AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೃಶ್ಯ ಸಿನಿಮಾ ಸ್ಟೈಲ್​ನಲ್ಲಿ ಮಹಿಳೆಯ ಬರ್ಬರ ಕೊಲೆ; ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪ್ರಕರಣ ಭೇದಿಸಿದ್ದೇ ರೋಚಕ

ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ದೃಶ್ಯ ಸಿನಿಮಾ ಸ್ಟೈಲ್​ನಲ್ಲಿ ಈ ಕೊಲೆ ನಡೆದಿದೆ. ಯಾವುದೇ ಸಾಕ್ಷ್ಯ ಸಿಗದಂತೆ ಮಹಿಳೆಯನ್ನು ಕೊಲೆ ಮಾಡಿ ಪೆಟ್ರೋಲ್​ನಿಂದ ಸುಟ್ಟು ಹಾಕಲಾಗಿದ್ದು, ವಾರದ ಹಿಂದೆ ತಲೆ ಬುರುಡೆ, ಮೂಳೆಗಳು ಪತ್ತೆಯಾಗಿದ್ದವು. ಪ್ರಕರಣ ಬೆನ್ನತ್ತಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ಹೇಗೆ? ಇಲ್ಲಿದೆ ಮಾಹಿತಿ.

ದೃಶ್ಯ ಸಿನಿಮಾ ಸ್ಟೈಲ್​ನಲ್ಲಿ ಮಹಿಳೆಯ ಬರ್ಬರ ಕೊಲೆ; ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪ್ರಕರಣ ಭೇದಿಸಿದ್ದೇ ರೋಚಕ
ದೃಶ್ಯ ಸಿನಿಮಾ ರೀತಿಯಲ್ಲಿ ಮಹಿಳೆಯ ಬರ್ಬರ ಕೊಲೆ; ಪ್ರಕರಣ ಭೇದಿಸಿದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಂದ ಆರೋಪಿಯ ಬಂಧನ
ರಾಮು, ಆನೇಕಲ್​
| Updated By: Rakesh Nayak Manchi|

Updated on: Feb 27, 2024 | 4:36 PM

Share

ಆನೇಕಲ್, ಫೆ.27: ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿ (Electronic City) ವ್ಯಾಪ್ತಿಯಲ್ಲಿ ಮಹಿಳೆಯನ್ನು ಬರ್ಬರವಾಗಿ ಕೊಲೆ (Murder) ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ದೃಶ್ಯ (Drishya) ಸಿನಿಮಾ ಸ್ಟೈಲ್​ನಲ್ಲಿ ಈ ಕೊಲೆ ನಡೆದಿದೆ. ಯಾವುದೇ ಸಾಕ್ಷ್ಯ ಸಿಗದಂತೆ ಮಹಿಳೆಯನ್ನು ಕೊಲೆ ಮಾಡಿ ಪೆಟ್ರೋಲ್​ನಿಂದ ಸುಟ್ಟು ಹಾಕಲಾಗಿದ್ದು, ವಾರದ ಹಿಂದೆ ತಲೆ ಬುರುಡೆ, ಮೂಳೆಗಳು ಪತ್ತೆಯಾಗಿದ್ದವು. ಪ್ರಕರಣ ಬೆನ್ನತ್ತಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದೊಡ್ಡಕಮ್ಮನಹಳ್ಳಿ ವಾಸಿ ಸುಕನ್ಯಾ (36) ಕೊಲೆಯಾದ ಮಹಿಳೆಯಾಗಿದ್ದು, ಅದೇ ಗ್ರಾಮದ ಜಶ್ವಂತ್ (20) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಯಶ್ವಂತ್ ಮೃತ ಸುಕನ್ಯಾಳ ಪತಿಯ ತಂಗಿ ಮಗನಾಗಿದ್ದಾಣೆ. ಫೆಬ್ರವರಿ 12 ರಂದು ಸುಕನ್ಯಾ ನಾಪತ್ತೆಯಾಗಿದ್ದಳು. ಈ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

ನಂತರ ಬಿಂಗೀಪುರ ಗ್ರಾಮದಲ್ಲಿ ಅಪರಿಚಿತ ಮಹಿಳೆಯ ತಲೆ ಬುರುಡೆ ಪತ್ತೆಯಾಗಿತ್ತು. ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇನ್ನೊಂದೆಡೆ, ಮಹಿಳೆ ಮಿಸ್ಸಿಂಗ್ ಕೇಸ್ ಹಿಂದೆ ಬಿದ್ದಿದ್ದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಮಹಿಳೆಯ ಫೋನ್ ಕಾಲ್ ಡಿಟೈಲ್ಸ್ ತೆಗೆದುಕೊಂಡಿದ್ದಾರೆ. ಅನುಮಾನದ ಮೇರೆಗೆ ಜಶ್ವಂತ್​ನನ್ನ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ.

ಇದನ್ನೂ ಓದಿ: ಬೆಂಗಳೂರು: 12 ಗಂಟೆಗೂ ಅಧಿಕ ಕಾಲ ಮನೆಯಲ್ಲೇ ಶವ ಇಟ್ಟುಕೊಂಡು ವೃದ್ಧೆಯ ದೇಹವನ್ನ ತುಂಡರಿಸಿದ ಹಂತಕ, ಕೊಲೆ ಹಿಂದಿನ ಕಾರಣ ರಿವಿಲ್​

ವಿಚಾರಣೆ ವೇಳೆ ಬಾಯಿ ಬಿಡದ ಜಶ್ವಂತ್​ಗೆ ಪೊಲೀಸ್ ಭಾಷೆಯ ರುಚಿ ತೋರಿಸಲಾಗಿದೆ. ಈ ವೇಳೆ ಬಾಯಿ ಬಿಟ್ಟ ಜಶ್ವಂತ್, ಕೊಲೆ ಮಾಡಿದ್ದು ತಾನೇ ಎಂದು ಒಪ್ಪಿಕೊಂಡಿದ್ದಾನೆ. ಅಲ್ಲದೆ, ದೃಶ್ಯ ಸಿನಿಮಾ ಮಾದರಿ ಕೊಲೆಗೆ ಮೊದಲೇ ಸ್ಕೆಚ್ ರೂಪಿಸಿದ್ದ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾನೆ. ಆಂಧ್ರ ಪ್ರದೇಶದ ವಿಜಯವಾಡದಿಂದ ಕಾರು ತಂದಿದ್ದು, ತಮಿಳುನಾಡಿನ ಹೊಸೂರಿನಿಂದ ಪೆಟ್ರೋಲ್ ತಂದಿದ್ದ.

ತೀರ ಸಲುಗೆಯಿಂದ ಇದ್ದ ಅತ್ತೆ ಸುಕನ್ಯಾಳನ್ನ ಕಾರಿನಲ್ಲಿ ಕರೆದೊಯ್ದಿದ್ದ ಜಶ್ವಂತ್, ಬಿಂಗೀಪುರದ ನಿರ್ಜನ ಪ್ರದೇಶದಲ್ಲಿ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಗುರುತು ಸಿಗಬಾರದೆಂದು ಅತ್ತೆಯ ಕೂದಲು ಕತ್ತರಿಸಿ ಮೃತದೇಹವನ್ನ ನಿರ್ಜನ ಪ್ರದೇಶದ ಕಾಂಪೌಂಡ್​ ಬಳಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದನು. ಕೊಲೆ ಮಾಡಿ ಏನು ತಿಳಿಯದಂತೆ ಓಡಾಡಿಕೊಂಡಿದ್ದನು.

ಮಹಿಳೆ ಜೊತೆ ಅಕ್ರಮ ಸಂಬಂಧ ಶಂಕೆ, ಕೊಲೆ ನಂತರ ಗೋವಾದಲ್ಲಿ ಪಾರ್ಟಿ

ಸುಕನ್ಯಾಳ ಜೊತೆ ಜಶ್ವಂತ್ ಅಕ್ರಮ ಸಂಬಂಧ ಹೊಂದಿದ್ದ ಶಂಕೆ ವ್ಯಕ್ತವಾಗಿದೆ. ಅಕ್ರಮ ಸಂಬಂಧದ ಸಲುಗೆಯಲ್ಲಿ ಕಾರು ರಿಪೇರಿ, ಡ್ಯೂ ಕಟ್ಟಲು ಹಣ ಸೇರಿದಂತೆ ಇನ್ನಿತರ ಖರ್ಚು ವೆಚ್ಚಗಳಿಗಾಗಿ ಪದೇ ಪದೇ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದನಂತೆ. ಹಣ ನೀಡದಿದ್ದಾಗ ಮಹಿಳೆ ಚಿನ್ನಾಭರಣದ ಮೇಲೆ ಕಣ್ಣು ಹಾಕಿದ್ದಾನೆ. ಅದರಂತೆ, ಚಿನ್ನಾಭರಣಕ್ಕಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಿ ಗೋವಾದಲ್ಲಿ ವ್ಯಾಲಂಟೈನ್ಸ್ ಡೇ (ಫೆಬ್ರವರಿ 14) ಸೆಲೆಬ್ರೆಷನ್ ಆಚರಿಸಿದ್ದನು ಎಂದು ತಿಳಿದುಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ