AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯನಗರ: ಕೌಟುಂಬಿಕ ಕಲಹ; ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನ

ಇತ್ತೀಚೆಗೆ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕ್ಷುಲ್ಲಕ ಕಾರಣಗಳಿಗೆ ಜೀವವನ್ನ ತ್ಯಜಿಸುತ್ತಿದ್ದಾರೆ. ಅದರಂತೆ ಇದೀಗ ವಿಜಯನಗರ (Vijayanagara) ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಂಚೋಬನಹಳ್ಳಿಯಲ್ಲಿ ಕೌಟುಂಬಿಕ ಕಲಹದಿಂದ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ವಿಜಯನಗರ: ಕೌಟುಂಬಿಕ ಕಲಹ; ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನ
ಪ್ರಾತಿನಿಧಿಕ ಚಿತ್ರ
ವಿನಾಯಕ ಬಡಿಗೇರ್​
| Edited By: |

Updated on: Feb 17, 2024 | 3:41 PM

Share

ವಿಜಯನಗರ, ಫೆ.17: ಕೌಟುಂಬಿಕ ಕಲಹದಿಂದ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿಜಯನಗರ (Vijayanagara) ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಂಚೋಬನಹಳ್ಳಿಯಲ್ಲಿ ನಡೆದಿದೆ. ಇಬ್ಬರು ಮಕ್ಕಳ ಜೊತೆ ವಿಷ ಸೇವಿಸಿ ತಂದೆ ಮಾರಪ್ಪ ಆತ್ಮಹತ್ಯೆಗೆ ಯತ್ನಿಸಿದ್ದ. ಇದೀಗ ಮಾರಪ್ಪನ ಸ್ಥಿತಿ ಗಂಭೀರವಾಗಿದ್ದು, ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯಕ್ಕೆ ಪತ್ನಿಯ ನಡುವಳಿಕೆಯಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ. ಅಸ್ವಸ್ಥಗೊಂಡವರನ್ನು ಕೂಡ್ಲಿಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಖಾನಾಹೊಸಳ್ಳಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸಕ್ಕರೆ ಕಾರ್ಖಾನೆ ಸುರಿದ ಬೂದಿಯಿಂದ ತೀವ್ರ ಸುಟ್ಟಗಾಯಗಳಾಗಿದ್ದ ವ್ಯಕ್ತಿ ಆತ್ಮಹತ್ಯೆ

ಚಾಮರಾಜನಗರ: ಸಕ್ಕರೆ ಕಾರ್ಖಾನೆ ಸುರಿದ ಬೂದಿಯಿಂದ ತೀವ್ರ ಸುಟ್ಟಗಾಯಗಳಾಗಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣಾದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಕುಂತೂರುನಲ್ಲಿ ನಡೆದಿದೆ. ವೆಂಕಟರಮಣ (52) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಸರ್ಕಾರಿ ಜಾಗ, ಗೋಮಾಳಗಳಿಗೆ ತಂದು ಬೂದಿ ಸುರಿಯುವ ಕುಂತೂರು ಸಕ್ಕರೆ ಕಾರ್ಖಾನೆ ಸಿಬ್ಬಂದಿಯಾಗಿದ್ದ ಇವರು, ಕಳೆದ ಆರು ತಿಂಗಳ ಹಿಂದೆ ದನ ಮೇಯಿಸುವಾಗ ಬೂದಿಯಲ್ಲಿ ಬಿದ್ದು ತೀವ್ರ ಗಾಯಗೊಂಡಿದ್ದರು.

ಇದನ್ನೂ ಓದಿ:ʻಕರಿಮಣಿ ಮಾಲೀಕ ನೀನಲ್ಲʼ ಎಂದಿದಕ್ಕೆ ಪತಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್​; ಸ್ಪಷ್ಟತೆ ನೀಡಿದ ಪತ್ನಿ

ಚಿಕಿತ್ಸೆಗೆ ಸರಿಯಾಗಿ ನೆರವಾಗದ ಸಕ್ಕರೆ ಕಾರ್ಖಾನೆ; ಚಿಕಿತ್ಸೆಗೆ ಹಣ ಇಲ್ಲದೆ ಆತ್ಮಹತ್ಯೆ

ಇನ್ನು ವೆಂಕಟರಮಣ ಅವರು ಎರಡೂ ಕಾಲುಗಳು ಸೇರಿದಂತೆ ಸೊಂಟದವರೆಗೂ ಸುಟ್ಟು ಹೋಗಿ ವೇದನೆ ಅನುಭವಿಸುತ್ತಿದ್ದರು. ಚಿಕಿತ್ಸೆಗೆ ಸಕ್ಕರೆ ಕಾರ್ಖಾನೆ ಕೂಡ ಸರಿಯಾಗಿ ನೆರವಾಗಿಲ್ಲ. ಜೊತೆಗೆ ದುಡಿಯಲು ಆಗದೆ, ಚಿಕಿತ್ಸೆಗೆ ಹಣವೂ ಇಲ್ಲದೆ ಇಂದು ನೇಣಿಗೆ ಶರಣಾಗಿದ್ದಾರೆ. ಈ ಕುರಿತು ಕಾರ್ಖಾನೆ ಮುಂದೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನಲೆ ಮೃತ ವೆಂಕಟರಮಣನ ಪುತ್ರನಿಗೆ ಉದ್ಯೋಗ ನೀಡುವುದಾಗಿ ಸಕ್ಕರೆ ಕಾರ್ಖಾನೆ ಭರವಸೆ ನೀಡಿದೆ. ಕಾರ್ಖಾನೆ ಭರವಸೆ ನೀಡಿದ ಹಿನ್ನಲೆ ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ