ಮೈಶುಗರ್ ಆವರಣದಲ್ಲಿ ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಮಂಡ್ಯದ ಪ್ರತಿ ಮನೆಯಿಂದಲೂ ಮಣ್ಣು ಸಂಗ್ರಹ

ಮೈಶುಗರ್ ಕಾರ್ಖಾನೆ ಅಯೋಧ್ಯೆ ರಾಮಮಂದಿರದಷ್ಟೇ ಪವಿತ್ರವಾಗಿದೆ. ರಾಮನನ್ನು ಪೂಜಿಸಿದಂತೆ ಮೈಶುಗರ್ ಕಾರ್ಖಾನೆಯನ್ನ ನಮ್ಮ ಜನ ಪೂಜೆ ಮಾಡುತ್ತಾರೆ. ಶೀಘ್ರದಲ್ಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಹೊಸ ಕಾರ್ಖಾನೆಗೆ ಭೂಮಿ ಪೂಜೆ ಮಾಡಲಿದ್ದಾರೆ. ಅದಕ್ಕೂ ಮೊದಲು ಜಿಲ್ಲೆಯಾದ್ಯಂತ ಮಣ್ಣು ಸಂಗ್ರಹ ಮಾಡುತ್ತೇವೆ ಎಂದು ಶಾಸಕ ಗಣಿಗ ರವಿಕುಮಾರ್ ಮಾಹಿತಿ ನೀಡಿದರು.

ಮೈಶುಗರ್ ಆವರಣದಲ್ಲಿ ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಮಂಡ್ಯದ ಪ್ರತಿ ಮನೆಯಿಂದಲೂ ಮಣ್ಣು ಸಂಗ್ರಹ
ಶಾಸಕ ಗಣಿಗ ರವಿ
Follow us
| Updated By: ವಿವೇಕ ಬಿರಾದಾರ

Updated on: Feb 28, 2024 | 3:01 PM

ಮಂಡ್ಯ, ಫೆಬ್ರವರಿ 28: ಮೈಶುಗರ್ ಕಾರ್ಖಾನೆ (MySugar Factory) ಅಯೋಧ್ಯೆ ರಾಮಮಂದಿರದಷ್ಟೇ (Ayodhye Ram Mandir) ಪವಿತ್ರವಾಗಿದೆ. ರಾಮನನ್ನು ಪೂಜಿಸಿದಂತೆ ಮೈಶುಗರ್ ಕಾರ್ಖಾನೆಯನ್ನ ನಮ್ಮ ಜನ ಪೂಜೆ ಮಾಡುತ್ತಾರೆ. ಶೀಘ್ರದಲ್ಲೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar)​ ಹೊಸ ಕಾರ್ಖಾನೆಗೆ ಭೂಮಿ ಪೂಜೆ ಮಾಡಲಿದ್ದಾರೆ. ಅದಕ್ಕೂ ಮೊದಲು ಜಿಲ್ಲೆಯಾದ್ಯಂತ ಮಣ್ಣು ಸಂಗ್ರಹ ಮಾಡುತ್ತೇವೆ ಎಂದು ಶಾಸಕ ಗಣಿಗ ರವಿಕುಮಾರ್ (Ganiga Ravikumar) ಮಾಹಿತಿ ನೀಡಿದರು. ಮಂಡ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರತಿ ಮನೆಯಿಂದಲೂ ಒಂದು ಹಿಡಿ ಮಣ್ಣು ಸಂಗ್ರಹ ಮಾಡುತ್ತೇವೆ. ಆ ಪವಿತ್ರ ಮಣ್ಣನ್ನು ಹೊಸ ಕಾರ್ಖಾನೆ ನಿರ್ಮಾಣಕ್ಕೆ ಬಳಕೆ ಮಾಡಲಾಗುತ್ತದೆ. ಈ ಮೂಲಕ ಜನರಿಗೆ ಮೈಶುಗರ್ ಕಾರ್ಖಾನೆ ನಮ್ಮದೆ ಎಂಬ ಭಾವನೆ ಮೂಡುವಂತೆ ಮಾಡುತ್ತೇವೆ ಎಂದು ತಿಳಿಸಿದರು.

ಮೈಶುಗರ್ ಕಾರ್ಖಾನೆ ಆವರಣದಲ್ಲಿ ಹೊಸ ಸಕ್ಕರೆ ಕಾರ್ಖಾನೆಯನ್ನು ನಿರ್ಮಾಣ ಮಾಡುವ ವಿಚಾರವಾಗಿ 2024-25ನೇ ಸಾಲಿನ ಬಜೆಟ್​​​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದರು. ಮೈಶುಗರ್​ ಆವರಣದಲ್ಲಿ ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಸರ್ಕಾರದ ಅನುದಾನ, ಇತರೆ ಮೂಲಗಳು ಹಾಗೂ ಕಾರ್ಖಾನೆಯ Asset Monetisation ಮೂಲಕ ಸಂಪನ್ಮೂಲವನ್ನು ಕ್ರೋಢೀಕರಿಸಲಾಗುವುದು ಎಂದು ತಿಳಿಸಿದ್ದರು.

ಮಣ್ಣು ಸಂಗ್ರಹ ಅಭಿಯಾನದ ಮೂಲಕ ರಾಜ್ಯ ಕಾಂಗ್ರೆಸ್​ ಸರ್ಕಾರ ಕೆರಗೋಡು ಹನುಮಧ್ವಜ ವಿವಾದದ ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾಗಿದೆ ಎನ್ನಲಾಗುತ್ತಿದೆ. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಮೈ ಶುಗರ್ ಕಾರ್ಖಾನೆ ಅಸ್ತ್ರ ಪ್ರಯೋಗಿಸಿ ಜನರನ್ನು ಭಾವನಾತ್ಮಕವಾಗಿ ಸೆಳೆಯಲು ಕಾಂಗ್ರೆಸ್ ಹೊಸ ದಾಳ ಉರುಳಿಸಿದೆ. ಇನ್ನು ಕಾಂಗ್ರೆಸ್​ ಶಾಸಕ ರವಿ ಗಣಿಗ ಮೈಶುಗರ್ ಕಾರ್ಖಾನೆಯನ್ನು ರಾಮಮಂದಿರಕ್ಕೆ ಹೋಲಿಕೆ ಮಾಡುವ ಮೂಲಕ ಬಿಜೆಪಿ-ಜೆಡಿಎಸ್ ಗೆ ಕೌಂಟರ್ ಕೊಡಲು ರಣತಂತ್ರ ಹೆಣದಿದ್ದಾರೆ.

ಇದನ್ನೂ ಓದಿ: ಭ್ರಷ್ಟಾಚಾರ ಆರೋಪ ಸಾಬೀತು: ಮೈಶುಗರ್​ನ ಮಾಜಿ ಅಧ್ಯಕ್ಷನ ವಿರುದ್ಧ ಕೇಸ್ ದಾಖಲಿಸಲು ಮುಂದಾದ ಸರ್ಕಾರ​

ಕಬ್ಬು ಬೆಳೆಗಾರರ ಜೀವನಾಡಿ

ಯಂತ್ರೋಪಕರಣಗಳು ಕೆಟ್ಟ ಹಿನ್ನೆಲೆ 4 ವರ್ಷಗಳಿಂದ ಮೈಶುಗರ್ ಕಾರ್ಖಾನೆ ಮುಚ್ಚಿತ್ತು. ಹೀಗಾಗಿ ಯಂತ್ರೋಪಕರಣಗಳನ್ನು ಸರಿಪಡಿಸಬೇಕು, ಕಾರ್ಖಾನೆಯನ್ನು ಪುನರಾರಂಭಿಸಬೇಕೆಂದು ಸಾಕಷ್ಟು ಹೋರಾಟಗಳು ನಡೆದಿದ್ದವು.

ಹೋರಾಟಕ್ಕೆ ಮಣಿದು ಕಾರ್ಖಾನೆ ಪುನರಾರಂಭಕ್ಕೆ ಬಿಜೆಪಿ ಸರ್ಕಾರ ಭರವಸೆ ನೀಡಿತ್ತು. ಅದರಂತೆ ಕಳೆದ ವರ್ಷ ಜಿಲ್ಲೆಯ ಇತರ ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುವಿಕೆ ಆರಂಭಿಸಿದಾಗ, ಮೈಶುಗರ್‌ನಲ್ಲಿ ಯಂತ್ರೋಪಕರಣಗಳ ದುರಸ್ತಿ ಕಾರ್ಯ ಶುರುವಾಗಿತ್ತು. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್​ ಸರ್ಕಾರ ಮೈಶುಗರ್ ಕಾರ್ಖಾನೆ ಪುನಾರಂಭಕ್ಕೆ 50 ಕೋಟಿ ಅನುದಾನ ನೀಡಿತ್ತು.

ಹೀಗಾಗಿ ಕಳೆದ ವರ್ಷ 2023 ಜೂನ್​​ನಲ್ಲಿ ಮುಹೂರ್ತ ಫಿಕ್ಸ್​​ ಆಗಿ ಮೈಶುಗರ್​ ಕಾರ್ಖನೆಯಲ್ಲಿ ಪೂಜೆ, ಹೋಮ-ಹವನ ನಡೆದು ಬಳಿಕ ಬಾಯ್ಲರ್​​ಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಸಾಂಕೇತಿಕವಾಗಿ ಸಚಿವ ಶಿವಾನಂದ ಪಾಟೀಲ್​ ಚಾಲನೆ ನೀಡಿದ್ದರು. ಇದೀಗ ಕಬ್ಬು ಅರಿಯುವಿಕೆಗೆ ಚಾಲನೆ ದೊರೆತಿದ್ದು ಮಂಡ್ಯ ಜನರಲ್ಲಿ ಸಂತಸ ಮನೆ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ