ಹೊಂದಾಣಿಕೆ ರಾಜಕಾರಣದಿಂದಾಗೇ ಸೋಮಣ್ಣ ಎರಡೂ ಕ್ಷೇತ್ರಗಳಲ್ಲಿ ಸೋತರು: ಬಸನಗೌಡ ಪಾಟೀಲ್ ಯತ್ನಾಳ್

ಹೊಂದಾಣಿಕೆ ರಾಜಕಾರಣದಿಂದಾಗೇ ಸೋಮಣ್ಣ ಎರಡೂ ಕ್ಷೇತ್ರಗಳಲ್ಲಿ ಸೋತರು: ಬಸನಗೌಡ ಪಾಟೀಲ್ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 27, 2024 | 5:10 PM

ಶಿಕಾರಿಪುರದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬ 70,000 ಸಾವಿರದಷ್ಟು ವೋಟು ಪಡೆಯುತ್ತಾನೆ, ಕನಕಪುರದಲ್ಲಿ ಬಿಜೆಪಿ ನಾಯಕರ್ಯಾರೂ ಪ್ರಚಾರಕ್ಕೆ ಹೋಗಲ್ಲ ಮತ್ತ್ತು ಚಾಮರಾಜಪೇಟೆ ಹಾಗೂ ವರುಣಾದಲ್ಲಿ ಸೋಮಣ್ಣ ಹೀನಾಯ ಸೋಲು ಅನುಭವಿಸುತ್ತಾರೆ, ಇದೆಲ್ಲ ಬಿಜೆಪಿ ನಾಯಕರ ಹೊಂದಾಣಿಕೆ ರಾಜಕಾರಣದ ಫಲ ಎಂದು ಯತ್ನಾಳ್ ಹೇಳಿದರು.

ಬೆಂಗಳೂರು: ಬಿಜೆಪಿಯ ಫೈರ್ ಬ್ರ್ಯಾಂಡ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಪಕ್ಷದ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ (BS Yediyurappa) ಮತ್ತು ಅವರ ಮಗ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ವಿರುದ್ಧ ಕಾಮೆಂಟ್ ಮಾಡುವುದನ್ನು ನಿಲ್ಲಿಸಲಾರರು. ಇಂದು ವಿಧಾನ ಸೌಧದಲ್ಲಿ ರಾಜ್ಯಸಭಾ ಚುನಾವಣೆಗಾಗಿ ನಡೆದ ಮತದಾನಲ್ಲಿ ಪಾಲ್ಗೊಂಡ ಬಳಿಕ ಟಿವಿ9 ಬೆಂಗಳೂರು ವರದಿಗಾರನೊಂದಿಗೆ ಮಾತಾಡಿದ ಯತ್ನಾಳ್ ವಿಧಾನ ಸಭಾ ಚುನಾವಣೆಯಲ್ಲಿ ವಿ ಸೋಮಣ್ಣ ಚಾಮರಾಜಪೇಟೆ ಮತ್ತು ವರುಣಾದಲ್ಲಿ ಬಿಜೆಪಿ ನಾಯಕರಿಂದ ನಡೆದ ಹೊಂದಾಣಿಕೆ ರಾಜಕಾರಣವೇ ಕಾರಣ ಎಂದು ಹೇಳಿದರು. ಶಿಕಾರಿಪುರದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬ 70,000 ಸಾವಿರದಷ್ಟು ವೋಟು ಪಡೆಯುತ್ತಾನೆ, ಕನಕಪುರದಲ್ಲಿ ಬಿಜೆಪಿ ನಾಯಕರ್ಯಾರೂ ಪ್ರಚಾರಕ್ಕೆ ಹೋಗಲ್ಲ ಮತ್ತ್ತು ಚಾಮರಾಜಪೇಟೆ ಹಾಗೂ ವರುಣಾದಲ್ಲಿ ಸೋಮಣ್ಣ ಹೀನಾಯ ಸೋಲು ಅನುಭವಿಸುತ್ತಾರೆ, ಇದೆಲ್ಲ ಬಿಜೆಪಿ ನಾಯಕರ ಹೊಂದಾಣಿಕೆ ರಾಜಕಾರಣದ ಫಲ ಎಂದು ಯತ್ನಾಳ್ ಹೇಳಿದರು. ಸೋಮಣ್ಣ ಸೋಲಿಗೂ ಬಿಜೆಪಿ ನಾಯಕರೇ ಕಾರಣವೇ ಅಂತ ಕೇಳಿದರೆ ಪೂಜ್ಯ ತಂದೆಯವರೇ ತಮ್ಮ ನಿಷ್ಠಾವಂತ ಕಾರ್ಯಕರ್ತನೊಬ್ಬನನ್ನು ಎರಡೂ ಕ್ಷೇತ್ರಗಳಲ್ಲಿ ಬಿಟ್ಟು ಸೋಮಣ್ಣ ಸೋಲಿಗೆ ಕಾರಣರಾದರು ಎಂದು ಪರೋಕ್ಷವಾಗಿ ಯಡಿಯೂರಪ್ಪರನ್ನು ಟೀಕಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ತುಮಕೂರು ಬಿಜೆಪಿ ಟಿಕೆಟ್​ ಫೈಟ್: ಟಿಕೆಟ್ ಸಿಗುವ ವಿಶ್ವಾಸದಲ್ಲಿ ಮಾಧುಸ್ವಾಮಿ; ಮತ್ತೊಬ್ಬ ಆಕಾಂಕ್ಷಿ ವಿ ಸೋಮಣ್ಣ ಹೇಳುವುದೇನು?