Mandya News: ಸಚಿವ ನಾರಾಯಣಗೌಡ ಕಾರು ಅಡ್ಡಗಟ್ಟಿ ನಿಂದನೆ, ಕೈಕೈ ಮಿಲಾಯಿಸಿದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು

ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ರಾಜಘಟ್ಟ ಗೇಟ್ ಬಳಿ ಸಚಿವ ಕೆಸಿ ನಾರಾಯಣಗೌಡ ಕಾರು ಅಡ್ಡಗಟ್ಟಿ ನಿಂದನೆ ಮಾಡಿದ ಘಟನೆ ಬುಧವಾರ ಸಂಜೆ ನಡೆದಿದೆ.

Mandya News: ಸಚಿವ ನಾರಾಯಣಗೌಡ ಕಾರು ಅಡ್ಡಗಟ್ಟಿ ನಿಂದನೆ, ಕೈಕೈ ಮಿಲಾಯಿಸಿದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು
ಕೆಸಿ ನಾರಾಯಣಗೌಡ (ಸಂಗ್ರಹ ಚಿತ್ರ)

Updated on: May 03, 2023 | 10:43 PM

ಮಂಡ್ಯ: ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ರಾಜಘಟ್ಟ ಗೇಟ್ ಬಳಿ ಸಚಿವ ಕೆಸಿ ನಾರಾಯಣಗೌಡ (KC Narayana Gowda) ಕಾರು ಅಡ್ಡಗಟ್ಟಿ ನಿಂದನೆ ಮಾಡಿದ ಘಟನೆ ಬುಧವಾರ ಸಂಜೆ ನಡೆದಿದೆ. ಸಚಿವರು ಕೆಆರ್ ಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ನಾರಾಯಣಗೌಡ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದಾಗ 70ಕ್ಕೂ ಹೆಚ್ಚು ಜೆಡಿಎಸ್​ ಕಾರ್ಯಕರ್ತ ಏಕಾಏಕಿ ಕಾರು ತಡೆದಿದ್ದು, ಸಚಿವರನ್ನು ನಿಂದಿಸಿದ್ದಾರೆ. ಈ ವೇಳೆ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಈ ವೇಳೆ ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಕಾರು ಅಡ್ಡಗಟ್ಟಿದ ಜೆಡಿಎಸ್ ಕಾರ್ಯಕರ್ತರು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ. ಮನಬಂದಂತೆ ನಿಂದಿಸಿ ತಳ್ಳಾಟ ನೂಕಾಟ ಮಾಡಿದ್ದಾರೆ. ತಕ್ಷಣ ಅಂಗರಕ್ಷಕರು ಸಚಿವ ಡಾ. ನಾರಾಯಣಗೌಡ ಅವರನ್ನು ರಕ್ಷಿಸಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆ ಇದೇ 10ರಂದು ನಡೆಯಲಿದ್ದು, 13ರಂದು ಫಲಿತಾಂಶ ಪ್ರಕಟವಾಗಲಿದೆ. ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ಕೈಗೊಂಡಿದ್ದು, ನಾರಾಯಣಗೌಡ ಕೂಡ ತಾವು ಕಣಕ್ಕಿಳಿದಿರುವ ಕೆಆರ್ ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ: ಹೆಲಿಕಾಪ್ಟರ್ ಅವಘಡದಿಂದ ಪಾರಾದ ಬೆನ್ನಲ್ಲೇ ಅಜ್ಜಯ್ಯನ ಮೊರೆ ಹೋದ ಡಿಕೆ ಶಿವಕುಮಾರ್, ​ಜ್ಯೋತಿಷಿ ಹೇಳಿದ್ದೇನು?

ಇದಕ್ಕೂ ಮುನ್ನ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಾರಾಯಣಗೌಡ, ರಾಜ್ಯ ವಿಧಾನಸಭೆಗೆ ಇದು ನನ್ನ ಕೊನೆಯ ಚುನಾವಣೆ. ಕ್ಷೇತ್ರದಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಿರುವ ಯುವಕರನ್ನು ಗುರುತಿಸಿ ಅವರಿಗೆ ಅಧಿಕಾರವನ್ನು ಇಟ್ಟುಕೊಡುತ್ತೇನೆ ಎಂದು ಹೇಳಿದರು.

ನಾನು ಬಿಜೆಪಿ ಪಕ್ಷವನ್ನು ನಂಬಿ ಬಂದಿದ್ದೇನೆ. ಎಂದಿಗೂ ಪಕ್ಷಕ್ಕೆ ಹಾಗೂ ಕಾರ್ಯಕರ್ತರಿಗೆ ವಂಚನೆ ಮಾಡಲಾರೆ. ಕಾರ್ಯಕರ್ತರಿಗೆ ನನ್ನಿಂದ ಏನಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ. ಕೆಆರ್ ಪೇಟೆಯಲ್ಲಿ ಕಮಲ ಅರಳಿಸಿ ಆಶೀರ್ವದಿಸಿ ಎಂದು ಮನವಿ ಮಾಡಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ಗೆ ಹದ್ದು ಡಿಕ್ಕಿ ಹೊಡೆದ ಘಟನೆ ಮಂಗಳವಾರ ಸಂಭವಿಸಿತ್ತು. ಅದೃಷ್ಟವಶಾತ್ ಅವರು ಅಪಾಯದಿಂದ ಪಾರಾಗಿದ್ದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:32 pm, Wed, 3 May 23