AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂಳೆಕೆರೆ ಜಮೀನು ಒತ್ತುವರಿ: ದಿಟ್ಟ ಹೋರಾಟಕ್ಕೆ ಮುಂದಾದ ಪಾಂಡೊಮಟ್ಟಿ ಗುರುಬಸವ ಸ್ವಾಮೀಜಿ

ಸೂಳೆಕೆರೆ ಜಮೀನು ಒತ್ತುವರಿ: ದಿಟ್ಟ ಹೋರಾಟಕ್ಕೆ ಮುಂದಾದ ಪಾಂಡೊಮಟ್ಟಿ ಗುರುಬಸವ ಸ್ವಾಮೀಜಿ

ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಸಾಧು ಶ್ರೀನಾಥ್​|

Updated on: Feb 27, 2024 | 2:25 PM

Share

6468 ಎಕರೆ ಪ್ರದೇಶದಲ್ಲಿರುವ ಸೂಳೆಕೆರೆ ಪ್ರದೇಶದಲ್ಲಿ 900 ಎಕರೆಗೂ ಹೆಚ್ಚು ಭಾಗ ಒತ್ತುವರಿಯಾಗಿದೆ. ಅದನ್ನು ಬಿಟ್ಟು ಕೊಡಿ ಎಂದು ಚನ್ನಗಿರಿ ತಾಲೂಕಿನ ಪಾಂಡೊಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ ಆಗ್ರಹಿಸಿದ್ದಾರೆ.

ಸೂಳೆಕೆರೆ ಜಮೀನು ಒತ್ತುವರಿ ಮಾಡಿಕೊಂಡವರಿಗೆ ಬಿಸಿ ಮಟ್ಟಿಸಲು ಮುಂದಾಗಿರುವ ಪಾಂಡೊಮಟ್ಟಿ ಗುರುಬಸವ ಸ್ವಾಮೀಜಿ ದಿಟ್ಟ ಹೋರಾಟಕ್ಕೆ ಮುಂದಾಗಿದ್ದಾರೆ. ಸುಮಾರು ಒಂಬೈನೂರು ಎಕರೆಗೂ ಹೆಚ್ಚು ಸೂಳೆಕೆರೆ ಜಮೀನು‌ ಒತ್ತುವರಿಯಾಗಿದೆ. ಇದು ದಾಖಲೆಗಳಿಂದ ಸ್ಪಷ್ಟವಾಗಿದೆ. ಹೀಗೆ ಒತ್ತುವರಿ ಮಾಡಿಕೊಂಡವರು ಹೃದಯಾಂತರಾಳದಿಂದ ಒತ್ತುವರಿ ಭೂಮಿ ಬಿಟ್ಟು ಕೊಡಿ ಎಂದು ದಾವಣಗೆರೆ‌ ಜಿಲ್ಲೆಯ ಚನ್ನಗಿರಿ ತಾಲೂಕಿನ ಪಾಂಡೊಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ (Gurubasava Swamiji of Pandomati Virakta Mutt, Channagiri) ಆಗ್ರಹಿಸಿದ್ದಾರೆ. ಚನ್ನಗಿರಿ ತಾಲೂಕಿನಲ್ಲಿ ಇರುವ ಏಷ್ಯಾದ ದೊಡ್ಡ ಕೆರೆಗಳಲ್ಲಿ ಒಂದಾದ ಸೂಳೆಕೆರೆ ಸಂರಕ್ಷಣೆಗಾಗಿ ಗುರುಬಸವ ಸ್ವಾಮೀಜಿ ಹೋರಾಟ ಮಾಡುತ್ತಿದ್ದಾರೆ. ಹಲವಾರು ವರ್ಷದ ಹೋರಾಟದ ಫಲವಾಗಿ ಸರ್ಕಾರದಿಂದ ಸೂಳೆ ಕೆರೆ ಸರ್ವೇ ಆಗಿದೆ. 6468 ಎಕರೆ ಪ್ರದೇಶದಲ್ಲಿ ಸೂಳೆಕೆರೆ ಹರಡಿಕೊಂಡಿದೆ. ಇತ್ತೀಚಿಗೆ ನಡೆಸಿರುವ ಸರ್ವೇಯಿಂದ 900 ಎಕರೆಗೂ ಹೆಚ್ಚು ಭಾಗ ಒತ್ತುವರಿ ಮಾಡಿಕೊಂಡಿರುವುದು ಗೊತ್ತಾಗಿದೆ. ಸೂಳೆಕೆರೆ ಎಂಬುದು ಸಾರ್ವಜನಿಕ ಆಸ್ತಿ. ಇಷ್ಟು ದಿನ ಆ ಜಮೀನಿನಿಂದ ಬೇಕಾದಷ್ಟು ಲಾಭ ಪಡೆದಿದ್ದೀರಾ. ಈಗ ಬಿಟ್ಟು ಕೊಡಿ. ಮೇಲಾಗಿ ಸರ್ವೇ ಆಗಿದೆ ನಿಜ. ಸರ್ವೇ ಆದ ಪ್ರಕಾರ ಹದ್ದು ಬಸ್ತಿ ಆಗಬೇಕು. ಸರ್ವೇ ಅಧಿಕಾರಿಗಳು ಗುರ್ತಿಸಿದ ಪ್ರದೇಶವನ್ನ ತೆರವು ಗೊಳಿಸಬೇಕು. ಇದು ತೆರವಾದ್ರೆ ಇನ್ನೊಂದು ಟಿಎಂಸಿ ನೀರು ನಿಲ್ಲಿಸಬಹುದು ಎಂದು ಸ್ವಾಮೀಜಿ ಆಶಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ