MySugar Factory: ಕಬ್ಬು ಅರೆಯಲು ಮಂಡ್ಯ ಮೈಶುಗರ್ ಸಜ್ಜು: ಜೂ. 23 ರಿಂದ ಮತ್ತೆ ಆರಂಭ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 17, 2024 | 11:04 PM

ಜೂನ್ 23 ರಿಂದ ಬಾಯ್ಲರ್ ಕಾರ್ಯಾಚರಣೆ ಆರಂಭವಾಗಲಿದೆ. ಅಂದಹಾಗೆ ಸಾಕಷ್ಟು ವಿವಾದ, ನಷ್ಟ, ಆಕ್ರಮ ಹೀಗೆ ಹಲವು ವಿಚಾರಗಳಿಂದ ಮಂಡ್ಯದ ಮೈ ಶುಗರ್ ಸಕ್ಕರೆ ಕಾರ್ಖಾನೆ ಸಾಕಷ್ಟು ಹೆಸರುಗಳಿಸಿತ್ತು. ನಷ್ಟದಿಂದಾಗಿ ಕೆಲ ವರ್ಷಗಳ ಕಾಲ ಕೂಡ ಬಂದ್ ಆಗಿತ್ತು. ಆ ನಂತರ ಪರಿಹಾರ ನೀಡಿದ ಹಿನ್ನೆಲೆಯಲ್ಲಿ ಕಳೆದ ವರ್ಷ ಕಾರ್ಖಾನೆ ಪುನಾರಾಂಭವಾಗಿತ್ತು.

MySugar Factory: ಕಬ್ಬು ಅರೆಯಲು ಮಂಡ್ಯ ಮೈಶುಗರ್ ಸಜ್ಜು: ಜೂ. 23 ರಿಂದ ಮತ್ತೆ ಆರಂಭ
ಕಬ್ಬು ಅರೆಯಲು ಮಂಡ್ಯ ಮೈಶುಗರ್ ಸಜ್ಜು: ಜೂ. 23 ರಿಂದ ಮತ್ತೆ ಆರಂಭ
Follow us on

ಮಂಡ್ಯ, ಜೂನ್​ 17: ಮಂಡ್ಯದ (Mandya) ಮೈ ಶುಗರ್ (MySugar Factory) ಸಕ್ಕರೆ ಕಾರ್ಖಾನೆ. ರಾಜ್ಯದ ಏಕೈಕ ಸರ್ಕಾರಿ ಸಾಮ್ಯದ ಸಕ್ಕರೆ ಕಾರ್ಖಾನೆ. ಮಂಡ್ಯ ಜಿಲ್ಲೆಯ ರೈತರ ಜೀವನಾಡಿ. ನಷ್ಟದಲ್ಲಿ ಇದ್ದ ಕಾರ್ಖಾನೆಗೆ ಸರ್ಕಾರ ಜೀವ ತುಂಬಿತ್ತು. ಈ ವರ್ಷ ಮತ್ತೆ ಕಬ್ಬು ಅರೆಯುವಿಕೆಗೆ ಸಜ್ಜಾಗಿದೆ. ರಾಜ್ಯದ ಏಕೈಕ ಸರ್ಕಾರಿ ಸಾಮ್ಯದ ಸಕ್ಕರೆ ಕಾರ್ಖಾನೆ 2024-25ನೇ ಸಾಲಿನ ಕಬ್ಬು ಅರೆಯುವಿಕೆಗೆ ಸಜ್ಜಾಗಿದೆ.

ಜೂನ್ 23 ರಿಂದ ಬಾಯ್ಲರ್ ಕಾರ್ಯಾಚರಣೆ ಆರಂಭವಾಗಲಿದೆ. ಅಂದಹಾಗೆ ಸಾಕಷ್ಟು ವಿವಾದ, ನಷ್ಟ, ಆಕ್ರಮ ಹೀಗೆ ಹಲವು ವಿಚಾರಗಳಿಂದ ಮಂಡ್ಯದ ಮೈ ಶುಗರ್ ಸಕ್ಕರೆ ಕಾರ್ಖಾನೆ ಸಾಕಷ್ಟು ಹೆಸರುಗಳಿಸಿತ್ತು. ನಷ್ಟದಿಂದಾಗಿ ಕೆಲ ವರ್ಷಗಳ ಕಾಲ ಕೂಡ ಬಂದ್ ಆಗಿತ್ತು. ಆ ನಂತರ ಪರಿಹಾರ ನೀಡಿದ ಹಿನ್ನೆಲೆಯಲ್ಲಿ ಕಳೆದ ವರ್ಷ ಕಾರ್ಖಾನೆ ಪುನಾರಾಂಭವಾಗಿತ್ತು.

ಇದನ್ನೂ ಓದಿ: ಮೈಶುಗರ್ ಆವರಣದಲ್ಲಿ ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಮಂಡ್ಯದ ಪ್ರತಿ ಮನೆಯಿಂದಲೂ ಮಣ್ಣು ಸಂಗ್ರಹ

ಕಳೆದ ಸಾಲಿನಲ್ಲಿ ನಾಲ್ಕು ಲಕ್ಷ ಟನ್ ಕಬ್ಬು ಅರೆಯುವಿಕೆ ಕೆಲಸ ಕೂಡ ನಡೆದಿತ್ತು. ಅದರಂತೆ ಈ ಬಾರಿ ಕೂಡ ಜೂನ್ ತಿಂಗಳಲ್ಲಿಯೇ ಈ ಬಾರಿಯ ಕಬ್ಬು ಅರೆಯುವಿಕೆಗೆ ಸಜ್ಜಾಗಿದೆ.

ಅಂದಹಾಗೆ 1932ರಲ್ಲಿ ಸ್ಥಾಪನೆಯಾಗಿರೋ ಮೈಶುಗರ್ ಸಕ್ಕರೆ ಕಾರ್ಖಾನೆ ಸಾಕಷ್ಟು ಹಳೆಯದಾಗಿದೆ. ಕಾರ್ಖಾನೆಯಲ್ಲಿ ಹಳೆಯದಾದ ಯಂತ್ರೋಪಕರಣಗಳು ಕೂಡ ಇವೆ. ಅಲ್ಲದೆ ಆಗಾದ ಸಾಕಷ್ಟು ನಷ್ಟು ಕೂಡ ಉಂಟಾಗುತ್ತಿದೆ. ಹೀಗಾಗಿ ಸುಮಾರು 500 ರೂ ಕೋಟಿ ರೂ ವೆಚ್ಚದಲ್ಲಿ ಮಂಡ್ಯದ ಹೊರವಲಯದಲ್ಲಿ ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿದೆ.

ಇದನ್ನೂ ಓದಿ: ಕೊನೆಗೂ ಆರಂಭವಾದ ಮಂಡ್ಯದ ಮೈಶುಗರ್ ಕಾರ್ಖಾನೆ, ಸಿದ್ದರಾಮಯ್ಯ ಸರ್ಕಾರದಿಂದ ಸಿಕ್ತು ಮೊದಲ ಅನುದಾನ

ಇದಕ್ಕೆ ಸಾಕಷ್ಟು ವಿರೋಧಗಳು ಕೂಡ ಬಂದಿದೆ. ಇದರ ನಡುವೆ ಇನ್ನೇನೂ ಕೆಲವೇ ದಿನಗಳಲ್ಲಿ ಶಂಕುಸ್ಥಾಪನೆಗೂ ಕೂಡ ಸರ್ಕಾರ ಮುಂದಾಗಿದೆ. ಇನ್ನು ನೂತನ ಕಾರ್ಖಾನೆ ಬಗ್ಗೆ ಕೇಂದ್ರದ ಉಕ್ಕು ಹಾಗೂ ಬಾರಿ ಕೈಗಾರಿಕೆಗಳ ಸಚಿವ ಹೆಚ್ ಡಿಕೆ ವ್ಯಂಗ್ಯವಾಡಿದ್ದು, ಖಾಸಗಿ ಸಹಭಾಗಿತ್ವದಲ್ಲಿ ಕಾರ್ಖಾನೆಗೆ ಮುಂದಾಗಿದ್ದಾರೆ. ಅದು ಸ್ಯಾಧ್ಯನಾ ಎಂದು ಪ್ರಶ್ನೆ ಮಾಡಿದ್ದಾರೆ.

ಒಟ್ಟಾರೆ ಸಾಕಷ್ಟು ವಿವಾದದ ನಡುವೆ ಹೊಸ ಕಾರ್ಖಾನೆ ಸ್ಥಾಪನೆಗೆ ಸರ್ಕಾರ ಮುಂದಾಗಿದ್ದು, ಈ ವರ್ಷದ ಕಬ್ಬು ಅರೆಯುವಿಕೆ ಕೂಡ ಆರಂಭವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.