ಲಂಡನ್​ನಲ್ಲಿ ಉಳಿದುಕೊಳ್ಳಲು ದುಬಾರಿ ಮನೆ ಆಯ್ಕೆ ಮಾಡಿದ ಪ್ರಭಾಸ್; ತಿಂಗಳ ಬಾಡಿಗೆ ಎಷ್ಟು ಲಕ್ಷ?

ಒಪ್ಪಿಕೊಂಡ ಚಿತ್ರಗಳ ಕೆಲಸಗಳು ಪೂರ್ಣಗೊಳ್ಳುತ್ತಿದ್ದಂತೆ ಪ್ರಭಾಸ್ ಲಂಡನ್​ಗೆ ತೆರಳಲಿದ್ದಾರೆ. ಅವರು ಈಗಾಗಲೇ ಲಂಡನ್​ನಲ್ಲಿ ಮನೆ ಒಂದನ್ನು ಬಾಡಿಗೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಅವರು ತಿಂಗಳಿಗೆ 60 ಲಕ್ಷ ರೂಪಾಯಿ ಪಾವತಿ ಮಾಡುತ್ತಿದ್ದಾರಂತೆ. ಒಂದು ತಿಂಗಳು ಬ್ರೇಕ್​ನಲ್ಲಿ ಅವರು ಇಲ್ಲಿ ಉಳಿದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಲಂಡನ್​ನಲ್ಲಿ ಉಳಿದುಕೊಳ್ಳಲು ದುಬಾರಿ ಮನೆ ಆಯ್ಕೆ ಮಾಡಿದ ಪ್ರಭಾಸ್; ತಿಂಗಳ ಬಾಡಿಗೆ ಎಷ್ಟು ಲಕ್ಷ?
ಪ್ರಭಾಸ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Feb 27, 2024 | 12:06 PM

ಟಾಲಿವುಡ್ ನಟ ಪ್ರಭಾಸ್ (Prabhas) ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಅವರಿಗೆ ಈಗ 44 ವರ್ಷ ವಯಸ್ಸು. ಅವರು ಫಿಟ್ನೆಸ್​ಗೆ ಹೆಚ್ಚು ಒತ್ತು ನೀಡುತ್ತಾರೆ. ಜಿಮ್​ನಲ್ಲಿ ಸಾಕಷ್ಟು ಸಮಯ ಕಳೆಯುತ್ತಾರೆ. ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಚಿತ್ರದಿಂದ ಪ್ರಭಾಸ್ ದೊಡ್ಡ ಗೆಲುವು ಕಂಡಿದ್ದಾರೆ. ಅವರ ಬಗ್ಗೆ ಒಂದಿಲ್ಲೊಂದು ಗಾಸಿಪ್ ಹರಿದಾಡುತ್ತಲೇ ಇರುತ್ತದೆ. ಈಗ ಈ ಸಾಲಿಗೆ ಹೊಸ ಗಾಳಿ ಸುದ್ದಿ ಒಂದು ಸೇರ್ಪಡೆ ಆಗಿದೆ. ಪ್ರಭಾಸ್ ಅವರು ಲಂಡನ್​ನಲ್ಲಿ ವಾಸವಾಗೋಕೆ ಒಂದು ಮನೆ ಬಾಡಿಗೆ ಪಡೆದಿದ್ದಾರಂತೆ. ಅವರು ಉಳಿದುಕೊಳ್ಳುತ್ತಿರುವ ಮನೆಯ ಬಾಡಿಗೆ ಕೇಳಿ ಅನೇಕರಿಗೆ ಶಾಕ್ ಆಗಿದೆ.

ಪ್ರಭಾಸ್ ಅವರು ಸದ್ಯ ‘ಕಲ್ಕಿ 2898 ಎಡಿ’ ಸಿನಿಮಾ ಶೂಟ್​ನಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾಗೆ ನಾಗ್ ಅಶ್ವಿನ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಮೇ 9ರಂದು ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಆರು ಸಾವಿರ ವರ್ಷಗಳ ಕಥೆ ಇರಲಿದೆಯಂತೆ. ಮಹಾಭಾರತದ ಕೃಷ್ಣನ ಅವತಾರದಿಂದ ಕಲ್ಕಿ ಅವತಾರದವರೆಗೆ ಕಥೆ ಸಾಗಲಿದೆ. ಈ ಚಿತ್ರದ ಶೂಟ್ ಮುಗಿದ ಬಳಿಕ ‘ರಾಜಾ ಸಾಹೇಬ್’ ಚಿತ್ರದಲ್ಲಿ ಪ್ರಭಾಸ್ ಬ್ಯುಸಿ ಆಗಲಿದ್ದಾರೆ.

ಸಿನಿಮಾದ ಕೆಲಸಗಳು ಪೂರ್ಣಗೊಳ್ಳುತ್ತಿದ್ದಂತೆ ಪ್ರಭಾಸ್ ಲಂಡನ್​ಗೆ ಹಾರಲಿದ್ದಾರೆ. ಅವರು ಈಗಾಗಲೇ ಲಂಡನ್​ನಲ್ಲಿ ಮನೆ ಒಂದನ್ನು ಬಾಡಿಗೆ ಪಡೆದಿದ್ದಾರೆ. ಇದಕ್ಕಾಗಿ ಅವರು ತಿಂಗಳಿಗೆ 60 ಲಕ್ಷ ರೂಪಾಯಿ ಪಾವತಿ ಮಾಡುತ್ತಿದ್ದಾರೆ. ‘ಕಲ್ಕಿ 2898 ಎಡಿ’ ಹಾಗೂ ‘ರಾಜಾ ಸಾಬ್’ ಸಿನಿಮಾ ಶೂಟ್ ಮುಗಿದ ಬಳಿಕ ಅವರು ಒಂದು ತಿಂಗಳು ಬ್ರೇಕ್ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಭಾಸ್ ಅವರು ಮಂಡಿ ನೋವಿನಿಂದ ಬಳಲುತ್ತಿದ್ದಾರೆ. ಈಗಾಗಲೇ ಅವರು ಕೆಲವು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈಗ ಅವರು ಮತ್ತೊಮ್ಮೆ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ. ಈ ಕಾರಣಕ್ಕೆ ಅವರು ಲಂಡನ್​ನಲ್ಲಿ ಉಳಿದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕಾಗಿ ಅವರು ಬಾಡಿಗೆ ಪಡೆದ ಮನೆಯ ಬಗ್ಗೆ ಕೇಳಿ ಫ್ಯಾನ್ಸ್ ಅಚ್ಚರಿಗೆ ಒಳಗಾಗಿದ್ದಾರೆ.

ಪ್ರಭಾಸ್ ಅವರ ಆಸ್ತಿ 240 ಕೋಟಿ ರೂಪಾಯಿಗೂ ಅಧಿಕವಾಗಿದೆ. ಅವರು ಪ್ರತಿ ಸಿನಿಮಾಗೆ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ‘ಕಲ್ಕಿ 2898 ಎಡಿ’ ಚಿತ್ರಕ್ಕೆ ಹೆಚ್ಚಿನ ಕಾಲ್​ಶೀಟ್ ನೀಡಿದ್ದರಿಂದ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ. ಹೀಗಾಗಿ, ಅವರಿಗೆ ತಿಂಗಳಿಗೆ 60 ಲಕ್ಷ ರೂಪಾಯಿ ದೊಡ್ಡ ಮೊತ್ತವೇ ಅಲ್ಲ ಎನ್ನುತ್ತಿದ್ದಾರೆ ಕೆಲವರು.

ಇದನ್ನೂ ಓದಿ: ನಟ ಪ್ರಭಾಸ್ ಫೇವರಿಟ್ ಹೀರೋಯಿನ್ ಯಾರು? ಈ ವಿಡಿಯೋದಲ್ಲಿದೆ ಉತ್ತರ

ಪ್ರಭಾಸ್ ಅವರು ಬ್ಯಾಕ್ ಟು ಬ್ಯಾಕ್ ಸೋಲು ಕಂಡಿದ್ದರು. ಅವರಿಗೆ ‘ಸಲಾರ್’ ಚಿತ್ರದಿಂದ ಗೆಲುವು ಸಿಕ್ಕಿದೆ. ಈ ಸಿನಿಮಾ 600+ ಕೋಟಿ ರೂಪಾಯಿ ಗಳಿಕೆ ಮಾಡಿದೆ. ಸದ್ಯ ‘ಕಲ್ಕಿ 2898 ಎಡಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಪ್ರಭಾಸ್ ಅವರದ್ದು ಕಲ್ಕಿ ಅವತಾರ ಎನ್ನಲಾಗಿದೆ. ಈ ಮೊದಲು ಅವರು ‘ಆದಿಪುರುಷ್’ ಸಿನಿಮಾದಲ್ಲಿ ರಾಮನ ಅವತಾರ ತಾಳಿ ಟೀಕೆಗೆ ಒಳಗಾಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ