AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಹೋದರನ ಹತ್ಯೆಯ ಸೇಡು, ಹಾಡುಹಗಲೇ ರೌಡಿಶೀಟರ್​ ಬರ್ಬರ ಹತ್ಯೆ; ಆರು ಜನ ಆರೋಪಿಗಳ ಬಂಧನ

ಆತ ಒಬ್ಬ ರೌಡಿಶೀಟರ್. ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕೆಲವು ತಿಂಗಳುಗಳ ಹಿಂದೆ ತನ್ನದೇ ಗ್ರಾಮದಲ್ಲಿ ನಡೆದಿದ್ದ ಓರ್ವನ ಕೊಲೆ ಕೇಸ್​ನಲ್ಲಿ ಆತನ ಹೆಸರು ಕೂಡ ಬಲವಾಗಿ ಕೇಳಿಬಂದಿತ್ತು. ಎಫ್​ಐಆರ್​ನಲ್ಲಿ ಆತನ ಹೆಸರು ಇದ್ದರೂ ಆತನ ಬಂಧನವಾಗಿರಲಿಲ್ಲ. ಹೀಗಾಗಿ ತಮ್ಮನ ಕೊಲೆ ಕೇಸ್​ನಲ್ಲಿ ರೌಡಿಶೀಟರ್​ನ ಸಂಚು ಇದೆ ಎಂದು  ರೌಡಿಶೀಟರ್ ಒಬ್ಬನನ್ನ ಹಾಡಹಗಲೇ ಭೀಕರವಾಗಿ ಹತ್ಯೆ ಮಾಡಿಸಿದ್ದಾನೆ. ಇದೀಗ ಕೊಲೆ ಪ್ರಕರಣ ಸಂಬಂಧ ಮಂಡ್ಯ ಪೊಲೀಸರು ಆರು ಜನ ಆರೋಪಿಗಳನ್ನ ಬಂಧಿಸಿದ್ದಾರೆ.

ಸಹೋದರನ ಹತ್ಯೆಯ ಸೇಡು, ಹಾಡುಹಗಲೇ ರೌಡಿಶೀಟರ್​ ಬರ್ಬರ ಹತ್ಯೆ; ಆರು ಜನ ಆರೋಪಿಗಳ ಬಂಧನ
ಮೃತ ಪ್ರಜ್ವಲ್​, ಎಸ್​ಪಿ
ಪ್ರಶಾಂತ್​ ಬಿ.
| Edited By: |

Updated on:Feb 27, 2024 | 3:50 PM

Share

ಮಂಡ್ಯ, ಫೆ.27: ಜಿಲ್ಲೆಯ ಶ್ರೀರಂಗಪಟ್ಟಣ(Srirangapatna) ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಫೆಬ್ರವರಿ 11ರಂದು ಗ್ರಾಮದ ಜನ ಅಕ್ಷರಸಹಃ ಬೆಚ್ಚಿಬಿದ್ದಿದ್ದರು. ಬೆಳಗ್ಗೆ 9 ಗಂಟೆ ಸುಮಾರಿಗೆ ಗ್ರಾಮದ ಮಧ್ಯೆ ಭಾಗದಲ್ಲೇ ರೌಡಿಶೀಟರ್(Rowdy Sheeter), ವಕೀಲನೊಬ್ಬನ ಮಗ ಪ್ರಜ್ವಲ್ ಗೌಡ(27) ಅಲಿಯಾಸ್ ಅಪ್ಪಿ ಎಂಬಾತನನ್ನ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಟೀ ಶಾಪ್​​​ನಿಂದ ಎಳೆದುಕೊಂಡು ಬಂದು, ಕಣ್ಣಿಗೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈಯಲಾಗಿತ್ತು.

ಪಾಲಹಳ್ಳಿ ಗ್ರಾಮದ ವಕೀಲ ನಾಗೇಂದ್ರ ಎಂಬುವವರ ಮಗನಾದ ಪ್ರಜ್ವಲ್ ಗೌಡ, ಎಂದಿನಂತೆ ಹಸುಗಳಿಗೆ ಹುಲ್ಲುತರಲು ಹೋಗಿದ್ದ. ಈ ವೇಳೆ ತನ್ನ ಸ್ನೇಹಿತನ ಜೊತೆ ಟೀಶಾಪ್​ಗೆ ಟೀ ಕುಡಿಯಲು ಹೋಗಿದ್ದ. ಇನ್ನು ಪ್ರಜ್ವಲ್ ಪ್ರತಿನಿತ್ಯ ಇದೇ ಟೀ ಶಾಪ್​ಗೆ ಹೋಗಿ ಟೀ ಕುಡಿದು, ವಾಪಾಸ್ ಮನೆಗೆ ಹೋಗುತ್ತಿದ್ದ. ಅದೇ ರೀತಿ ಇದೇ ತಿಂಗಳ ಫೆಬ್ರವರಿ 11ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಟೀ ಕುಡಿಯಲು ಹೋಗಿದ್ದ. ಆದರೆ, ಆತ ಬರುವುದನ್ನೇ ಕಾದು ಕುಳಿತಿದ್ದ ಅದೊಂದು ದುಷ್ಕರ್ಮಿಗಳ ತಂಡ, ಆತನನ್ನ ಟೀ ಶಾಪ್​ನಿಂದ ಹೊರಕ್ಕೆ ಎಳೆದುಕೊಂಡು ಬಂದಿದೆ. ನಂತರ ಆತ ತಪ್ಪಿಸಿಕೊಂಡು ಓಡಿ ಹೋಗಬೇಕು ಎನ್ನುವಷ್ಟರಲ್ಲಿ ಕಣ್ಣಿಗೆ ಖಾರದ ಪುಡಿ ಎರಚಿ, ಟೀ ಶಾಪ್​ನಿಂದ 50 ಮೀಟರ್ ದೂರದಲ್ಲಿ ನಡುರಸ್ತೆಯಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಇನ್ನೋವಾ ಕಾರಿನಲ್ಲಿ ಪರಾರಿಯಾಗಿದ್ದರು.

ಇದನ್ನೂ ಓದಿ:ಬೆಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಹತ್ಯೆ: 6 ದುಷ್ಕರ್ಮಿಗಳು ಪರಾರಿ

ಇನ್ನು ರೌಡಿಶೀಟರ್ ಆಗಿದ್ದ ಪ್ರಜ್ವಲ್ ಗೌಡ, ಗ್ರಾಮದಲ್ಲಿ ಸ್ವಲ್ಪಮಟ್ಟಿಗೆ ಹವಾ ಕೂಡ ಇಟ್ಟಿದ್ದ. ಬೆಳ್ಳಂಬೆಳ್ಳಗೆ ಕೊಲೆ ಆಗಿರುವ ವಿಚಾರ ತಿಳಿದು ಶ್ರೀರಂಗಪಟ್ಟಣ ಟೌನ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಜೊತೆಗೆ ಮಂಡ್ಯ ಎಸ್ ಪಿ ಯತೀಶ್ ಅವರು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪ್ರಜ್ವಲ್ ಗೌಡ ತಂದೆ ನಾಗೇಂದ್ರ ಅವರ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದರು.

ಆರೋಪಿಗಳ ಬಂಧನ

ಈ ಮೊದಲೇ ಮೃತ ಪ್ರಜ್ವಲ್​ ಬಗ್ಗೆ ಸಾಕಷ್ಟು ಮಾಹಿತಿ ಇದ್ದ ಪೊಲೀಸರು, ಕೊಲೆಯಾಗುವ ಸ್ವಲ್ಪ ದಿನಗಳ ಮೊದಲು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದರು. ಜೊತೆಗೆ ಗ್ರಾಮದಲ್ಲಿ ಇರದಂತೆ ಕೂಡ ತಾಕೀತು ಮಾಡಿದ್ದರು. ಆದರೂ ಕೂಡ ಆತ ಗ್ರಾಮದಲ್ಲಿ ರಾಜಾರೋಷವಾಗಿ ತಿರುಗಾಡಿಕೊಂಡಿದ್ದ. ಪ್ರಕರಣ ದಾಖಲಿಸಿಕೊಂಡು ತನಿಕೆ ಆರಂಭಿಸಿದ ಪೊಲೀಸರಿಗೆ ಇದು ಜಿದ್ದಿಗೆ, ಸೇಡಿಗೆ ಆಗಿರುವ ಕೊಲೆ ಎಂಬುದು ಗೊತ್ತಾಗಿತ್ತು. ಹೀಗಾಗಿ ವಿಶೇಷ ತಂಡವನ್ನ ರಚನೆ ಮಾಡಿ ಕೊಲೆ ಆರೋಪಿಗಳನ್ನ ಬಂಧಿಸಿದ್ದಾರೆ. ಶ್ರೀರಂಗಪಟ್ಟಣ ಪುರ ಠಾಣೆ ಪೊಲೀಸರು ಆರು ಜನ ಆರೋಪಿಗಳನ್ನ ಬಂಧಿಸಿದ್ದಾರೆ. ಪಾಲಹಳ್ಳಿ ಗ್ರಾಮದ ಪ್ರಮೋದ್(34), ಬೆಂಗಳೂರು ಮೂಲದ ಮುಬಾರಕ್(22), ಪ್ರಮೋದ್ ನ ತಂದೆ ಸುರೇಶ್(57), ಪಾಲಹಳ್ಳಿ ಗ್ರಾಮದ ರಾಮ್ ಕುಮರ್(21),ಕಿಸನ್ ಗೌಡ(19) ಹಾಗೂ ಪ್ರಮೋದ್ ಎಂಬ ಆರೋಪಿಗಳನ್ನ ಬಂಧಿಸಿದ್ದಾರೆ.

ರೌಡಿಶೀಟರ್ ಪ್ರಜ್ವಲ್​ ಕೊಲೆಯ ಮಾಸ್ಟರ್ ಮೈಂಡ್, ಅದೇ ಪಾಲಹಳ್ಳಿ ಗ್ರಾಮದ ಪ್ರಮೋದ್ ಎಂಬಾತನೇ ಆಗಿದ್ದ. ಆತನ ತಮ್ಮ ರೌಡಿಶೀಟರ್ ವಿನೋದ್ ಅಲಿಯಾಸ್ ಕುಂಟ ವಿನಿ ಎಂಬಾತನ ಕೊಲೆಯ ಸೇಡಿಗೆ ಪಕ್ಕ ಪ್ಲ್ಯಾನ್ ಮಾಡಿ, ತನ್ನದೆ ಗುಂಪು ಕಟ್ಟಿಕೊಂಡು ಪ್ರಜ್ವಲ್ ಗೌಡ ಅಲಿಯಾಸ್ ಅಪ್ಪಿಯನ್ನ ಮುಗಿಸಿದ್ದಾನೆ. ವಿಚಾರವೆಂದರೇ ಈ ಹಿಂದೆ ವಿನೋದ್​ ಅಲಿಯಾಸ್ ಕುಂಟ ವಿನಿ ಹಾಗೂ ಕೊಲೆಯಾದ ಪ್ರಜ್ವಲ್ ಗೌಡ ಮನೆ ಕೂಗಳತೆ ದೂರದಲ್ಲಿ ಇದೆ. ಇಬ್ಬರು ಕೂಡ ಸಾಕಷ್ಟು ಪರಿಚಿತರು.

ಸಹೋದರನ ಹತ್ಯೆಯ ಸೇಡು

2023 ಆಕ್ಟೋಬರ್ 2 ರ ಬೆಳಗ್ಗೆ ಇದೇ ಪಾಲಹಳ್ಳಿ ಗ್ರಾಮದ ರೌಡಿಶೀಟರ್ ವಿನೋದ್​ ಅಲಿಯಾಸ್ ಕುಂಟ ವಿನಿಯನ್ನು ತಮ್ಮ ಜಮೀನಿನಲ್ಲಿಯೇ ಹಾಲು ತರೆಲೆಂದು ಬೆಳಗ್ಗೆ 5.30 ಸಮಯಕ್ಕೆ ಬೈಕ್​ನಲ್ಲಿ ಹೋಗುತ್ತಿದ್ದ ವೇಳೆ ಮನೆಯಿಂದ ಕೂಗಳತೆ ದೂರದಲ್ಲಿ ಬೈಕ್​ಗೆ ಒಮಿನಿ ಕಾರಿನಿಂದ ಗುದ್ದಿಸಿ, ಕೆಳಗೆ ಬಿದ್ದ ನಂತರ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ರೌಡಿಶೀಟರ್ ಕೊಲೆ ಪ್ರಕರಣ ಸಂಬಂಧ ಶ್ರೀರಂಗಪಟ್ಟಣ ಟೌನ್ ಠಾಣೆ ಪೊಲೀಸರು 9 ಜನ ಕೊಲೆ ಆರೋಪಿಗಳನ್ನ ಬಂಧಿಸಿದ್ದರು. ಶ್ರೀರಂಗಪಟ್ಟಣ ತಾಲೂಕಿನ ಚಂದಗಾಲು ಗ್ರಾಮದ ಶಿವಪ್ರಸಾದ್, ಆಕಾಶ್, ಕೇಶವ್, ಪಾಲಹಳ್ಳಿ ಗ್ರಾಮದ ವಿಕಾಸ್, ಹರ್ಷ, ರಾಕೇಶ್, ಅಭಿಷೇಕ್, ಅರ್ಜುನ್ ಗೌಡ, ಸಚ್ಚಿದಾನಂದ ಎಂಬ ಯುವಕರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದರು.

ಇದನ್ನೂ ಓದಿ:ಹಾಸನ: ಅಣ್ಣನಿಂದಲೇ ತಮ್ಮನ ಬರ್ಬರ ಹತ್ಯೆ; ಆರೋಪಿ ಪೊಲೀಸ್​ ವಶಕ್ಕೆ

ಇದೇ ಕೊಲೆ ಪ್ರಕರಣದಲ್ಲಿ ಇದೀಗ ಕೊಲೆಯಾಗಿರುವ ರೌಡಿಶೀಟರ್ ಪ್ರಜ್ವಲ್ ಗೌಡ ಅಲಿಯಾಸ್ ಅಪ್ಪಿ ಹೆಸರು ಬಲವಾಗಿ ಕೇಳಿಬಂದಿತ್ತು. ಪ್ರಾರಂಭದಲ್ಲಿ ಎಫ್ ಐ ಆರ್ ನಲ್ಲಿ ಕೂಡ ಹೆಸರು ಇತ್ತು. ಆದರೆ, ಬಂಧನವಾಗಿರಲಿಲ್ಲ. ಹೀಗಾಗಿ ಈ ಸೇಡು ವಿನೋದನ ಸಹೋದರ ಪ್ರಮೋದ್​ಗೆ ಇತ್ತು. ಆ ನಂತರ ಕೂಡ ಇಬ್ಬರ ನಡುವೆ ಗ್ರಾಮದಲ್ಲಿ ಸಾಕಷ್ಟು ಬಾರಿ ಮಾತಿನ ಚಕಮಕಿ ಕೂಡ ನಡೆದಿತ್ತು. ಒಬ್ಬರು ಒಬ್ಬರ ಕಥೆ ಮುಗಿಸುತ್ತಾರೆ ಎಂಬ ಭಯವೂ ಕೂಡ ಇತ್ತು. ಈ ನಡುವೆ ಕೊಲೆಯಾಗುವ ಮೊದಲು ಪ್ರಜ್ವಲ್, ಪ್ರಮೋದ್ ನ ಮನೆ ಬಳಿ ಹೋಗಿ ಗಲಾಟೆ ಕೂಡ ಮಾಡಿದ್ದ. ಈ ಎಲ್ಲ ಸೇಡಿಗೆ, ಪ್ರಜ್ವಲ್ ನ ಕಥೆಯನ್ನ ಮುಗಿಸಲೇಬೇಕು ಎಂದು ತೀರ್ಮಾನ ಮಾಡಿದ್ದ. ಪ್ರಮೋದ್ ತನ್ನದೇ ಟೀಂ ಮಾಡಿಕೊಂಡು ಆತನ ಚಲನ-ವಲನವನ್ನ ನೋಡಿ, ಫೆಬ್ರವರಿ 11ರ ಬೆಳಗ್ಗೆ ಭೀಕರವಾಗಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದ.

ಅಲ್ಲದೆ ತಾನು ಕೊಲೆ ನಡೆದಾಗ ಸ್ಥಳದಲ್ಲಿ ಇಲ್ಲ. ದೆಹಲಿಯಲ್ಲಿ ಇದ್ದೇನೆ ಎಂದು ಬಿಂಬಿಸಿಕೊಳ್ಳಲು ಈ ಹಿಂದೆ ದೆಹಲಿಗೆ ಹೋಗಿಬಂದಿದ್ದ ಕೆಲವು ವಿಡೀಯೋಗಳನ್ನ ತನ್ನ ಫೇಸ್ ಬುಕ್ ಅಕೌಂಟ್​ನಲ್ಲಿ ಹಾಕಿಕೊಂಡಿದ್ದ. ಒಟ್ಟಾರೆ ಪಾಲಹಳ್ಳಿ ಗ್ರಾಮದಲ್ಲಿ ಸಹೋದರನ ಹತ್ಯೆಯ ಸೇಡಿಗೆ ರೌಡಿಶೀಟರ್ ಕಥೆಯನ್ನ ಸಹೋದರ ಮುಗಿಸಿದ್ದಾರೆ. ಪ್ರಕರಣ ಸಂಬಂಧ ಆರು ಜನರ ಬಂಧನವಾಗಿದೆ. ಉಳಿದ ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಸದ್ಯ ಗ್ರಾಮದಲ್ಲಿ ಬೂದಿಮುಚ್ಚಿದಂತಹ ಪರಿಸ್ಥಿತಿ ಇದೆ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:48 pm, Tue, 27 February 24

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್