WITT Tv9 Global Summit2024: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಅಮೂಲಾಗ್ರ ಬದಲಾವಣೆಗೆ ಸಾಕ್ಷಿಯಾಗಿದೆ: ಮನೋಜ್ ಸಿನ್ಹಾ, ಉಪ ರಾಜ್ಯಪಾಲ

ಕಳೆದ 34 ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ ಕಾಶ್ಮೀರದಲ್ಲಿ ಮೊಹರಂ ಮೆರವಣಿಗೆ ನಡೆದಿದೆ ಮತ್ತು ಜನ್ಮಾಷ್ಟಮಿಯ ಶೋಭಾಯಾತ್ರೆ ಕೂಡ ನಡೆದಿದೆ. ಎರಡೂ ಮೆರವಣಿಗೆ ಶಾಂತಿಯುತವಾಗಿ ನಡೆಯುವುದರ ಜೊತೆಗೆ ಮುಸಲ್ಮಾನರು ಶೋಭಾಯಾತ್ರೆಯಲ್ಲಿ ಮತ್ತು ಹಿಂದೂಗಳು ಮೊಹರಂ ಜುಲುಸ್ ನಲ್ಲಿ ಪಾಲ್ಗೊಂಡಿದ್ದಾರೆ ಎಂದು ಸಿನ್ಹಾ ಹೇಳಿದರು.

WITT Tv9 Global Summit2024:  ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಅಮೂಲಾಗ್ರ ಬದಲಾವಣೆಗೆ ಸಾಕ್ಷಿಯಾಗಿದೆ: ಮನೋಜ್ ಸಿನ್ಹಾ, ಉಪ ರಾಜ್ಯಪಾಲ
|

Updated on:Feb 28, 2024 | 6:19 PM

ದೆಹಲಿ: ದೇಶದ ಅತಿದೊಡ್ಡ ನೆಟ್‌ವರ್ಕ್‌ ಟಿವಿ9 ರಾಷ್ಟ್ರದ ರಾಜಧಾನಿಯಲ್ಲಿ ಅಯೋಜಿಸಿರುವ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ (What India Thinks Today) ಜಾಗತಿಕ ಶೃಂಗಸಭೆಯ ಮೂರನೇ ದಿನವಾಗಿರುವ ಇಂದು ಸಟ್ಟಾ ಸಮ್ಮೇಳನದಲ್ಲಿ ಭಾಗವಹಿಸಿ ಕಾಶ್ಮೀರ್ ಕೀ ನಯೀ ಕಹಾನಿ (Kashmir Ki Nayi Kahani) ವಿಷಯದ ಮೇಲೆ ಮಾತಾಡಿದ ಜಮ್ಮು ಮತ್ತು ಕಾಶ್ಮೀರದ ಉಪ ರಾಜ್ಯಪಾಲ ಮನೋಜ್ ಸಿನ್ಹಾ (Manoj Sinha) ಅವರು ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಕಣಿವೆ ಪ್ರದೇಶ ಅಮೂಲಾಗ್ರ ಬದಲಾವಣೆಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು. ಕಳೆದ 34 ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ ಕಾಶ್ಮೀರದಲ್ಲಿ ಮೊಹರಂ ಮೆರವಣಿಗೆ ನಡೆದಿದೆ ಮತ್ತು ಜನ್ಮಾಷ್ಟಮಿಯ ಶೋಭಾಯಾತ್ರೆ ಕೂಡ ನಡೆದಿದೆ. ಎರಡೂ ಮೆರವಣಿಗೆ ಶಾಂತಿಯುತವಾಗಿ ನಡೆಯುವುದರ ಜೊತೆಗೆ ಮುಸಲ್ಮಾನರು ಶೋಭಾಯಾತ್ರೆಯಲ್ಲಿ ಮತ್ತು ಹಿಂದೂಗಳು ಮೊಹರಂ ಜುಲುಸ್ ನಲ್ಲಿ ಪಾಲ್ಗೊಂಡಿದ್ದಾರೆ ಎಂದು ಸಿನ್ಹಾ ಹೇಳಿದರು. ಹಿಂದೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದ ರಾಷ್ಟ್ರಪತಿ ಕೂಡ ಒಂದಿಂಚು ಜಮೀನಿ ಖರೀದಿಸುವುದು ಸಾಧ್ಯವಿರಲಿಲ್ಲ ಮತ್ತು ಅಲ್ಲಿನ ಜನತೆಯ ರಕ್ಷಣೆಗಾಗಿ ಪ್ರಾಣವನ್ನೂ ಬಲಿದಾನ ಮಾಡುವ ಭಾರತದ ಸೈನಿಕನಿಗೆ ಒಂದು ಗುಡಿಸಲು ಬದುಕು ನಡೆಸುವುದು ಸಾಧ್ಯವಿರಲಿಲ್ಲ, ಅದರೆ ಆ ಸ್ಥಿತ ಈಗಿಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ: TV9 WITT Global Summit: ರಾಮ, ಅರ್ಜುನ, ಕೃಷ್ಣನ ಪಾತ್ರಗಳಿಗೆ ಮೋದಿಯನ್ನು ಹೋಲಿಸಿದ ಸಚಿವ ಧರ್ಮೇಂದ್ರ ಪ್ರಧಾನ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಒಂದೂ ಕಾಲು ಕೋಟಿ ಕಾಶ್ಮೀರಿಗಳ ಸಬಲೀಕರಣವಾಗಿದೆ, ಪಶ್ಚಿಮ ಪಾಕಿಸ್ತಾನದಿಂದ ಬಂದು ಕಾಶ್ಮೀರದ ಬೇರೆ ಬೇರೆ ಭಾಗಗಳಲ್ಲಿ ನೆಲೆಸಿರುವ ಜನರಿಗೆ ಭಾರತೀಯ ಪೌರತ್ವ ನೀಡಲಾಗಿದೆ. ಮಹಿಳಾ ಸಬಲೀಕರಣದ ಕೆಲಸವೂ ಜೋರಾಗಿ ನಡೆದಿದೆ. ಮೊದಲಾದರೆ ಕಾಶ್ಮೀರಿ ಯುವತಿಯರು ಬೇರೆ ರಾಜ್ಯಗಳ ಯುವಕರನ್ನು ಮದುವೆಯಾಗುವಂತಿರಲಿಲ್ಲ, ಈಗ ಅದು ಅನಿವಾರ್ಯ ಅಲ್ಲ ಎಂದು ಹೇಳಿದ ಸಿನ್ಹಾ, ಕಾಶ್ಮೀರಿ ಪಂಡಿತರು ನಿರ್ಭಿತಿಯಿಂದ, ಆತ್ಮವಿಶ್ವಾಸದಿಂದ ಬದುಕು ನಡೆಸುತ್ತಿದ್ದಾರೆ. ಭಯೋತ್ಪಾದಕರ ಹುಟ್ಟಡಗಿಸಿರುವುದರಿಂದ ಜನ ಶಾಂತಿ ಸಮಾಧಾನಗಳಿಂದ ಜೀವನ ನಡೆಸುತ್ತಿದ್ದಾರೆ. ಹಿಂದುಳಿದ ವರ್ಗಗಳು ಮತ್ತು ಅದಿವಾಸಿ ಸಮುದಾಯಗಳಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಸುಮಾರು 14 ಲಕ್ಷದಷ್ಟು ಜನಸಂಖ್ಯೆಯಿರುವ ಪಹಾಡಿ ಜನಾಂಗಕ್ಕೆ ಮೀಸಲಾತಿ ಕಲ್ಪಿಸಲಾಗಿದೆ ಎಂದು ಸಿನ್ಹಾ ಹೇಳಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸೋದ್ಯಮ ಮೊದಲಿನ ಹಾಗೆ ನಳನಳಿಸುತ್ತಿದೆ, ವಿದೇಶಗಳಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಕಣಿವೆ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಜಿಡಿಪಿ ರಾಷ್ಟ್ರೀಯ ಸರಾಸರಿಗಿಂತ ಉತ್ತಮವಾಗಿದೆ. ಮನಮೋಹನ ಸಿಂಗ್ ಅವಧಿಯಲ್ಲಿ ಆರಂಭಗೊಂಡಿದ್ದ ಪಂಡಿತರ ಪುನರ್ವಸತಿ ಕಾರ್ಯ ಈಗ ದುಪ್ಪಟ್ಟುಗೊಂಡಿದ್ದು 6,000 ಪಂಡಿತರಿಗೆ ಉದ್ಯೋಗ ಮತ್ತು ವಸತಿ ಸೌಕರ್ಯ ಕಲ್ಪಿಸಲಾಗಿದೆ ಎಂದು ಸಿನ್ಹಾ ಹೇಳಿದರು. ಮಂದಿರಗಳ ಜೀರ್ಣೋದ್ಧಾರದ ಜೊತೆಗೆ ಮಸೀದಿ ಮತ್ತು ಚರ್ಚ್ ಗಳನ್ನೂ ನವೀಕರಿಸಲಾಗುತ್ತಿದೆ ಎಂದು ಹೇಳಿದ ಮನೋಜ್ ಸಿನ್ಹಾ ಪಾರಂಪರಿಕ ಸ್ಥಳಗಳ ಪುನಶ್ಚೇತನಕ್ಕಾಗಿ ರೂ. 200 ಕೋಟಿ ಖರ್ಚು ಮಾಡಲಾಗಿದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:07 pm, Tue, 27 February 24

Follow us
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?
ಸೈಟು ಹಂಚಿಕೆ: ಮುಡಾ ಆಯುಕ್ತರನ್ನು ಭೇಟಿ ಮಾಡಿದ ಮೈಸೂರು ಕಾಂಗ್ರೆಸ್ ಮುಖಂಡರು
ಸೈಟು ಹಂಚಿಕೆ: ಮುಡಾ ಆಯುಕ್ತರನ್ನು ಭೇಟಿ ಮಾಡಿದ ಮೈಸೂರು ಕಾಂಗ್ರೆಸ್ ಮುಖಂಡರು
ಭೈರತಿ ಸುರೇಶ್​ರನ್ನು ಮನಬಂದಂತೆ ಬೈದಾಡಿದ ಹಿರಿಯ ರಾಜಕಾರಣಿ ಹೆಚ್ ವಿಶ್ವನಾಥ್
ಭೈರತಿ ಸುರೇಶ್​ರನ್ನು ಮನಬಂದಂತೆ ಬೈದಾಡಿದ ಹಿರಿಯ ರಾಜಕಾರಣಿ ಹೆಚ್ ವಿಶ್ವನಾಥ್
ಚನ್ನಪಟ್ಟಣದಲ್ಲಿ ಅಭಿವೃದ್ಧಿ ಕೆಲಸಗಳನ್ನು ನಾನೇ ಮಾಡಿದ್ದು: ಕುಮಾರಸ್ವಾಮಿ
ಚನ್ನಪಟ್ಟಣದಲ್ಲಿ ಅಭಿವೃದ್ಧಿ ಕೆಲಸಗಳನ್ನು ನಾನೇ ಮಾಡಿದ್ದು: ಕುಮಾರಸ್ವಾಮಿ
ಜಮೀನಿಗೆ ₹ 62 ಕೋಟಿ ಕೇಳುವ ಸಿಎಂ ರೈತರ ಬಗ್ಗೆ ಯೋಚಿಸಿದರೇ? ಕುಮಾರಸ್ವಾಮಿ
ಜಮೀನಿಗೆ ₹ 62 ಕೋಟಿ ಕೇಳುವ ಸಿಎಂ ರೈತರ ಬಗ್ಗೆ ಯೋಚಿಸಿದರೇ? ಕುಮಾರಸ್ವಾಮಿ
ಮಂಗಳೂರು-ಮೂಡಬಿದರೆ ರಸ್ತೆಯಲ್ಲಿ ಗುಡ್ಡಕುಸಿತವುಂಟಾಗುವ ಭೀತಿ!
ಮಂಗಳೂರು-ಮೂಡಬಿದರೆ ರಸ್ತೆಯಲ್ಲಿ ಗುಡ್ಡಕುಸಿತವುಂಟಾಗುವ ಭೀತಿ!