What India Thinks Today: ‘ಕಿರಣ್​​ಗೆ ಸಿನಿಮಾ ಮಾಡೋಕೆ ಆಗುತ್ತಿರಲಿಲ್ಲ’; ಮಾಜಿ ಪತ್ನಿಯ ಒದ್ದಾಟ ತಿಳಿಸಿದ ಆಮಿರ್ ಖಾನ್

ಈ ಮೊದಲು ಕಿರಣ್ ರಾವ್ ‘ಧೋಬೀ ಘಾಟ್’ ಚಿತ್ರ ನಿರ್ದೇಶನ ಮಾಡಿದ್ದರು. ಈ ಸಿನಿಮಾನ ಆಮಿರ್ ಖಾನ್ ನಿರ್ಮಾಣ ಮಾಡಿದ್ದರು. ಇದಾದ ದಶಕಗಳ ಬಳಿಕ ಇವರು ‘ಲಾಪತಾ ಲೇಡಿಸ್’ ಚಿತ್ರಕ್ಕಾಗಿ ಮತ್ತೆ ಒಂದಾದರು. ಇಷ್ಟೊಂದು ವಿಳಂಬ ಆಗಿದ್ದು ಏಕೆ ಎಂಬ ಪ್ರಶ್ನೆಗೆ ಕಿರಣ್ ರಾವ್ ಉತ್ತರ ನೀಡಿದ್ದಾರೆ.

What India Thinks Today: ‘ಕಿರಣ್​​ಗೆ ಸಿನಿಮಾ ಮಾಡೋಕೆ ಆಗುತ್ತಿರಲಿಲ್ಲ’; ಮಾಜಿ ಪತ್ನಿಯ ಒದ್ದಾಟ ತಿಳಿಸಿದ ಆಮಿರ್ ಖಾನ್
ಆಮಿರ್-ಕಿರಣ್
Follow us
ರಾಜೇಶ್ ದುಗ್ಗುಮನೆ
|

Updated on: Feb 27, 2024 | 2:15 PM

ಟಿವಿ9 ನೆಟ್​ವರ್ಕ್​ ನಡೆಸುತ್ತಿರುವ ‘ವಾಟ್​ ಇಂಡಿಯಾ ಥಿಂಕ್ಸ್​ ಟುಡೇ’ ಮೂರನೇ ದಿನವಾದ ಮಂಗಳವಾರ (ಫೆಬ್ರವರಿ 27) ಆಮಿರ್ ಖಾನ್ ಹಾಗೂ ಅವರ ಮಾಜಿ ಪತ್ನಿ ಕಿರಣ್ ರಾವ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿ ಆದರು. ಕಿರಣ್ ರಾವ್ ನಿರ್ದೇಶನದ ಹಾಗೂ ಆಮಿರ್ ಖಾನ್ (Aamir Khan) ನಿರ್ಮಾಣದ ‘ಲಾಪತಾ ಲೇಡಿಸ್’ ಚಿತ್ರದ ಪ್ರಮೋಷನ್​ಗಳಲ್ಲಿ ಅವರು ಬ್ಯುಸಿ ಇರುವುದರಿಂದ ಈ ಕಾರ್ಯಕ್ರಮಕ್ಕೆ ನೇರವಾಗಿ ಬರಲು ಸಾಧ್ಯವಾಗಿಲ್ಲ. ಹೀಗಾಗಿ, ವಿಡಿಯೋ ಕಾಲ್ ಮೂಲಕ ಇವರು ಹಾಜರಿ ಹಾಕಿದ್ದಾರೆ. ಈ ವೇಳೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಕಿರಣ್ ರಾವ್ ಈ ಮೊದಲು ‘ಧೋಬೀ ಘಾಟ್’ ಸಿನಿಮಾ (2011) ನಿರ್ದೇಶನ ಮಾಡಿದ್ದರು. ಈ ಚಿತ್ರವನ್ನು ಆಮಿರ್ ಖಾನ್ ನಿರ್ಮಾಣ ಮಾಡಿದ್ದರು. ಇದಾದ ದಶಕಗಳ ಬಳಿಕ ಇವರು ‘ಲಾಪತಾ ಲೇಡಿಸ್’ ಚಿತ್ರಕ್ಕಾಗಿ ಮತ್ತೆ ಒಂದಾಗಿದ್ದಾರೆ. ಇಷ್ಟೊಂದು ವಿಳಂಬ ಆಗಿದ್ದು ಏಕೆ ಎಂಬ ಪ್ರಶ್ನೆಗೆ ಕಿರಣ್ ರಾವ್ ಉತ್ತರ ನೀಡಿದ್ದಾರೆ. ‘ಧೋಬೀ ಘಾಟ್ ಸಿನಿಮಾ ರಿಲೀಸ್ ಆದ ವರ್ಷವೇ ಆಜಾದ್ ಜನಿಸಿದ. ಅಮ್ಮನಾಗಬೇಕು ಎಂಬುದು ನನ್ನ ಕನಸಾಗಿತ್ತು. ಹೀಗಾಗಿ, ಸಾಕಷ್ಟು ಸಮಯ ಆಜಾದ್ ಜೊತೆ ಕಳೆದೆ. ಈ ಕಾರಣಕ್ಕೆ ಸಾಕಷ್ಟು ಸಮಯ ಹಿಡಿಯಿತು’ ಎಂದಿದ್ದಾರೆ ಕಿರಣ್ ರಾವ್.

‘ಹಲವು ವರ್ಷ ಕಳೆದ ಬಳಿಕ ಕಿರಣ್​ಗೆ ಸಿನಿಮಾ ಮಾಡಿಲ್ಲ ಅನ್ನೋದು ಅರಿವಾಯಿತು. ಹೀಗಾಗಿ, ಅವರು ಸಿನಿಮಾ ಮಾಡಲು ಮುಂದಾದರು. ಎಷ್ಟೇ ಪ್ರಯತ್ನಿಸಿದರೂ ಸ್ಕ್ರಿಪ್ಟ್ ಮಾಡೋಕೆ ಆಗಿಲ್ಲ. 10 ವರ್ಷಗಳಿಂದ ಸಿನಿಮಾ ಮಾಡಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ. ಏಕೆಂದರೆ ಆಜಾದ್​ನ ಬಿಡಲು ಕಿರಣ್ ಸಿದ್ಧ ಇರಲಿಲ್ಲ’ ಎಂದು ವಿವರಿಸಿದ್ದಾರೆ ಆಮಿರ್ ಖಾನ್.

ಇದನ್ನೂ ಓದಿ: ಆಮಿರ್ ಖಾನ್ ಸಿನಿಮಾ ನಿರ್ಮಾಪಕನಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

‘ಲೇಡಿಸ್ ಲಾಪತಾ’ ಚಿತ್ರಕ್ಕೆ ಆಮಿರ್ ಖಾನ್ ನಿರ್ಮಾಪಕ. ಹೀಗಾಗಿ, ಸಿನಿಮಾದ ಸ್ಕ್ರಿಪ್ಟ್ ವಿಚಾರದಲ್ಲಿ ಅವರು ತಲೆ ಹಾಕಿದರೇ ಎನ್ನುವ ಪ್ರಶ್ನೆ ಮೂಡೋದು ಸಹಜ. ಇದಕ್ಕೆ ಕಿರಣ್ ಉತ್ತರ ನೀಡಿದ್ದಾರೆ. ‘ಆಮಿರ್ ಖಾನ್​​ಗೆ ಈ ಚಿತ್ರದ ಕಥೆ ಸಿಕ್ಕಿತ್ತು. ಅವರು ನನ್ನ ಬಳಿ ಇದನ್ನು ಚರ್ಚಿಸಿದರು. ನನಗೆ ಕಥೆ ಇಷ್ಟವಾಯಿತು. ನಾನು ಕಥೆಯನ್ನು ಬೆಳೆಸಿದೆ. ಆಮಿರ್ ಖಾನ್ ಒಮ್ಮೆ ನಿರ್ದೇಶಕರನ್ನು ಆಯ್ಕೆ ಮಾಡಿದ ಮೇಲೆ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುತ್ತಾರೆ. ಅವರು ಸೆಟ್​ಗೂ ಬರಲ್ಲ’ ಎಂದಿದ್ದಾರೆ ಕಿರಣ್.  ‘ನಿಮಗೆ ಕೆಲಸ ಗೊತ್ತಿದ್ದ ಮೇಲೆ ನಾನೇಕೆ ಸೆಟ್​ಗೆ ಬಂದು ಸಮಯ ವ್ಯರ್ಥ ಮಾಡಲಿ’ ಎಂದು ಕೇಳಿದ್ದಾರೆ ಆಮಿರ್ ಖಾನ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್