ಕೊನೆಗೂ ಆರಂಭವಾದ ಮಂಡ್ಯದ ಮೈಶುಗರ್ ಕಾರ್ಖಾನೆ, ಸಿದ್ದರಾಮಯ್ಯ ಸರ್ಕಾರದಿಂದ ಸಿಕ್ತು ಮೊದಲ ಅನುದಾನ

ಬಾಯ್ಲರ್‌ಗೆ ಬೆಂಕಿ ಹಾಕುವ ಮೂಲಕ ಮಂಡ್ಯದಲ್ಲಿರುವ ಮೈಶುಗರ್ ಸಕ್ಕರೆ ಕಾರ್ಖಾನೆಗೆ ಸಚಿವ ಶಿವಾನಂದ ಎಸ್.ಪಾಟೀಲ್ ಚಾಲನೆ ನೀಡಿದರು.​ ಈ ವೇಳೆ ಕೃಷಿ ಇಲಾಖೆ ಸಚಿವ ಎನ್​.ಚಲುವರಾಯಸ್ವಾಮಿ ಕಾರ್ಖಾನೆ ಪುನಾರಂಭಿಸಲು 50 ಕೋಟಿ ಮಂಜೂರು ಮಾಡಿದ ಸಿಎಂ, ಡಿಸಿಎಂಗೆ ಕೃತಜ್ಞತೆ ಸಲ್ಲಿಸಿದರು.

ಕೊನೆಗೂ ಆರಂಭವಾದ ಮಂಡ್ಯದ ಮೈಶುಗರ್ ಕಾರ್ಖಾನೆ, ಸಿದ್ದರಾಮಯ್ಯ ಸರ್ಕಾರದಿಂದ ಸಿಕ್ತು ಮೊದಲ ಅನುದಾನ
ಮಂಡ್ಯ ಸಕ್ಕರೆ ಕಾರ್ಖಾನೆ ಪ್ರಾರಂಭ
Follow us
|

Updated on: Jun 16, 2023 | 1:30 PM

ಮಂಡ್ಯ: ಬಾಯ್ಲರ್‌ಗೆ ಬೆಂಕಿ ಹಾಕುವ ಮೂಲಕ ಮಂಡ್ಯ(Mandya)ದಲ್ಲಿರುವ ಮೈಶುಗರ್ ಸಕ್ಕರೆ ಕಾರ್ಖಾನೆಗೆ ಸಚಿವ ಶಿವಾನಂದ ಎಸ್ ಪಾಟೀಲ್(Shivanand Patil)ಚಾಲನೆ ನೀಡಿದರು. ಹೌದು 2023-24ನೇ ಸಾಲಿನ ಕಬ್ಬು ನುರಿಯುವ ಹಂಗಾಮಿಗೆ ಚಾಲನೆ ಸಕ್ಕರೆ ಸಚಿವರು ಚಾಲನೆ ನೀಡಿದ್ದು, ಅವರಿಗೆ ಸಚಿವ ಚಲುವರಾಯಸ್ವಾಮಿ(Chaluvaraya Swamy) ಹಾಗೂ ಸ್ಥಳೀಯ ಶಾಸಕರು ಸಾಥ್ ನೀಡಿದ್ದಾರೆ. ಬಾಯ್ಲರ್‌ಗೆ ಬೆಂಕಿ‌ ಹಾಕುವ ಮುನ್ನ ಮೈಶುಗರ್‌ನಲ್ಲಿ‌ ಪುರೋಹಿತ ವರ್ಗ ವಿಶೇಷ ಪೂಜೆ ಹಾಗೂ‌ ಹೋಮ‌ ನಡೆಸಿದರು. ಈ ವೇಳೆ ಮೈಶುಗರ್‌ ಕಾರ್ಖಾನೆ‌ಗೆ ಅಡ್ಡಿ-ಅಡತಡೆಗಳು ಎದುರಾಗದಂತೆ ಪ್ರಾರ್ಥಿಸಿದರು.

ಈ ವೇಳೆ ಕೃಷಿ ಇಲಾಖೆ ಸಚಿವ ಎನ್​.ಚಲುವರಾಯಸ್ವಾಮಿ ಮಾತನಾಡಿ ‘ಮಂಡ್ಯಕ್ಕೆ ಕಾಂಗ್ರೆಸ್ ಸರ್ಕಾರದ ಮೊದಲ ಅನುದಾನ ನೀಡಲಾಗಿದೆ. ಮೈಶುಗರ್ ಕಾರ್ಖಾನೆ ಪುನಾರಂಭಿಸಲು 50 ಕೋಟಿ ಮಂಜೂರು ಮಾಡಿದ್ದು, ಜಿಲ್ಲೆಯ ರೈತರ ಪರವಾಗಿ ಸಿಎಂ, ಡಿಸಿಎಂಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕಾರ್ಖಾನೆ ಪುನಾರಂಭಕ್ಕೆ ಸರ್ಕಾರ ಎಲ್ಲಾ ರೀತಿಯ ಬೆಂಬಲ ನೀಡಲಿದೆ. ಜೂನ್ ಅಂತ್ಯದಲ್ಲಿ ಕಬ್ಬು ನುರಿಯುವ ಕಾರ್ಯ ಆರಂಭವಾಗಲಿದೆ. ಯಾವ ಸಮಸ್ಯೆ ಬಾರದಂತೆ ಮೈಶುಗರ್ ಕಾರ್ಖಾನೆ ನಡೆಯಲಿದೆ ಎಂದರು.

ಇದನ್ನೂ ಓದಿ:Bidar Sugar Mill: ರಾಜಕೀಯಕ್ಕೆ ಬಲಿಯಾಯ್ತಾ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ -ಆಡಳಿತಾರೂಢ ಬಿಜೆಪಿ ಸರ್ಕಾರ ಹೇಳಿದ್ದೇನು, ಮಾಡಿದ್ದೇನು?

ಇದೇ ಸಂದರ್ಭದಲ್ಲಿ APMC ಕಾಯ್ದೆ ವಾಪಾಸ್ ವಿಚಾರ ‘ನಾವು ಕೊಟ್ಟ ಭರವಸೆಗಳು ಹಂತ ಹಂತವಾಗಿ ಈಡೇರಿಸುತ್ತೇವೆ. ವಿದ್ಯುತ್ ದರ ಜಾಸ್ತಿ, ಕಡಿಮೆ ಮಾಡುವುದಕ್ಕೆ ನಿಗಮವಿದೆ. ಸರ್ಕಾರದ ಕೈಲಿ ಆ ತೀರ್ಮಾನ ಇರಲ್ಲ. ಯಾವ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ತಡೆಹಿಡಿದಿಲ್ಲ. ಅನಾವಶ್ಯಕವಾಗಿ ಟೆಂಡರ್‌ಗೆ ಹೋಗಿರುವ ಯೋಜನೆಗಳನ್ನು ಪರಿಶೀಲಿಸುವುದಾಗಿ ಸಿಎಂ ಹೇಳಿದ್ದಾರೆ ಎಂದು ಸ್ಪಷ್ಟ ಪಡಿಸಿದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ