Sign In

By signing in or creating an account, you agree with Associated Broadcasting Company's Terms & Conditions and Privacy Policy.

Bidar Sugar Mill: ರಾಜಕೀಯಕ್ಕೆ ಬಲಿಯಾಯ್ತಾ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ -ಆಡಳಿತಾರೂಢ ಬಿಜೆಪಿ ಸರ್ಕಾರ ಹೇಳಿದ್ದೇನು, ಮಾಡಿದ್ದೇನು?

ಅಕ್ಟೋಬರ್ ನಲ್ಲಿ ಬಾಯ್ಲರ್ ಪೂಜೆ ಮಾಡಿ ನವೆಂಬರ್ ನಲ್ಲಿ ಕಬ್ಬು ನುರಿಸುವ ಕೆಲಸ ಆಗಬೇಕು. ಆದರೆ ಜಿಲ್ಲೆಯ ಎಲ್ಲಾ ಕಾರ್ಖಾನೆಗಳು ಆರಂಭವಾಗಿದ್ದು ಬಿಎಸ್ ಎಸ್ ಕೆ ಮಾತ್ರ ಇನ್ನೂ ಆರಂಭವಾಗಿಲ್ಲ. ಇದು ಸಹಜವಾಗಿಯೇ ರೈತರ ಆಕ್ರೋಶ ಹೆಚ್ಚಿಸುವಂತೆ ಮಾಡಿದೆ.

Bidar Sugar Mill: ರಾಜಕೀಯಕ್ಕೆ ಬಲಿಯಾಯ್ತಾ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ -ಆಡಳಿತಾರೂಢ ಬಿಜೆಪಿ ಸರ್ಕಾರ ಹೇಳಿದ್ದೇನು, ಮಾಡಿದ್ದೇನು?
ರಾಜಕೀಯಕ್ಕೆ ಬಲಿಯಾಯ್ತಾ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Dec 31, 2022 | 6:00 PM

ಅದು ಆ ಜಿಲ್ಲೆಯ ಮೊಟ್ಟ ಮೊದಲ ಸಹಕಾರಿ ಸಕ್ಕರೆ ಕಾರ್ಖಾನೆ. ಅತೀ ಹೆಚ್ಚು ಕಬ್ಬುನುರಿಸಿ ಪ್ರಶಸ್ತಿ ಪಡೆದು ದಾಖಲೆ ನಿರ್ಮಿಸಿದ ಕಾರ್ಖಾನೆ! ಈಗ ತನ್ನ ಕೊನೆಯ ದಿನಗಳನ್ನ ಕ್ಷಿಪ್ರಗತಿಯಲ್ಲಿ ಎಣಿಸುತಿದೆ. ಪ್ರಸಕ್ತ ವರ್ಷದಲ್ಲಿ ಕ್ರಷಿಂಗ್ ನಿಲ್ಲಿಸಿದ್ದು ಇದನ್ನೇ ನಂಬಿಕೊಂಡಿದ್ದ ಸಾವಿರಾರು ರೈತರು (Sugar Cane Growers) ಈಗ ಬೇರೆ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಇದು ರೈತರ ಆಕ್ರೋಶ ಹೆಚ್ಚಿಸುವಂತೆ ಮಾಡಿದೆ… ರಾಜಕೀಯ ಒಳಜಗಳದಿಂದಾಗಿ ಬಂದ್ ಆಯಿತಾ (Bad debts, Ineffective management)… ಬೀದರ್ ಜಿಲ್ಲೆಯ ಮೊದಲ ಸಹಕಾರಿ ಸಕ್ಕರೆ ಕಾರ್ಖಾನೆ… (Bidar Sahakari Sakkare Karakhane)? ಸಾಲದ ಸುಳಿಗೆ ಸಿಲುಕಿ ಈ ವರ್ಷ ಕಬ್ಬು ನುರಿಸುವುದನ್ನೇ ನಿಲ್ಲಿಸಿದ ಸಕ್ಕರೆ ಕಾರ್ಖಾನೆ… ಸಾವಿರಾರು ಜನ ಷೇರುದಾರರು ಬೇರೆ ಸಕ್ಕರೆ ಕಾರ್ಖಾನೆಗೆ ಕಬ್ಬು ಹಾಕುವ ಸ್ಥಿತಿ ನಿರ್ಮಾಣವಾಗಿದೆ… ಗುಣಮಟ್ಟದ ಸಕ್ಕರೆ ತಯಾರಿಸಿ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ್ದ ಸಕ್ಕರೆ ಕಾರ್ಖಾನೆಗೆ ಬಿತ್ತು ಬೀಗ… ಹೌದು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಸಕ್ತ ಸಾಲಿನಲ್ಲಿಯೂ ಕ್ರಷಿಂಗ್ ಆರಂಭಿಸುವ ಸಾಧ್ಯತೆ ಕ್ಷೀಣಿಸಿದೆ.

ಪ್ರತಿಪಕ್ಷದಲ್ಲಿದ್ದಾಗ ಕಾರ್ಖಾನೆ ಪುನಃಶ್ಚೇತನ ವಿಷಯ ಮುಂದಿಟ್ಟುಕೊಂಡು ಗುಲ್ಲೆಬ್ಬಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದ ಬಿಜೆಪಿಯವರು ಈಗ ಆ ಕಾರ್ಖಾನೆ ಅವರದೇ ಸುಪರ್ದಿಯಲ್ಲಿದ್ದರೂ ಕಾರ್ಖಾನೆ ಆರಂಭಿಸುವ ಮನಸ್ಸು ಮಾಡುತ್ತಿಲ್ಲ. ಕೇಸರಿ ಪಡೆಯ ಈ ದ್ವಂದ್ವ ನೀತಿಯು ಕಾರ್ಖಾನೆಯನ್ನೇ ಅವಲಂಬಿಸಿರುವ ರೈತರು, ಕಾರ್ಮಿಕರ ಅಸಮಾಧಾನ, ಆಕ್ರೋಶಕ್ಕೆ ಕಾರಣವಾಗಿದೆ. ನಾವು ಅಧಿಕಾರಕ್ಕೆ ಬಂದರೆ ಕಾರ್ಖಾನೆಗೆ ವಿಶೇಷ ಪ್ಯಾಕೇಜ್ ಕೊಡೋದಾಗಿ ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ನಾಯಕರು ವಾಗ್ದಾನ ಮಾಡಿದ್ದರು.

ಪ್ರಚಾರದ ವೇಳೆ ಬಿ.ಎಸ್. ಯಡಿಯೂರಪ್ಪ ಕಾರ್ಖಾನೆ ಪುನಃಶ್ಚೇತನಕ್ಕೆ ನೂರು ಕೋಟಿ ರೂಪಾಯಿ ಕೊಡುವುದಾಗಿ ಹೇಳಿದ್ದರು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷವಾಗಿದೆ. ಅಸೆಂಬ್ಲಿ ಚುನಾವಣೆ ಇನ್ನೆರಡು ತಿಂಗಳಷ್ಟೇ ಬಾಕಿ ಇದೆ. ಹೀಗಿದ್ದರೂ ಕಾರ್ಖಾನೆ ಆರಂಭಿಸುವ ಬಗ್ಗೆ ಚಕಾರ ಎತ್ತುತ್ತಿಲ್ಲ. ಆಡಳಿತ ಮಂಡಳಿ ಬಿಜೆಪಿ ಮುಂಖಡರ ಕೈಯಲ್ಲಿದ್ದರೂ ಕಾರ್ಖಾನೆ ಮಾತ್ರ ಆರಂಭವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಈ ಕಾರ್ಖಾನೆಯನ್ನ ನಂಬಿಕೊಂಡಿದ್ದ ನೂರಾರು ರೈತರು ಅನ್ಯ ಮಾರ್ಗವಿಲ್ಲದೆ ಬೇರೆ ಬೇರೆ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದು ಈ ಸಕ್ಕರೆ ಕಾರ್ಖಾನೆ ಆರಂಭಿಸಿ ಎಂದು ಮನವಿ ಮಾಡುತ್ತಿದ್ದಾರೆ.

ಇನ್ನು ಈ ಕಾರ್ಖಾನೆ ಬೀದರ್ ಜಿಲ್ಲೆಯಲ್ಲಿ ಆರಂಭವಾದ ಮೊಟ್ಟಮೊದಲ ಕಾರ್ಖಾನೆ (Bidar cooperative sugar factory BSSK) ಎಂಬ ಹೆಗ್ಗಳಿಕೆ ಹೊಂದಿದೆ. 1963 ರಲ್ಲಿ ಆರಂಭವಾದ ಕಾರ್ಖಾನೆ ರಾಜ್ಯದಲ್ಲಿಯೇ ಅತಿ ಹೆಚ್ಚು ಕಬ್ಬು ನುರಿಸಿ ಪ್ರಶಸ್ತಿ ಕೂಡಾ ಬಾಚಿಕೊಂಡಿದೆ. ಇಂದು ಈ ಕಾರ್ಖಾನೆ ಅಧೋಗತಿಗೆ ಇಳಿದಿದೆ. ಈ ಕಾರ್ಖಾನೆಯನ್ನ ನಂಬಿಕೊಂಡು ಐನೂರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಇದರ ಜೊತೆಗೆ ಸಾವಿರಾರು ರೈತರು ಈ ಕಾರ್ಖಾನೆಗೆ ಕಬ್ಬನ್ನು ಹಾಕಿ ತಕ್ಷಣದಲ್ಲಿಯೇ ಹಣವನ್ನ ಪಡೆದುಕೊಂಡು ಹಾಯಾಗಿದ್ದರು.

Bidar cooperative sugar factory BSSK in debt trap on the verge of close do

ಆದರೆ ಕಾರ್ಖಾನೆಯೀಗ ಶಾಶ್ವತವಾಗಿ ಬಂದ್ ಆಗುತ್ತಿರುವುದು ಇಲ್ಲಿನ ಕಾರ್ಮಿಕರು ಹಾಗೂ ರೈತರ ನಗುವನ್ನ ಕಸಿದುಕೊಂಡಿದೆ. ಇನ್ನು ಈ ಕಾರ್ಖಾನೆ ಆರಂಭವಾಗಬೇಕಾದರೆ ಸರಕಾರದ ನೆರವು ಇಲ್ಲಿ ಬೇಕೆ ಬೇಕಾಗುತ್ತದೆ. ಇದರ ನಡುವೆ ಈ ಕಾರ್ಖಾನೆ ಕೊಟ್ಯಾಂತರ ರೂಪಾಯಿ ಸಾಲದ ಸುಳಿಯಲ್ಲಿದೆ. ಹೀಗಾಗಿ ಕಾರ್ಖಾನೆಯ ಸಾಲವನ್ನ ತೀರಿಸಲು ಆಗುತ್ತಿಲ್ಲ, ಕೆಲಸ ಮಾಡಿದ ಕಾರ್ಮಿಕರ ಸಂಬಳವನ್ನ ಕೂಡಾ ಕೊಡಲು ಆಗುತ್ತಿಲ್ಲ ಎಂಬುವುದು ಆಡಳಿತ ವರ್ಗದ ಹೇಳಿಕೆ.

ಇನ್ನು ಈ ಕಾರ್ಖಾನೆಯನ್ನ ಸರಕಾರ ತನ್ನದೇ ಸುಪರ್ದಿಗೆ ಪಡೆದುಕೊಂಡಿದೆ. ಈ ಕಾರ್ಖಾನೆಯ ಮೇಲಿರುವ ಸಾಲವನ್ನ ಸರಕಾರವೇ ತೀರಿಸಿ, ಸರಕಾರವೇ ಅದನ್ನ ಮುನ್ನಡೆಸಲಿ ಎಂದು ಇಲ್ಲಿನ ಕಾರ್ಮಿಕರು, ಜನರೂ ಹೇಳುತ್ತಿದ್ದಾರೆ. ಆದರೆ ಇಲ್ಲಿನ ರಾಜಕಾರಣಿಗಳ ಒಳಜಗಳದಿಂದ ಕಾರ್ಖಾನೆಯೇ ಬಂದ್ ಆಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಕ್ರಷಿಂಗ್ ಗಾಗಿ ಅಗಸ್ಟ್ ನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಕಟಾವು ಗ್ಯಾಂಗ್, ಲಾರಿ ಬಂಡಿಗಳ ಗುತ್ತಿಗೆ ಮುಗಿಸಬೇಕು. ಅಕ್ಟೋಬರ್ ನಲ್ಲಿ ಬಾಯ್ಲರ್ ಪೂಜೆ ಮಾಡಿ ನವೆಂಬರ್ ನಲ್ಲಿ ಕಬ್ಬು ನುರಿಸುವ ಕೆಲಸ ಆಗಬೇಕು. ಆದರೆ ಜಿಲ್ಲೆಯ ಎಲ್ಲಾ ಕಾರ್ಖಾನೆಗಳು ಆರಂಭವಾಗಿದ್ದು ಬಿಎಸ್ ಎಸ್ ಕೆ ಮಾತ್ರ ಇನ್ನೂ ಆರಂಭವಾಗಿಲ್ಲ. ಇದು ಸಹಜವಾಗಿಯೇ ರೈತರ ಆಕ್ರೋಶ ಹೆಚ್ಚಿಸುವಂತೆ ಮಾಡಿದೆ. ಈ ವಿಚಾರದ ಬಗ್ಗೆ ಕಾರ್ಖಾನೆಯ ಅಧ್ಯಕ್ಷರನ್ನ ಕೇಳಿದರೆ ಕಾರ್ಖಾನೆಯ ಮೇಲೆ 300 ಕೋಟಿ ರೂಪಾಯಿ ಸಾಲವಿದೆ. ಆದರೂ ಕೂಡಾ ಕಾರ್ಖಾನೆಯನ್ನ ಆರಂಭಿಸುತ್ತೇವೆಂದು ಹೇಳುತ್ತಿದ್ದಾರೆ ಸುಭಾಷ್ ಕಲ್ಲೂರು, ಬಿಎಸ್ ಎಸ್ ಕೆ ಅಧ್ಯಕ್ಷ, ಮಾಜಿ ಶಾಸಕ.

ರಾಜಕೀಯದ ಬಣ ಪ್ರತಿಷ್ಟೆಯಿಂದ ಹಾಗೂ ಸಾಲದ ಸುಳಿಗೆ ಸಿಲುಕಿ ಐದು ದಶಕದ ಇತಿಹಾಸ ಹೊಂದಿರುವ ಬೀದರ್ ಸಕ್ಕರೆ ಕಾರ್ಖಾನೆ ಬಂದ್ ಆಗುವ ಲಕ್ಷಣ ಗೋಚರಿಸುತ್ತಿದೆ. ಕಳೆದ ಐದು ವರ್ಷಗಳ ಪೈಕಿ, ಕಳೆದ ಹಂಗಾಮಿನಲ್ಲಿ ಕ್ರಷಿಂಗ್ ನಡೆದಿದೆಯಷ್ಟೇ. ಆದರೆ ಈ ವರ್ಷದ ಹಂಗಾಮಿನಲ್ಲಿ ಕ್ರಷಿಂಗ್ ನಡೆದಿಲ್ಲ. ಇದನ್ನ ನೋಡಿದರೆ ಕಾರ್ಖಾನೆ ಬಂದ್ ಆಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದ್ದು ರೈತರ ಆಕ್ರೋಶ ಹೆಚ್ಚಿಸುವಂತೆ ಮಾಡಿದೆ

ವರದಿ: ಸುರೇಶ್ ನಾಯಕ್, ಟಿವಿ 9, ಬೀದರ್

Published On - 5:57 pm, Sat, 31 December 22

ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಎಲ್ಲ ಧರ್ಮಗಳಲ್ಲೂ ಶೋಷಿತರು ಮತ್ತು ಬಡವರಿದ್ದಾರೆ: ಡಿಕೆ ಸುರೇಶ್
ಎಲ್ಲ ಧರ್ಮಗಳಲ್ಲೂ ಶೋಷಿತರು ಮತ್ತು ಬಡವರಿದ್ದಾರೆ: ಡಿಕೆ ಸುರೇಶ್
ಅಡುಗೆ ಅನಿಲ ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ
ಅಡುಗೆ ಅನಿಲ ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ