ಸೋಮಶೇಖರ್ ಅಡ್ಡ ಮತದಾನ ಮಾಡಿ ಪಕ್ಷ ಮತ್ತು ಮತದಾರರಿಗೆ ದ್ರೋಹವೆಸಗಿದ್ದಾರೆ: ಆರ್ ಅಶೋಕ

ಸೋಮಶೇಖರ್ ಅಡ್ಡ ಮತದಾನ ಮಾಡಿ ಪಕ್ಷ ಮತ್ತು ಮತದಾರರಿಗೆ ದ್ರೋಹವೆಸಗಿದ್ದಾರೆ: ಆರ್ ಅಶೋಕ

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 27, 2024 | 6:12 PM

ಸೋಮಶೇಖರ್ ಬಿಜೆಪಿ ಟಿಕೆಟ್ ನಿಂದ ಗೆದ್ದಿದ್ದಾರೆ ಮತ್ತು ತಮ್ಮ ಕ್ಷೇತ್ರದ ಜನರಿಗೂ ಮೋಸ ಮಾಡುತ್ತಿದ್ದಾರೆ ಎಂದು ಅಶೋಕ ಹೇಳಿದರು. ಅವರು ರಾಜಕೀಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಮತ್ತು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಪಕ್ಷದ ಲೀಗಲ್ ಸೆಲ್ ಗೆ ಸೂಚನೆ ನೀಡಲಾಗಿದೆ ಎಂದು ಅಶೋಕ ಹೇಳಿದರು.

ಬೆಂಗಳೂರು: ಇದನ್ನು ಬಿಜೆಪಿ ಸಹ ನಿರೀಕ್ಷಿಸಿತ್ತು ಮತ್ತು ಕಾಂಗ್ರೆಸ್ ಗೆ ಅಚಲ ವಿಶ್ವಾಸವಿತ್ತು. ಇಂದಿನ ರಾಜ್ಯಸಭಾ ಚುನಾವಣೆ ಮತದಾನದಲ್ಲಿ ಬಿಜೆಪಿ ಶಾಸಕರಾದ ಎಸ್ ಟಿ ಸೋಮಶೇಖರ್ (ST Somashekhar) ಮತ್ತು ಶಿವರಾಂ ಹೆಬ್ಬಾರ್ (Shivaram Hebbar) ಅಡ್ಡ ಮತದಾನ ಮಾಡಿದ್ದಾರೆ. ಶಿವರಾಂ ಹೆಬ್ಬಾರ್ ಕ್ರಾಸ್ ವೋಟಿಂಗ್ ಮಾಡಿದ್ದು ಉನ್ನೂ ಖಚಿತಪಟ್ಟಿಲ್ಲವಾದರೂ ಸೋಮಶೇಖರ್ ಮಾಡಿದ್ದಾರೆ. ವಿರೋಧ ಪಕ್ಷದ ನಾಯಕ ಆರ್ ಅಶೋಕ (R Ashoka) ಯಶವಂತಪುರ ಶಾಸಕನ ಬಗ್ಗೆ ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ ಮತ್ತು ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ವಿಧಾನ ಸೌಧದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅಶೋಕ, ಸೋಮಶೇಖರ್ ಮತ್ತು ಶಿವರಾಂ ಅವರಿಗೆ ವ್ಹಿಪ್ ಜಾರಿಮಾಡಲಾಗಿತ್ತು, ಅವರ ಪೋನ್ ಗಳಿಗೆ ಸಂದೇಶಗಳನ್ನು ಕಳಿಸಲಾಗಿತ್ತು ಮತ್ತು ಅವರ ಪಿಎ ಗಳಿಗೂ ವಿಷಯ ಮನವರಿಕೆ ಮಾಡಲಾಗಿತ್ತು. ಇಬ್ಬರೂ ತನ್ನೊಂದಿಗೆ ಬೆಳಗ್ಗೆ 10 ಗಂಟೆಯವರೆಗೆ ಸಂಪರ್ಕದಲ್ಲಿದ್ದರು ಆದರೆ ಹೀಗೆ ಮೋಸ ಮಾಡುತ್ತಾರೆಂಬ ನಿರೀಕ್ಷೆ ಇರಲಿಲ್ಲ. ಸೋಮಶೇಖರ್ ಬಿಜೆಪಿ ಟಿಕೆಟ್ ನಿಂದ ಗೆದ್ದಿದ್ದಾರೆ ಮತ್ತು ತಮ್ಮ ಕ್ಷೇತ್ರದ ಜನರಿಗೂ ಮೋಸ ಮಾಡುತ್ತಿದ್ದಾರೆ ಎಂದು ಅಶೋಕ ಹೇಳಿದರು. ಅವರು ರಾಜಕೀಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಮತ್ತು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಪಕ್ಷದ ಲೀಗಲ್ ಸೆಲ್ ಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ಇದನ್ನೂ ಓದಿ:  ರಾಜ್ಯಸಭಾ ಚುನಾವಣೆಯ ಮತದಾನ ಅಂತ್ಯ: ಬಿಜೆಪಿಗೆ ಕೈಕೊಟ್ಟ ಮತ್ತೋರ್ವ ಶಾಸಕ, ಕಾಂಗ್ರೆಸ್ ಪ್ಲ್ಯಾನ್ ಸಕ್ಸಸ್

Published on: Feb 27, 2024 04:26 PM