ʻಕರಿಮಣಿ ಮಾಲೀಕ ನೀನಲ್ಲʼ ಎಂದಿದಕ್ಕೆ ಪತಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್​; ಸ್ಪಷ್ಟತೆ ನೀಡಿದ ಪತ್ನಿ

ʻಕರಿಮಣಿ ಮಾಲೀಕ ನೀನಲ್ಲʼ ಎಂದು ಪತ್ನಿ ಮಾಡಿದ ರೀಲ್ಸ್​ಗೆ ಮನನೊಂದು ಪತಿ ಆತ್ಮಹತ್ಯೆಗೆ ಶರಣಾದ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದ್ದು, ಪತ್ನಿ ರೀಲ್ಸ್ ಮಾಡಿದಕ್ಕೆ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಮೃತನ ಕುಟುಂಬಸ್ಥರು ವಾದ ಮಾಡ್ತಾಯಿದ್ರೆ, ಇತ್ತ ಪತ್ನಿ ರೂಪ ತನ್ನ ಪತಿಯ ಸಾವಿಗೆ ಸಾಲದ ಶೂಲವೇ ಕಾರಣ ಎಂದು ಹೇಳುತ್ತಿದ್ದಾಳೆ.

ʻಕರಿಮಣಿ ಮಾಲೀಕ ನೀನಲ್ಲʼ ಎಂದಿದಕ್ಕೆ ಪತಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್​; ಸ್ಪಷ್ಟತೆ ನೀಡಿದ ಪತ್ನಿ
ಮೃತನ ಪತ್ನಿ ರೂಪಾ
Follow us
ಸೂರಜ್ ಪ್ರಸಾದ್ ಎಸ್.ಎನ್
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 16, 2024 | 3:30 PM

ಚಾಮರಾಜನಗರ, ಫೆ.16: ಪತ್ನಿಯ ಕರಿಮಣಿ ಮಾಲೀಕ ರೀಲ್ಸ್​ಗೆ ಮನನೊಂದು ಪತಿ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ.ಈ ಕುರಿತು ಪ್ರತಿಕ್ರಿಯೆ ನೀಡಿದ ಮೃತ ಕುಮಾರ್​ ಪತ್ನಿ ರೂಪ, ‘ನಾನು ರೀಲ್ಸ್ ಮಾಡಿದಕ್ಕೆ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಈ ಹಿಂದಿನಿಂದಲು ನಾನು ರೀಲ್ಸ್ ಮಾಡಿದ್ದೇನೆ, ಅದು ನನ್ನ ಪತಿ ಕುಮಾರ್​ಗೂ ತಿಳಿದಿದೆ. ನನ್ನ ಮೇಲೆ ಅವರ ಕುಟುಂಬಸ್ಥರು ಸುಕಾ ಸುಮ್ಮನೆ ಆರೋಪಿಸುತ್ತಿದ್ದಾರೆ. ನಿಜವಾಗಿಯೂ ನನ್ನ ಪತಿ ಸಾವಿಗೆ ಮಾಡಿಕೊಂಡಿದ್ದ ಸಾಲವೇ ಕಾರಣ ಎಂದಿದ್ದಾರೆ.

ಈ ಸಾವಿಗೆ ನಾನು ಮಾಡಿದ್ದ ರೀಲ್ಸ್ ಕಾರಣವಲ್ಲವೆಂದ ಪತ್ನಿ ರೂಪ

ಇನ್ನು ಆತ್ಮಹತ್ಯೆ ಮಾಡಿಕೊಂಡ ಕುಮಾರ್ ‘ಪ್ರತಿನಿತ್ಯ ಕುಡಿಯುತ್ತಿದ್ದ, ಜೊತೆಗೆ ಇಸ್ಪಿಟ್ ಆಡುವ ಚಟ ಕೂಡ ಇತ್ತು. ಈ ಹಿನ್ನಲೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾವಿಗೆ ನಾನು ಮಾಡಿದ್ದ ರೀಲ್ಸ್ ಕಾರಣವಲ್ಲ ಎಂದಿದ್ದಾರೆ. ಇದರ ಜೊತೆಗೆ ಆಸ್ತಿಯ ವಿಚಾರಕ್ಕೆ ಆಗಾಗ ಜಗಳವಾಗುತ್ತಿತ್ತಂತೆ. ಇದು ಒಮ್ಮೆ ಪೊಲೀಸ್​ ಠಾಣೆಯ ಮೆಟ್ಟಿಲೇರಿತ್ತು ಮತ್ತು ಸಾಲ, ಈ ಎಲ್ಲ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ, ಇದೀಗ ನಾನು ಮಾಡಿದ ರೀಲ್ಸ್​ ಕಾರಣವೆಂದು ಅವರ ಕುಟುಂಬದವರು ಆರೋಪಿಸುತ್ತಿದ್ದಾರೆ ಎಂದು ಅಳಲನ್ನು ಮೃತನ ಪತ್ನಿ ತೋಡಿಕೊಂಡಿದ್ದಾಳೆ.

ಇದನ್ನೂ ಓದಿ:ʻಕರಿಮಣಿ ಮಾಲೀಕ ನೀನಲ್ಲʼ ಎಂದ ಪತ್ನಿ, ಮನನೊಂದು ಆತ್ಮಹತ್ಯೆಗೆ ಶರಣಾದ ಪತಿ

ಈ ಆತ್ಮಹತ್ಯೆ ಮಾಡಿಕೊಂಡ ಕುಮಾರ್​, ಇದೆ ಚಾಮರಾಜನಗರದ ಪಿಜಿ ಪಾಳ್ಯದವ. ತಾಯಿ ಚಿಕ್ಕ ವಯಸ್ಸಿನಲ್ಲೇ ಅನಾರೋಗ್ಯದ ನಿಮಿತ್ತ ತೀರಿ ಹೋದ ಪರಿಣಾಮ ಚಿಕ್ಕವಯಸ್ಸಿನಿಂದಲೇ ಕುಮಾರನ ಮೇಲೆ ಜವಾಬ್ದಾರಿ ಬಿದ್ದಿತ್ತು. ಇದ್ದ ಎರೆಡುವರೆ ಎಕರೆಯಲ್ಲಿ ಮೂರು ಮಂದಿ ಅಣ್ಣ ತಮ್ಮಂದಿರು ಬೆಳೆ ಬೆಳೆದು ಕೂಲಿ ನಾಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಕಳೆದ ಹತ್ತು ವರ್ಷಗಳ ಹಿಂದೆ ಗುಂಡೇಗಾಲ ಗ್ರಾಮದ ಯಶೋಧ ದಂಪತಿಯ ಮೊದಲ ಮಗಳಾದ ರೂಪ ಜೊತೆ ವಿವಾಹವಾಗಿತ್ತು. ಇವರಿಬ್ಬರ ಪ್ರೀತಿಯ ಸಂಕೇತವಾಗಿ ಇಬ್ಬರು ಹೆಣ್ಣು ಮಕ್ಕಳು ಸಹ ಜನಿಸಿತ್ತು. ಎಲ್ಲಾವು ಚೆನ್ನಾಗೆಯಿತ್ತು. ಆದ್ರೆ, ಇದೀಗ ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಅದೇನೆ ಹೇಳಿ ಪತ್ನಿ ರೀಲ್ಸ್ ಮಾಡಿದಕ್ಕೆ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಮೃತನ ಕುಟುಂಬಸ್ಥರು ವಾದ ಮಾಡ್ತಾಯಿದ್ರೆ ಇತ್ತ ಪತ್ನಿ ರೂಪ ತನ್ನ ಪತಿಯ ಸಾವಿಗೆ ಸಾಲದ ಶೂಲವೇ ಕಾರಣ ಅಂತ ಕಾರಣ ನೀಡುತ್ತಿದ್ದಾಳೆ. ಸದ್ಯ ಯುಡಿಆರ್ ಕೇಸ್ ರಿಜಿಸ್ಟರ್ ಮಾಡಿಕೊಂಡ ಹನೂರು ಪೊಲೀಸರು ಹೆಚ್ಚಿನ ವಿಚಾರಣೆಯನ್ನ ನಡೆಸುತ್ತಿದ್ದಾರೆ. ಪೊಲೀಸರ ವಿಚಾರಣೆಯಿಂದಷ್ಟೇ ಸತ್ಯಾಸತ್ಯತೆ ಆಚೆ ಬರಬೇಕಿದೆ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸದ್ಯ ಯುಡಿಆರ್ ಕೇಸ್ ರಿಜಿಸ್ಟರ್ ಮಾಡಿಕೊಂಡ ಹನೂರು ಪೊಲೀಸರು ಹೆಚ್ಚಿನ ವಿಚಾರಣೆಯನ್ನ ನಡೆಸುತ್ತಿದ್ದಾರೆ. ಪೊಲೀಸರ ವಿಚಾರಣೆಯಿಂದಷ್ಟೇ ಸತ್ಯಾಸತ್ಯತೆ ಆಚೆ ಬರಬೇಕಿದೆ.

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ