ಯಲಹಂಕ ರೈಲ್ವೆ ಟ್ರ್ಯಾಕ್ ಬಳಿ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆ; ಪ್ರಕರಣ ಭೇದಿಸಿದ ಬೆಂಗಳೂರು ರೈಲ್ವೆ ಪೊಲೀಸರು
ಫೆಬ್ರವರಿ 25 ರಂದು ಯಲಹಂಕ ಬಳಿ ಹಾದುಹೋಗಿರುವ ರೈಲ್ವೆ ಟ್ರ್ಯಾಕ್ ಬಳಿ ಸುಟ್ಟ ಸ್ಥಿತಿಯಲ್ಲಿ 32 ವರ್ಷದ ಸಾಗರ್ ಎಂಬಾತನ ಮೃತದೇಹ ಪತ್ತೆಯಾಗಿತ್ತು. ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ರೈಲ್ವೆ ಪೊಲೀಸರು(Bengaluru Railway Police) ಪ್ರಕರಣವನ್ನು ಭೇಧಿಸಿದ್ದಾರೆ.
ಬೆಂಗಳೂರು, ಫೆ.27: ಯಲಹಂಕ ರೈಲ್ವೆ ಟ್ರ್ಯಾಕ್ ಬಳಿ ಸುಟ್ಟ ಸ್ಥಿತಿಯಲ್ಲಿ 32 ವರ್ಷದ ಸಾಗರ್ ಎಂಬುವವರ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ರೈಲ್ವೆ ಪೊಲೀಸರು(Bengaluru Railway Police)ಇದೀಗ ಪ್ರಕರಣವನ್ನು ಭೇಧಿಸಿದ್ದು, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮೃತ ಸಾಗರ್, ಫೆ.24 ರಂದುಆತ್ಮಹತ್ಯೆಗೆ ನಿರ್ಧರಿಸಿ ವಿಷ ಸೇವಿಸಿದ್ದಾನೆ. ಬಳಿಕ ರೈಲ್ವೆ ಟ್ರ್ಯಾಕ್ ಬಳಿ ತೆರಳಿ, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಫೆಬ್ರವರಿ 25 ರಂದು ಯಲಹಂಕ ರೈಲ್ವೈ ಟ್ರ್ಯಾಕ್ ಬಳಿ ಮೃತದೇಹ ಪತ್ತೆಯಾಗಿತ್ತು. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಪ್ರಶ್ನೆ ಮೂಡಿತ್ತು. ಇದೀಗ ಪೊಲೀಸರು ಇದಕ್ಕೆಲ್ಲ ತೆರೆಎಳೆದಿದ್ದಾರೆ.
ಚರಂಡಿಗೆ ಬಿದ್ದು ಒಂದೂವರೆ ವರ್ಷದ ಮಗು ಸಾವು
ಕೊಪ್ಪಳ: ಜಿಲ್ಲೆಯ ಗಂಗಾವತಿಯ ಎಪಿಎಂಸಿ ಹಮಾಲರ ಕಾಲೋನಿಯಲ್ಲಿ ಮನೆ ಮುಂದಿನ ಚರಂಡಿಗೆ ಬಿದ್ದು ಒಂದುವರೆ ವರ್ಷದ ಮಗು ಸಾವನ್ನಪ್ಪಿದೆ. ಹಮಾಲರ ಕಾಲೋನಿಯ ಪಂಪಾವತಿ, ಅಕ್ಕಮ್ಮ ದಂಪತಿ ಪುತ್ರಿ ಪವಿತ್ರ, ಬೆಳಗ್ಗೆ ಆಟ ಆಡುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಇಂದು(ಫೆ.27) ಮಧ್ಯಾಹ್ನ ಚರಂಡಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ಚರಂಡಿ ಮುಚ್ಚದೆ ಹಾಗೆ ಬಿಟ್ಟಿರುವ ನಗರಸಭೆ ಅಧಿಕಾರಿಗಳ ವಿರುದ್ದ ಇದೀಗ ಆಕ್ರೋಶ ಕೇಳಿಬಂದಿದ್ದು, ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ನಗರಸಭೆ ಕಚೇರಿ ಬಳಿ ಮಗುವಿನ ಶವವಿಟ್ಟು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಗಂಗಾವತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ವಿಜಯನಗರ: ಕೌಟುಂಬಿಕ ಕಲಹ; ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನ
ಮೊಬೈಲ್ ಫೋನ್ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
ಬೆಂಗಳೂರು: ವ್ಯಕ್ತಿ ಮೇಲೆ ಹಲ್ಲೆ ಮಾಡಿ ಮೊಬೈಲ್ ಫೋನ್ ಕದ್ದು ಪರಾರಿಯಾಗುತ್ತಿದ್ದ ಇಬ್ಬರು ಕಳ್ಳರನ್ನು ಚೇಸ್ ಮಾಡಿ ಹೊಯ್ಸಳ ಪೊಲೀಸರು ಬಂಧಿಸಿದ್ದಾರೆ. ಸ್ಟೀಫನ್ ರಾಜ್ ಮತ್ತು ವಿನೋದ್ ಬಂಧಿತರು. ಮೊಬೈಲ್ ಕದ್ದು ಪರಾರಿಯಾಗುತ್ತಿದ್ದವರ ಬಗ್ಗೆ ವ್ಯಕ್ತಿಯೋರ್ವ 112 ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದ. ಕೂಡಲೇ ಇಂದಿರಾನಗರ ಪೊಲೀಸರಿಗೆ ಪ್ರಕರಣ ವರ್ಗಾವಣೆ ಮಾಡಲಾಗಿತ್ತು. ತಕ್ಷಣ ಎಚ್ಚೆತ್ತ ಹೊಯ್ಸಳ ಪೊಲೀಸರು ಚೇಸ್ ಮಾಡಿ ಬಂಧಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:08 pm, Tue, 27 February 24