ಅಕ್ರಮವಾಗಿ ಸಾಗಿಸ್ತಿದ್ದ 63.5 ಲಕ್ಷ ರೂ. ಮೌಲ್ಯದ ಡೈಮಂಡ್, ವಿದೇಶಿ ಕರೆನ್ಸಿ ಜಪ್ತಿ, ಓರ್ವನ ಬಂಧನ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 63.5 ಲಕ್ಷ ಮೌಲ್ಯದ ಡೈಮಂಡ್ ಮತ್ತು 9.2 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇಂಡಿಗೋ ಫ್ಲೈಟ್ನಲ್ಲಿ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಪ್ರಯಾಣಿಕ ಬಂದಿದ್ದ ಪ್ರಯಾಣಿಕನ ಬ್ಯಾಗ್ ಪರಿಶೀಲನೆ ವೇಳೆ 2348 ಕ್ಯಾರೆಟ್ನ ವಿವಿಧ ವೆರೈಟಿಗಳ ರೂಬಿ ಮತ್ತು ಡೈಮಂಡ್ಸ್ಗಳು ಪತ್ತೆ ಆಗಿದೆ.
ಬೆಂಗಳೂರು, ಫೆಬ್ರವರಿ 26: ಅಕ್ರಮವಾಗಿ ಸಾಗಿಸುತ್ತಿದ್ದ 63.5 ಲಕ್ಷ ಮೌಲ್ಯದ ಡೈಮಂಡ್ (diamond) ಮತ್ತು 9.2 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಘಟನೆ ನಡೆದಿದೆ. ಅಧಿಕಾರಿಗಳು ದಾಳಿ ಮಾಡಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಇಂಡಿಗೋ ಫ್ಲೈಟ್ನಲ್ಲಿ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಪ್ರಯಾಣಿಕ ಬಂದಿದ್ದ. ಅನುಮಾನಗೊಂಡು ಪ್ರಯಾಣಿಕನ ಬ್ಯಾಗ್ ಪರಿಶೀಲನೆ ವೇಳೆ ಅಕ್ರಮವಾಗಿ 2348 ಕ್ಯಾರೆಟ್ನ ವಿವಿಧ ವೆರೈಟಿಗಳ ರೂಬಿ ಮತ್ತು ಡೈಮಂಡ್ಸ್ಗಳು ಪತ್ತೆ ಆಗಿದ್ದು ವಶಕ್ಕೆ ಪಡೆಯಲಾಗಿದೆ. ಸದ್ಯ ಪ್ರಯಾಣಿಕನ ಬಂಧನ ಮಾಡಿದ್ದು ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಏರ್ಪೋರ್ಟ್ನಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ ಮಾಡಿ 3 ಪ್ರತ್ಯೇಕ ಪ್ರಕರಣಗಳಲ್ಲಿ 1 ಕೆಜಿ 166 ಗ್ರಾಂ ಚಿನ್ನ ವಶಕ್ಕೆ ಪಡೆದುಕೊಂಡಿದ್ದಾರೆ. 72.67 ಲಕ್ಷ ರೂ. ಮೌಲ್ಯದ 1.66 ಕೆಜಿ ಚಿನ್ನ ಜಪ್ತಿ ಮಾಡಿದ್ದಾರೆ. ಐವರು ಆರೋಪಿಗಳಿಂದ ಲಗೇಜ್ ಬ್ಯಾಗ್, ಪೇಸ್ಟ್ ರೂಪದಲ್ಲಿ ಸಾಗಿಸುತ್ತಿದ್ದಾಗ ಜಪ್ತಿ ಮಾಡಲಾಗಿದೆ. ಕೊಲಂಬೋದಿಂದ ಅಕ್ರಮವಾಗಿ ಸಾಗಿಸುತ್ತಿದ್ದರು. ಓರ್ವ ಶ್ರೀಲಂಕಾ ಪ್ರಜೆ, ನಾಲ್ವರು ವಿದೇಶಿಗರಿಂದ ಸಾಗಾಟ ಮಾಡಲಾಗಿದ್ದು, ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ಲಾಸ್ಕ್ನಲ್ಲಿ ಮರೆ ಮಾಚಿ ಸಾಗಿಸುತ್ತಿದ್ದ ಅಕ್ರಮ ಚಿನ್ನ ವಶಕ್ಕೆ
ಸೌದಿ ಅರೇಬಿಯಾದ ಜೀದಾ ಏರ್ಪೋಟ್ನಿಂದ ಅಕ್ರಮವಾಗಿ ಪ್ಲಾಸ್ಕ್ನಲ್ಲಿ ಚಿನ್ನ ಮರೆಮಾಚಿ ಸ್ಮಗ್ಲಿಂಗ್ ಮಾಡಲು ಯತ್ನಿಸಿದ ವ್ಯಕ್ತಿಯನ್ನ ಕೆಂಪೇಗೌಡ ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೌದಿ ಅರೇಬಿಯಾದಿಂದ ಆಗಮಿಸಿದ ಪ್ರಯಾಣಿಕ ಪ್ಲಾಸ್ಕ್ ನ ಒಳ ಭಾಗದಲ್ಲಿ ಪೇಸ್ಟ್ ಮಾದರಿಯಲ್ಲಿ ಚಿನ್ನವನ್ನ ಹಾಕಿ ಲಗೇಜ್ನಲ್ಲಿ ಮರೆ ಮಾಚಿದ್ದ. ಹೀಗಾಗಿ ಏರ್ಪೋಟ್ ನಲ್ಲಿ ಲಗೇಜ್ ಚೆಕ್ ಮಾಡುವ ವೇಳೆ ಪ್ಲಾಸ್ಕ್ ನ ಮೇಲೆ ಅನುಮಾನ ಬಂದಿದ್ದು ಪ್ಲಾಸ್ಕ್ ಅನ್ನ ಹೊಡೆದು ನೋಡಿದಾಗ ಒಳಗಡೆ ಚಿನ್ನ ಮರೆ ಮಚಿರುವುದು ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: ವಶಪಡಿಸಿಕೊಂಡ ಡ್ರಗ್ಸ್, ಗಾಂಜಾವನ್ನ ಪೋಲೀಸರು ಏನ್ಮಾಡ್ತಾರೆ! ಇಲ್ಲಿದೆ ವಿವರ
ಪೇಸ್ಟ್ ಮಾಡಿದ್ದ ಚಿನ್ನವನ್ನ ತೆಗೆದು ನೋಡಿದಾಗ 7 ಲಕ್ಷ 52 ಸಾವಿರ ರೂ. ಮೌಲ್ಯದ 122 ಗ್ರಾಂ ಚಿನ್ನ ಸಿಕ್ಕಿದ್ದು ಚಿನ್ನ ಸಮೇತ ಪ್ರಯಾಣಿಕನನ್ನ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಮತ್ತೊಂದೆಡೆ ಬ್ಯಾಂಕಾಕ್ ನಿಂದ ಇಂದು ಬೆಳಗ್ಗೆ ಕೆಂಪೇಗೌಡ ಏರ್ಪೋಟ್ ಗೆ ಬಂದ ಪ್ರಯಾಣಿಕ ಬ್ಯಾಗ್ನಲ್ಲಿ ಕೋಬ್ರಾ ಸಾಗಿಸುತ್ತಿರುವುದು ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: ಬೆಂಗಳೂರು, ಹೈದರಾಬಾದ್ ಏರ್ಪೋರ್ಟ್ಗಳಲ್ಲಿ 13 ಕೋಟಿ ರೂ. ಮೌಲ್ಯದ ವಜ್ರ, ವಿದೇಶಿ ಕರೆನ್ಸಿ ಜಪ್ತಿ: ನಾಲ್ವರು ವಶಕ್ಕೆ
ಬ್ಯಾಗ್ ನಲ್ಲಿದ್ದ ಬಾಟಲ್ ಹೊರಗಡೆ ತೆಗೆದಾಗ ಬಾಟಲ್ ನಲ್ಲಿ ಹಾವು ಇರುವುದು ಪತ್ತೆಯಾಗಿದ್ದು ವಾಸ್ತುಗಾಗಿ ಹಾವನ್ನ ತೆಗೆದುಕೊಂಡು ಬಂದಿದ್ದಾಗಿ ಪ್ರಯಾಣಿಕ ಹೇಳಿದ್ದಾನೆ. ಆದರೆ ದೆಶದಲ್ಲಿ ಪ್ರಾಣಿಗಳ ಸಾಗಾಟ ನಿಷೇದವಾಗಿರುವ ಕಾರಣ ಹಾವಿನ ಬಾಟಲ್ ಸಮೇತ ಪ್ರಯಾಣಿಕನನ್ನ ಅಧಿಕಾರಿಗಳು ಅರಣ್ಯ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಿದ್ದರು.
ಮತ್ತಷ್ಟು ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:03 pm, Mon, 26 February 24