ಶಿವಮೊಗ್ಗದಲ್ಲಿ 12 ಅಡಿ ಉದ್ದದ ಬೃಹತ್​​ ಕಾಳಿಂಗ ಸರ್ಪ ಪತ್ತೆ; ಇಲ್ಲಿದೆ ವಿಡಿಯೋ

ಶಿವಮೊಗ್ಗದಲ್ಲಿ 12 ಅಡಿ ಉದ್ದದ ಬೃಹತ್​​ ಕಾಳಿಂಗ ಸರ್ಪ ಪತ್ತೆ; ಇಲ್ಲಿದೆ ವಿಡಿಯೋ

Basavaraj Yaraganavi
| Updated By: ಕಿರಣ್ ಹನುಮಂತ್​ ಮಾದಾರ್

Updated on:Feb 27, 2024 | 7:52 PM

ಶಿವಮೊಗ್ಗ(Shivamogga) ತಾಲ್ಲೂಕಿನ ಸಿರಿಗೆರೆ ಗ್ರಾಮದಲ್ಲಿ ಬೃಹತ್​​ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡಿದೆ. ಚಂದ್ರಶೇಖರಪ್ಪ ಎಂಬುವವರ ಮನೆಯ ಕೊಟ್ಟಿಗೆಯಲ್ಲಿ ಅಡಗಿದ್ದ 12 ಅಡಿ ಉದ್ದ ಹಾಗೂ 7.5 Kg ತೂಕವಿದ್ದ ಗಂಡು ಕಾಳಿಂಗ ಸರ್ಪ(king cobra) ಇದಾಗಿದ್ದು, ಅದನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆ ಸಮ್ಮುಖದಲ್ಲಿಯೇ ಸಮೀಪದ ಕಾಡಿಗೆ ಹೋಗಿ ಬಿಡಲಾಗಿದೆ.

ಶಿವಮೊಗ್ಗ,ಫೆ.27: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ(Shivamogga) ತಾಲ್ಲೂಕಿನ ಸಿರಿಗೆರೆ ಗ್ರಾಮದಲ್ಲಿ ಬೃಹತ್​​ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡಿದೆ. ಚಂದ್ರಶೇಖರಪ್ಪ ಎಂಬುವವರ ಮನೆಯ ಕೊಟ್ಟಿಗೆಯಲ್ಲಿ ಅಡಗಿದ್ದ 12 ಅಡಿ ಉದ್ದ ಹಾಗೂ 7.5 Kg ತೂಕವಿದ್ದ ಗಂಡು ಕಾಳಿಂಗ ಸರ್ಪ(king cobra) ಇದಾಗಿದ್ದು, ಮೊದಲ ಬಾರಿಗೆ ಇಷ್ಟೊಂದು ದೊಡ್ಡದಾದ ಹಾವನ್ನು ನೋಡಿ ಕಂಗಾಲಾಗಿದ್ದಾರೆ. ಇನ್ನು ಈ ಕುರಿತು ಉರಗ ಸಂರಕ್ಷಕ ಬೆಳ್ಳೂರು ನಾಗರಾಜ ಅವರಿಗೆ ಮಾಹಿತಿ ನೀಡಲಾಗಿ, ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಹಾವಿನ ರಕ್ಷಣೆಗೆ ಧಾವಿಸಿ ಬಂದಿದ್ದಾರೆ. ಬಳಿಕ ಹರಸಾಹಸ ಪಟ್ಟು ಹಿಡಿದಿದ್ದು, ಅರಣ್ಯ ಇಲಾಖೆ ಸಮ್ಮುಖದಲ್ಲಿಯೇ ಸಮೀಪದ ಕಾಡಿಗೆ ಹೋಗಿ ಬಿಡಲಾಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published on: Feb 27, 2024 07:50 PM