AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಲಕನ ನಿರ್ಲಕ್ಷ್ಯ: ನಿಂತಿದ್ದ ಎತ್ತಿನ ಬಂಡಿಗೆ ಬೈಕ್ ಡಿಕ್ಕಿ: ಮೂವರು ಸಾವು, ಇಬ್ಬರಿಗೆ ಗಂಭೀರ ಗಾಯ

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಹೊಸ ದರೋಜಿ ಗ್ರಾಮದ ಬಳಿ ಬೈಕ್ ಚಾಲಕನ ಅಜಾಗರೂಕತೆಯಿಂದ ನಿಂತಿದ್ದ ಎತ್ತಿನ ಬಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿರುವಂತಹ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಕುಡುತಿನಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಚಾಲಕನ ನಿರ್ಲಕ್ಷ್ಯ: ನಿಂತಿದ್ದ ಎತ್ತಿನ ಬಂಡಿಗೆ ಬೈಕ್ ಡಿಕ್ಕಿ: ಮೂವರು ಸಾವು, ಇಬ್ಬರಿಗೆ ಗಂಭೀರ ಗಾಯ
ಪ್ರಾತಿನಿಧಿಕ ಚಿತ್ರ
ವಿನಾಯಕ ಬಡಿಗೇರ್​
| Edited By: |

Updated on:Feb 26, 2024 | 8:50 PM

Share

ಬಳ್ಳಾರಿ, ಫೆಬ್ರವರಿ 26: ನಿಂತಿದ್ದ ಎತ್ತಿನ ಬಂಡಿಗೆ ಬೈಕ್ ಡಿಕ್ಕಿ (collides) ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿರುವಂತಹ ಘಟನೆ ಜಿಲ್ಲೆಯ ಸಂಡೂರು ತಾಲೂಕಿನ ಹೊಸ ದರೋಜಿ ಗ್ರಾಮದ ಬಳಿ ನಡೆದಿದೆ. ಒಂದೇ ಬೈಕ್‌ನಲ್ಲಿ ಐದು ಜನರು ಪ್ರಯಾಣ ಮಾಡುತ್ತಿದ್ದು, ಚಾಲಕನ ನಿರ್ಲಕ್ಷ್ಯದಿಂದಾಗಿ ಅಪಘಾತ ಸಂಭವಿಸಿದೆ. ಹೊಸಪೇಟೆ ಮೂಲದ‌ ಜಂಬುನಾಥ್‌‌ಹಳ್ಳಿಯ ವೆಂಕಟೇಶ(46), ಹೊಸಪೇಟೆಯ ಅಖಿಲಾ(06), ಆಶಾ (08) ಮೃತರು. ನಾಲ್ಕು ವರ್ಷದ ಸರಸ್ವತಿ ಹಾಗೂ ಜಂಬಕ್ಕ ಎಂಬುವರಿಗೆ ಗಂಭೀರ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಕುಡುತಿನಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಕುಡುತಿನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಜೋಕಾಲಿ ಆಡುವಾಗ ಆಕಸ್ಮಿಕವಾಗಿ ಉರುಳು ಬಾಲಕ ಸಾವು

ದಾವಣಗೆರೆ: ಜೋಕಾಲಿ ಆಡುವಾಗ ಆಕಸ್ಮಿಕವಾಗಿ ಉರುಳು ಬಾಲಕ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗದಲ್ಲಿ ನಡೆದಿದೆ. ಪಿ.ಜೆ.ಕೊಟ್ರೇಶಿ (13) ಮೃತಪಟ್ಟ ದುರ್ದೈವಿ ಬಾಲಕ. ಕೊಟ್ರೇಶಿ ಸವಳಂಗದ ಎನ್ ಜಿ ಪ್ರವೀಣ್ ಅವರ ಮಗ.

ಇದನ್ನೂ ಓದಿ: ನೆಲಮಂಗಲ: ಅತ್ತೆ, ಸೊಸೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ: ಅತ್ತೆ ಸಾವು

ಶಿವಮೊಗ್ಗ ಖಾಸಗಿ ಶಾಲೆಯಲ್ಲಿ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಕೊಟ್ರೇಶಿ. ಶಾಲೆಯಿಂದ ಮನೆಗೆ ಬಂದು ನಡುಮನೆಯಲ್ಲಿ ಹಾಕಿದ್ದ ಜೋಕಾಲಿ ಆಡುವಾಗ ಘಟನೆ ಸಂಭವಿಸಿದೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈಜಲು ತೆರಳಿದ್ದ ಬಾಲಕ ನೀರು ಪಾಲು

ಕೊಡಗು: ಈಜಲು ತೆರಳಿದ್ದ ಬಾಲಕ ನೀರು ಪಾಲಾಗಿರುವಂತಹ ಘಟನೆ ಕುಶಾಲನಗರ ತಾಲ್ಲೂಕಿನ ಕಣಿವೆ ಗ್ರಾಮದಲ್ಲಿ ನಡೆದಿದೆ. ಹೃತ್ವಿಕ್ (16) ಮೃತ ಬಾಲಕ. ಮೈಸೂರಿನಿಂದ‌ ಸಂಬಂಧಿಕರ ಮನೆಗೆ ಬಂದಿದ್ದರು. ಕಾವೇರಿ ನದಿಗೆ ಈಜಲು ತೆರಳಿದ್ದರು. ಆಳದ ಅರಿವಿಲ್ಲದೆ ನೀರಲಿ ಮುಳುಗಿ ದುರ್ಘಟನೆ ಸಂಭವಿಸಿದೆ. ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡು ಮಕ್ಕಳನ್ನು ಕೊಂದು: ತಾಯಿಯೂ ನೇಣಿಗೆ ಶರಣು

ಧಾರವಾಡ: ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ನಿನ್ನೆ ನಡೆದಿದ್ದ ಮೂರು ಜನರ ಸಾವಿಗೆ ಸಂಬಂಧಿಸಿದಂತೆ ಎಲ್ಲರಿಗೂ ಅಚ್ಚರಿಯಾಗಿತ್ತು. ಗ್ರಾಮದ ಸಾವಿತ್ರಿ ಅನ್ನೋ 32 ವರ್ಷದ ಮಹಿಳೆ ತನ್ನ ಎರಡು ಮಕ್ಕಳ ಕತ್ತು ಹಿಸುಕಿ ಕೊಲೆ ಮಾಡಿ, ಬಳಿಕ ತಾನು ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಳು. ಈ ಘಟನೆಯ ಹಿಂದೆ ಸಾಕಷ್ಟು ಅನುಮಾನಗಳು ಎದ್ದಿದ್ದರೂ ಅದರಲ್ಲಿ ಯಾವುದು ಸರಿಯಾಗಿದ್ದು ಅನ್ನೋದು ಮಾತ್ರ ಗೊತ್ತಾಗಿರಲಿಲ್ಲ.

ಇದನ್ನೂ ಓದಿ: ಅಕ್ರಮವಾಗಿ ಸಾಗಿಸ್ತಿದ್ದ 63.5 ಲಕ್ಷ ರೂ. ಮೌಲ್ಯದ ಡೈಮಂಡ್​, ವಿದೇಶಿ ಕರೆನ್ಸಿ ಜಪ್ತಿ, ಓರ್ವನ ಬಂಧನ

ಸುತ್ತಮುತ್ತಲಿನ ಜನರು ಹೇಳೋದನ್ನು ನೋಡಿದರೆ ಪತಿ-ಪತ್ನಿ ಚೆನ್ನಾಗಿಯೇ ಇದ್ದರಂತೆ. ಹಾಗಿದ್ದರೂ ಏಕೆ ಸಾವಿತ್ರಿ ಇಂಥದ್ದೊಂದು ಕೃತ್ಯಕ್ಕೆ ಕೈಹಾಕಿದಳು ಅನ್ನೋ ಪ್ರಶ್ನೆ ಹುಟ್ಟುಕೊಳ್ಳುತ್ತದೆ. ಇದೇ ಕಾರಣಕ್ಕೆ ಪ್ರಕರಣದ ತನಿಖೆ ಮುಂದುವರೆಸಿದ ನವಲಗುಂದ ಠಾಣೆ ಪೊಲೀಸರು ಇದೀಗ ಆಕೆಯ ಪತಿ ಮಂಜುನಾಥ್ ಸರಕಾರ್ ಮತ್ತು ಮಾವ ಕಲ್ಲಪ್ಪನನ್ನು ಬಂಧಿಸಿದ್ದಾರೆ. ನಿನಗೆ ಯಾವುದೇ ಕೆಲಸ ಮಾಡಲು ಬರೋದೇ ಇಲ್ಲ ಅಂತಾ ಮನೆಯಲ್ಲಿ ಆಗಾಗ ಟೀಕಿಸುತ್ತಿದ್ದರಂತೆ. ಇದರಿಂದಾಗಿ ಆಕೆ ಇಂಥ ಕೃತ್ಯಕ್ಕೆ ಮುಂದಾಗಿದ್ದಾಳು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:38 pm, Mon, 26 February 24