆಯಲ್ಲ ಈ ಹಿಂದೆ ಫೆಬ್ರವರಿಯಲ್ಲಿ ಯುವ ಕೃಷಿಕರು ಕನ್ಯೆ ಸಿಗುತ್ತಿಲ್ಲವೆಂದು ಮಳವಳ್ಳಿ ತಾಲೂಕಿನಿಂದ ಚಾಮರಾಜನಗರ ಜಿಲ್ಲೆಯ ಎಂ.ಎಂ.ಹಿಲ್ಸ್‌ವರೆಗೆ ಪಾದಯಾತ್ರೆ ಕೈಗೊಂಡಿದ್ದರು.
ಮಾತನಾಡಿ, ಜನರು ವಧು ಹುಡುಕುವ ಸವಾಲುಗಳ ಬಗ್ಗೆ ಹೆಚ್ಚು ತಿಳಿದಿದ್ದಾರೆ. ಆದರೆ “ವಧುಗಳು ಮತ್ತು ಅವರ ಕುಟುಂಬಗಳ ಮನಸ್ಥಿತಿ” ಯಲ್ಲಿ ಯಾವುದೇ ಸ್ಪಷ್ಟವಾದ ಬದಲಾವಣೆ ಇಲ್ಲ ಎಂದು ಅಖಿಲ ಕರ್ನಾಟಕ ಬ್ರಹ್ಮಚಾರಿಗಳ ಸಂಘದ ಸಂಸ್ಥಾಪಕ ಕೆ.ಎಂ.ಶಿವಪ್ರಸಾದ್ ಹೇಳಿದ್ದರು.

ನಾವು ವರದಕ್ಷಿಣೆ ಕೇಳುತ್ತಿಲ್ಲ, ಸಂಸಾರವನ್ನು ನಿಭಾಯಿಸಿಕೊಂಡು ಹೋದರೆ ಸಾಕು. ಆದರೆ ಯಾವ ಕುಟುಂಬವೂ ನಮಗೆ ಹೆಣ್ಣು ಕೊಡಲು ಸಿದ್ಧರಿಲ್ಲ ಎಂದು ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಸಂತೋಷ್ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ