ಮಂಡ್ಯ, ಜೂನ್.16: ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದ (Melukote Cheluvanarayana Swamy Temple) ಪ್ರಥಮ ಸ್ಥಾನಿಕ ಕರಗಂ ನಾರಾಯಣ ಅಯ್ಯಂಗಾರ್ (82) (Karagaon Narayana Iyengar) ಅವರು ಭಾನುವಾರ ವಿಧಿವಶರಾಗಿದ್ದಾರೆ. ಅಂತ್ಯಕ್ರಿಯೆ ಮುಗಿಯುವವರೆಗೂ ಮೇಲುಕೋಟೆ ದೇವಾಲಯ ಬಾಗಿಲು ಮುಚ್ಚಿರಲಿದ್ದು ಮಧ್ಯಾಹ್ನ 12 ಗಂಟೆ ನಂತರ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಕರಗಂ ನಾರಾಯಣ ಅಯ್ಯಂಗಾರ್ ಅವರು ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ, ನಿವೃತ್ತಿ ಬಳಿಕ ದೇವಾಲಯದಲ್ಲಿ ಸ್ಥಾನಿಕರಾಗಿದ್ದರು. ಅಲ್ಲದೆ ರಾಜ್ಯ ಪ್ರಶಸ್ತಿಗೂ ಭಾಜನರಾಗಿದ್ದರು. ನಿವೃತ್ತಿ ಬಳಿಕ ಚೆಲುವನಾರಾಯಣನ ಸೇವೆಗಾಗಿಯೇ ತಮ್ಮ ಇಡೀ ಜೀವನ ಮುಡಿಪಾಗಿಟ್ಟಿದ್ದರು. ಶಿಕ್ಷಣ ಕ್ಷೇತ್ರದಲ್ಲೂ ದೀರ್ಘ ಅನುಪಮ ಸೇವೆ ಸಲ್ಲಿಸಿದ್ದರು. ದೇವಾಲಯದ ಸಾಂಪ್ರದಾಯಿಕ ಮರ್ಯಾದೆಯೊಡನೆ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ. ಮೇಲುಕೋಟೆಯಲ್ಲಿ ಇಂದು ಕರಗಂ ನಾರಾಯಣ ಅಯ್ಯಂಗಾರ್ ಅಂತ್ಯಕ್ರಿಯೆ ನಡೆಯಲಿದೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಇದನ್ನೂ ಓದಿ: ತಂದೆಯ ಅಂತ್ಯಕ್ರಿಯೆ ನೆರವೇರಿಸಿದ ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪಿ ಅನುಕುಮಾರ್
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿರುವ ಮೇಲುಕೋಟೆ ಮೈಸೂರಿನಿಂದ 50 ಕಿ.ಮೀ ಮತ್ತು ಬೆಂಗಳೂರಿನಿಂದ 133 ಕಿ.ಮೀ ದೂರದಲ್ಲಿದೆ. ತಿರುನಾರಾಯಣಪುರಂ ಎಂದೂ ಕರೆಯಲ್ಪಡುವ ಈ ತಾಣ ಕರ್ನಾಟಕದ ಜನಪ್ರಿಯ ಯಾತ್ರಾಸ್ಥಳಗಳಲ್ಲಿ ಒಂದು. ಮಹಾನ್ ವೈಷ್ಣವ ಸಂತ ಶ್ರೀ ರಾಮಾನುಜಾಚಾರ್ಯರು ಕ್ರಿ.ಶ 12 ನೇ ಶತಮಾನದಲ್ಲಿ ಸುಮಾರು 14 ವರ್ಷಗಳ ಕಾಲ ಇಲ್ಲಿ ವಾಸಿಸುತ್ತಿದ್ದರು. ಆದ್ದರಿಂದ ಇದು ಬ್ರಾಹ್ಮಣರ ಶ್ರೀವೈಷ್ಣವ ಪಂಥದ ಪ್ರಮುಖ ಕೇಂದ್ರವಾಗಿದೆ. ಇಲ್ಲಿ ಎರಡು ಜನಪ್ರಿಯ ದೇವಾಲಯಗಳಿವೆ.
ಒಂದು ಚೆಲುವನಾರಾಯಣ ಸ್ವಾಮಿ ದೇವಸ್ಥಾನ ಮತ್ತು ಇನ್ನೊಂದು ಯೋಗ ನರಸಿಂಹ ಸ್ವಾಮಿ ದೇವಸ್ಥಾನ. ಶ್ರೀ ರಾಮಾನುಜಾಚಾರ್ಯರು ಈ ಸ್ಥಳಕ್ಕೆ ಬರುವ ಮೊದಲೇ ಈ ದೇವಾಲಯಗಳು ಅಸ್ತಿತ್ವದಲ್ಲಿದ್ದವು. ಮುಖ್ಯ ದೇವಾಲಯವನ್ನು ತಿರುನಾರಾಯಣ ಅಥವಾ ಚೆಲುವರಾಯ ಎಂದು ಕರೆಯಲ್ಪಡುವ ವಿಷ್ಣುವಿಗೆ ಸಮರ್ಪಿಸಲಾಗಿದೆ. ದೇವತೆಯ ಉತ್ಸವಮೂರ್ತಿ ಅಥವಾ ಮೆರವಣಿಗೆಯ ವಿಗ್ರಹವನ್ನು ಚೆಲುವಾಪಿಲ್ಲೆ ರಾಯ ಎಂದು ಕರೆಯಲಾಗುತ್ತದೆ, ಇದರ ಮೂಲ ಹೆಸರು ರಾಮಪ್ರಿಯಾ. ಮೊಘಲರು ಈ ಸ್ಥಳವನ್ನು ಆಕ್ರಮಿಸಿದಾಗ ಈ ಉತ್ಸವಮೂರ್ತಿ ಕಳೆದುಹೋಗಿತ್ತಂತೆ. ನಂತರ ಅದನ್ನು ಮೊಹಮ್ಮದ್ ಷಾ ಅವರ ಪುತ್ರಿ ಬೀಬಿ ನಾಚಿಯಾರ್‌ನಿಂದ ರಾಮಾನುಜಾಚಾರ್ಯರು ವಶಪಡಿಸಿಕೊಂಡರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ