AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: 12 ಗಂಟೆಗೂ ಅಧಿಕ ಕಾಲ ಮನೆಯಲ್ಲೇ ಶವ ಇಟ್ಟುಕೊಂಡು ವೃದ್ಧೆಯ ದೇಹವನ್ನ ತುಂಡರಿಸಿದ ಹಂತಕ, ಕೊಲೆ ಹಿಂದಿನ ಕಾರಣ ರಿವಿಲ್​

ರವಿವಾರ (ಫೆ.25)ರ ಸಂಜೆ ಕೆಆರ್ ಪುರಂನ ನಿಸರ್ಗ ಬಡವಾಣೆಯ ಪಾಳು ಮನೆಯ ಸಂದಿಯಲ್ಲಿ ಸಿಕ್ಕ ಡ್ರಮ್​ನಲ್ಲಿ ಪತ್ತೆಯಾದ ತುಂಡು ತುಂಡಾದ ವೃದ್ಧೆಯ ಮೃತದೇಹ ಆತಂಕ ಸೃಷ್ಟಿಸಿತ್ತು. ಕೊನೆಗೆ ಆ ತುಂಡಾದ ದೇಹ ಅದೆ ಬಡಾವಣೆಯ ನಿವಾಸಿ ವೃದ್ಧೆ ಸುಶೀಲಮ್ಮ ಎಂಬುದು ತಿಳಿಯಿತು. ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ವೇಳೆ ಕೊಲೆ ಹಿಂದಿನ ಕಾರಣ ತಿಳಿಸಿದ್ದಾನೆ.

ಬೆಂಗಳೂರು: 12 ಗಂಟೆಗೂ ಅಧಿಕ ಕಾಲ ಮನೆಯಲ್ಲೇ ಶವ ಇಟ್ಟುಕೊಂಡು ವೃದ್ಧೆಯ ದೇಹವನ್ನ ತುಂಡರಿಸಿದ ಹಂತಕ, ಕೊಲೆ ಹಿಂದಿನ ಕಾರಣ ರಿವಿಲ್​
ಸಾಂದರ್ಭಿಕ ಚಿತ್ರ
Follow us
Jagadisha B
| Updated By: ವಿವೇಕ ಬಿರಾದಾರ

Updated on: Feb 27, 2024 | 8:47 AM

ಬೆಂಗಳೂರು, ಫೆಬ್ರವರಿ 27: ಕೆಲ ದಿನಗಳ ಹಿಂದೆ ಬೆಂಗಳೂರಿನ (Bengaluru) ಕೆಆರ್​ಪುರಂನಲ್ಲಿ ಪತ್ತೆಯಾದ ವೃದ್ಧೆಯ ಶವ ನಗರವನ್ನೇ ಬೆಚ್ಚಿಬೀಳಿಸಿತ್ತು. ಡ್ರಮ್​ವೊಂದರಲ್ಲಿ ತುಂಡು ತುಂಡಾಗಿದ್ದ ವೃದ್ಧೆಯ ಮೃತದೇಹ ಕಂಡು ಪೊಲೀಸರೇ ದಂಗಾಗಿದ್ದರು. ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರು (Police) ಸ್ಥಳೀಯ ಬಿಜೆಪಿ ಕಾರ್ಯಕರ್ತನ ಮನೆ ಬಾಗಿಲು ತಟ್ಟಿದರು. ವಿಚಾರಣೆಯ ಆರಂಭದಲ್ಲಿ ಸಿನಿಮಾ ಕಥೆ ಹೇಳಿದ್ದ ಹಂತಕ ಕೊನೆಗೂ ಚಿನ್ನದ ಸರಕ್ಕಾಗಿ ಕೊಲೆ ಮಾಡಿದ್ದಾಗಿ ಬಾಯಿ ಬಿಟ್ಟಿದ್ದಾನೆ.

ರವಿವಾರ (ಫೆ.25)ರ ಸಂಜೆ ಕೆಆರ್ ಪುರಂನ ನಿಸರ್ಗ ಬಡವಾಣೆಯ ಪಾಳು ಮನೆಯ ಸಂದಿಯಲ್ಲಿ ಸಿಕ್ಕ ಡ್ರಮ್​ನಲ್ಲಿ ಪತ್ತೆಯಾದ ತುಂಡು ತುಂಡಾದ ವೃದ್ಧೆಯ ಮೃತದೇಹ ಆತಂಕ ಸೃಷ್ಟಿಸಿತ್ತು. ಕೊನೆಗೆ ಆ ತುಂಡಾದ ದೇಹ ಅದೆ ಬಡಾವಣೆಯ ನಿವಾಸಿ ವೃದ್ಧೆ ಸುಶೀಲಮ್ಮ ಎಂಬುದು ತಿಳಿಯಿತು. ಬಳಿಕ ಡಾಗ್ ಸ್ಕ್ವಾಡ್ ನೀಡಿದ ಕ್ಲ್ಯೂ ಮೇರೆಗೆ, ದಿನೇಶ್ ಎಂಬಾತನ ವಿಚಾರಣೆ ನಡೆಸಿದ ಕೆಆರ್​ ಪುರಂ ಪೊಲೀಸರಿಗೆ ಕೊನೆಗೂ ಹಂತಕ ಈತನೇ ಎಂಬುವು ಗೊತ್ತಾಯಿತು. ವಿಚಾರಣೆ ವೇಳೆ ಮೊದಲಿಗೆ ಆತ ಹೇಳಿದ ಕಥೆ ಒಂದು ಕ್ಷಣ ಪೊಲೀಸರನ್ನೇ ಕನ್ಫ್ಯೂಸ್ ಮಾಡಿತ್ತು.

ಬಿಜೆಪಿ ಕಾರ್ಯಕರ್ತೆಯಾಗಿ ಹಾಗೂ ಸ್ಥಳೀಯ ನಿವಾಸಿಗಳ ಉತ್ತಮ ಒಡನಾಟ ಹೊಂದಿದ್ದ ಸುಶೀಲಮ್ಮನ ಹತ್ಯೆಯ ಹಿಂದೆ ಸಾಕಷ್ಟು ಅನುಮಾನ ಮೂಡಿತ್ತು. ಮೇಲ್ನೋಟಕ್ಕೆ ಆಕೆ ಆಸ್ತಿ ಮಾರಾಟದಿಂದ ಬರುತಿದ್ದ ಹಣಕ್ಕಾಗಿ ಕೊಲೆ ನಡೆದಿರೊ ಶಂಕೆ ಮೂಡಿತ್ತು. ಆದರೆ ಬಂಧಿತ ದಿನೇಶ್, ತಾನೇ ದೇಹ ತುಂಡು ತುಂಡಾಗಿ ಕತ್ತರಿಸಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡನು. “ಶನಿವಾರ ಬೆಳಿಗ್ಗೆ 11 ಗಂಟೆಗೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತೇನೆಂದು ದಿನೇಶ್​ ವೃದ್ಧೆ ಸುಶೀಲಮ್ಮ ಅವರಿಗೆ ಹೇಳಿದ್ದೆ. ಅದರಂತೆ ಸುಶೀಲಮ್ಮ, ಶನಿವಾರ ಬೆಳಿಗ್ಗೆ ನನ್ನ ಮನೆಗೆ ಬಂದರು.

ನಾನು ವಾಶ್ ರೂಂಗೆ ಹೊಗಿ ಬರುವಷ್ಟರಲ್ಲಿ ಸುಶೀಲಮ್ಮ ಹೃದಯಾಘಾತದಿಂದ ಮೃತಪಟ್ಟಿದ್ದರು. ನನಗೆ ಏನು ಮಾಡಬೇಕೆಂದು ದಿಕ್ಕು ತೋಚದೆ ಮನೆಯ ಮೇಲಿನ ಸ್ಟಡಿ ರೂಂಗೆ ಮೃತದೇಹ ತೆಗೆದುಕೊಂಡು ಹೊಗಿ ಮಧ್ಯಾಹ್ನ 1 ಗಂಟೆ ಸಂದರ್ಭದಲ್ಲಿ ಚಾಕುವಿನಿಂದ ತುಂಡು ತುಂಡಾಗಿ ಕತ್ತರಿಸಿದೆ. ನಂತರ ಡ್ರಮ್​ನಲ್ಲಿ ದೇಹ ಹಾಗೂ ಕೈಕಾಲುಗಳನ್ನು ರೇಷನ್ ಡಬ್ಬದಲ್ಲಿ ತುಂಬಿದೆ. ಮರುದಿನ ನಸುಕಿನ ಜಾವ 3:30ರ ಸುಮಾರಿಗೆ ಡ್ರಾಮ್​ ಅನ್ನು ಪಾಳು ಮನೆಯ ಬಳಿ ಇಟ್ಟೆ, ಡಬ್ಬವನ್ನು ಆವಲಹಳ್ಳಿ ಕರೆಗೆ ಎಸೆದೆ ಎಂದು ಪೊಲೀಸರ ಮುಂದೆ ಹೇಳಿದ್ದಾನೆ.

ಇದನ್ನೂ ಓದಿ: ಹುಣಶೆಟ್ಟಿಕೊಪ್ಪ ಜಾತ್ರೆಯಲ್ಲಿ ಯುವಕನ ಕೊಲೆ; ಠಾಣೆ ಮುಂದೆ ಶವ ಇಟ್ಟು ಸಿದ್ಧಿ ಸಮುದಾಯದಿಂದ ಪ್ರತಿಭಟನೆ

ಚಿನ್ನಕ್ಕಾಗಿ ವೃದ್ಧೆಯ ಹತ್ಯೆ..!

ಈತನ ಹೇಳಿಕೆ ಬಗ್ಗೆ ಅನುಮಾನಗೊಂಡು ಮರು ವಿಚಾರಣೆ ನಡೆಸಿದ ಪೊಲೀಸರ ಎದರು ಹಂತಕ ಕೊನೆಗೂ ಸತ್ಯ ಬಾಯಿಬಿಟ್ಟಿದ್ದಾನೆ. ವೃದ್ಧೆ ಸುಶೀಲಮ್ಮ ಕೊರಳಿನಲ್ಲಿದ್ದ ಚಿನ್ನದ ಸರಕ್ಕಾಗಿ ಹತ್ಯೆ ಮಾಡಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾನೆ. ಅಸಲಿಗೆ ಬಂಧಿತ ದಿನೇಶ್ ಚೆನ್ನೈನಲ್ಲಿ ನೇವಿ ಮರ್ಚೆಂಟ್ ಆಗಿದ್ದನು. ನಾಲ್ಕು ವರ್ಷದ ಹಿಂದೆ ಕೆಲಸ ಬಿಟ್ಟು ಬಂದಿದ್ದನು. ಆ ಬಳಿಕ ಮನೆ ಕಟ್ಟಿಸಿದ್ದ ದಿನೇಶ್​ ಕೊರೊನಾ ಹೊಡೆತಕ್ಕೆ 30 ಲಕ್ಷ ರೂ. ಸಾಲ ಮಾಡಿಕೊಂಡಿದ್ದನು. ಸಾಲ ಕೊಟ್ಟವರು ಮನೆ ಬಾಗಿಲಿಗೆ ಬಂದಾಗ ದಿಕ್ಕು ತೋಚದೆ ಇದ್ದ ಈತನಿಗೆ ಚುನಾವಣೆ ಸಂದರ್ಭದಲ್ಲಿ ಪರಿಚಯವಾಗಿದ್ದ ವೃದ್ಧೆ ಸುಶೀಲಮ್ಮನ ನೆನಪಾಗಿತ್ತು. ಸುಶೀಲಮ್ಮ ಬಳಿ ಹಣ ಕೇಳಿದಾಗ ಕೊಡಲು ನಿರಾಕರಿಸಿದ್ದರು. ಬಳಿಕ ಸುಶೀಲಮ್ಮ ಅವರ ಕೊರಳಲ್ಲಿದ್ದ ಚಿನ್ನದ ಸರಗಳನ್ನು ಮಾರಿದರೆ ಸಾಲದ ಹೊರೆ ಕಡಿಮೆ ಆಗುತ್ತೆ ಎಂದು ಕೃತ್ಯ ಎಸಗಿದ್ದಾಗಿ ವಿಚಾರಣೆ ವೇಳೆ ದಿನೇಶ್​ ಹೇಳಿದ್ದಾನೆಂದು ಪೊಲೀಸ್ ಮೂಲಗಳು ತಿಳಿಸಿವೆ.

ಇನ್ನು ವೃದ್ಧೆ ಸುಶೀಲಮ್ಮ ಹತ್ಯೆ ಬಳಿಕ ಆಕೆಯ ಕೊರಳಲಿದ್ದ ಚಿನ್ನವನ್ನು ಮಾರಲು ಹೋದಾಗ ನಕಲಿ ಎಂದು ತಿಳಿದಿದೆ. ಕೊನೆಗೆ ಕಿವಿಯೋಲೆ ಮಾರಲು ಹೋದಾಗ ಅದು ಅಸಲಿ ಚಿನ್ನವಾಗಿತ್ತು. ಬಳಿಕ ದಿನೇಶ್​ ಅಸಲಿ ಚಿನ್ನವನ್ನು ಮಾರಿ, ಬಂದ ಹಣದಲ್ಲಿ 380 ರೂ. ಚಾಪರ್ ನೈಫ್​ ಖರೀದಿ ಮಾಡಿದ್ದನು. ಜೊತೆಗೆ ಗಾರ್ಬೇಜ್ ಕವರ್ ಸಹ ಖರೀದಿ ಮಾಡಿದ್ದನು.

ಈ ಚಾಪರ್ ನೈಫ್​ನಿಂದ ಆಕೆ ತುಂಡು ತುಂಡಾಗಿ ಕತ್ತರಿಸಿ, ಗಾರ್ಬೇಜ್ ಕವರ್​​ನಲ್ಲಿ ದೇಹವನ್ನು ಹಾಕಿ ಡ್ರಮ್​ಗೆ ತುಂಬಿದ್ದ ಎನ್ನಲಾಗಿದೆ. ಹತ್ತಾರು ಅನುಮಾನಗಳಿಂದ ಕೂಡಿದ್ದ ವೃದ್ಧೆ ಹತ್ಯೆಯ ಕಾರಣ, ಸದ್ಯ ಚಿನ್ನದ ಸರಕ್ಕಾಗಿ ಎಂಬ ಸಂಗತಿ ಹೊರಬಿದ್ದಿದೆ. ಆದರೇ ಇದೇ ಕಾರಣ ಸತ್ಯವಾ ಅಥವಾ ಬೇರೇನಾದರೂ ಕಾರಣ ಇದೆಯಾ ಎಂಬ ಬಗ್ಗೆ ಕೆಆರ್ ಪುರಂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ