Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಧಾನಸೌಧದಲ್ಲಿ ಕಾಂಗ್ರೆಸ್ ಕಾರ್ಯಕರ್ತನಿಂದ ಪಾಕ್​ ಪರ ಘೋಷಣೆ: ವಿಡಿಯೋ ನೋಡಿ

ವಿಧಾನಸೌಧದಲ್ಲಿ ಕಾಂಗ್ರೆಸ್ ಕಾರ್ಯಕರ್ತನಿಂದ ಪಾಕ್​ ಪರ ಘೋಷಣೆ: ವಿಡಿಯೋ ನೋಡಿ

TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on:Feb 27, 2024 | 8:31 PM

ರಾಜ್ಯಸಭಾ ಚುನಾವಣೆ(Rajyasabha Election) ಫಲಿತಾಂಶ ಹೊರಬಿದ್ದಿದ್ದು, ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಾಸಿರ್ ಹುಸೇನ್, ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದರು. ಈ ವೇಳೆ ನಾಸಿರ್ ಹುಸೇನ್ ಹುಸೇನ್ ಪಕ್ಕದಲ್ಲಿ ಇದ್ದ ಯುವಕ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾನೆ.

ಬೆಂಗಳೂರು, ಫೆ.27: ರಾಜ್ಯಸಭಾ ಚುನಾವಣೆ(Rajyasabha Election) ಗೆಲುವಿನ ಸಂಭ್ರಮದ ವೇಳೆ ವಿಧಾನಸೌಧದ ಲಾಂಜ್​ನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಮೊಳಗಿದೆ. ನಾಸಿರ್ ಹುಸೇನ್ ಹಿಂದೆ ಇದ್ದ ಯುವಕನೊಬ್ಬ 2 ಬಾರಿ ಪಾಕ್​ ಪರ ಘೋಷಣೆ ಕೂಗಿದ್ದಾನೆ. ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಾಸಿರ್ ಹುಸೇನ್, ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದರು. ಈ ವೇಳೆ ನಾಸಿರ್ ಹುಸೇನ್ ಹುಸೇನ್ ಪಕ್ಕದಲ್ಲಿ ಇದ್ದ ಯುವಕ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾನೆ.

ಘೋಷಣೆ ಕೂಗಿದವನ ಬಂಧನಕ್ಕೆ ಆಗ್ರಹಿಸಿದ ಬಿಜೆಪಿ ಸದಸ್ಯ ಎನ್.ರವಿಕುಮಾರ್

ಈ ಕುರಿತು ಮಾತನಾಡಿದ ವಿಧಾನಪರಿಷತ್​ನ ಬಿಜೆಪಿ ಸದಸ್ಯ ಎನ್.ರವಿಕುಮಾರ್ ‘ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದವರನ್ನು ತಕ್ಷಣ ಬಂಧಿಸಬೇಕು. ನಾಳೆ ಸದನದಲ್ಲಿ ಪಾಕಿಸ್ತಾನ ಪರ ಘೋಷಣೆ ವಿಚಾರ ಪ್ರಸ್ತಾಪಿಸುತ್ತೇವೆ. ಘೋಷಣೆ ಕೂಗಿದವನ ಬಂಧನಕ್ಕೆ ಆಗ್ರಹಿಸಿ ದೂರು ನೀಡುತ್ತೇವೆ ಎಂದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published on: Feb 27, 2024 08:28 PM