ರೆಬೆಲ್ ಸ್ಟಾರ್ ಅಂಬರೀಶ್ ಕನಸನ್ನು ಸೂಪರ್ ಸ್ಟಾರ್ ಸೋಮಣ್ಣ ನೆರೆವೇರಿಸಿದ್ದಾರೆ ಎಂದು ಹಾಡಿಹೊಗಳಿದ ಸುಮಲತಾ

| Updated By: ವಿವೇಕ ಬಿರಾದಾರ

Updated on: Jul 02, 2022 | 8:37 PM

ಇಂದು (ಜುಲೈ 2) ಸ್ಲಂ ನಿವಾಸಿಗಳಿಗೆ ವಸತಿ ಸಿಕ್ಕಿದ್ದು ಐತಿಹಾಸಿಕ ದಿನವಾಗಿದ್ದು, ದಿವಂಗತ ಅಂಬರೀಶ್ ಕನಸನ್ನು ಸಚಿವ ಸೋಮಣ್ಣ ನೆರೆವೇರಿಸಿದ್ದು, ರೆಬೆಲ್ ಸ್ಟಾರ್ ಕನಸನ್ನು ಸೂಪರ್ ಸ್ಟಾರ್ ನೆರೆವೇರಿಸಿದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಶ ಸಚಿವ ಸೋಮಣ್ಣ ಅವರನ್ನು ಹಾಡಿ ಹೊಗಳಿದ್ದಾರೆ.

ರೆಬೆಲ್ ಸ್ಟಾರ್ ಅಂಬರೀಶ್ ಕನಸನ್ನು ಸೂಪರ್ ಸ್ಟಾರ್ ಸೋಮಣ್ಣ ನೆರೆವೇರಿಸಿದ್ದಾರೆ ಎಂದು ಹಾಡಿಹೊಗಳಿದ ಸುಮಲತಾ
ಸಂಸದೆ ಸುಮಲತಾ ಅಂಬರೀಶ
Follow us on

ಮಂಡ್ಯ: ಇಂದು (ಜುಲೈ 2) ಸ್ಲಂ ನಿವಾಸಿಗಳಿಗೆ ವಸತಿ ಸಿಕ್ಕಿದ್ದು ಐತಿಹಾಸಿಕ ದಿನವಾಗಿದ್ದು, ದಿವಂಗತ ಅಂಬರೀಶ್ (Ambareesh) ಕನಸನ್ನು ಸಚಿವ ವಿ. ಸೋಮಣ್ಣ (V Somanna) ನೆರೆವೇರಿಸಿದ್ದು, ರೆಬೆಲ್ ಸ್ಟಾರ್ (Rebel Star) ಕನಸನ್ನು ಸೂಪರ್ ಸ್ಟಾರ್ ನೆರೆವೇರಿಸಿದ್ದಾರೆ ಎಂದು ಸಂಸದೆ (MP) ಸುಮಲತಾ ಅಂಬರೀಶ (Sumalatha Ambareesh) ಸಚಿವ ಸೋಮಣ್ಣ ಅವರನ್ನು ಹಾಡಿ ಹೊಗಳಿದ್ದಾರೆ. 2015 ರಲ್ಲಿ ಅಂಬರೀಶ್ ವಸತಿ ಸಚಿವರಾಗಿದ್ದರು ಅಂಬರೀಶ್ ಕನಸಿನ ಯೋಜನೆಯಾಗಿತ್ತು.ಮಂಡ್ಯ ಜನರ ಸಮಸ್ಯೆ ಬಗ್ಗೆ ಸಚಿವ ಸೋಮಣ್ಣ ಜೊತೆ ಚರ್ಚಿಸಿದ್ದೆ.  ಇದನ್ನು 7 ವರ್ಷದ ಮೇಲೆ ನೆರವೇರಿಸಿದ್ದು, ಸೂಪರ್ ಸ್ಟಾರ್ ರೀತಿ ಕ್ಷೇತ್ರದಲ್ಲಿ ಸೋಮಣ್ಣ ಕೆಲಸ ಮಾಡಿದ್ದಾರೆ ಎಂದರು

ಇದನ್ನು ಓದಿ: ಡಾಕ್ಟರಿಕೆ ಪದವಿಯೂ ಇಲ್ಲದೆ, ಅಂಕೋಲಾದಲ್ಲಿ ಆಯುರ್ವೇದ ಆಸ್ಪತ್ರೆ ನಡೆಸುತ್ತಿದ್ದ ನಕಲಿ ವೈದ್ಯನ ವಿರುದ್ಧ ಪ್ರಕರಣ ದಾಖಲು

ಅಂಬರೀಶ್ ಹೃದಯದಿಂದ ಏನು ಹೇಳುತ್ತಿದ್ದರು ಅದನ್ನೆ ಮಾಡುತ್ತಿದ್ದರು. 7 ವರ್ಷವಾದ ಮೇಲೆ ಅಂಬರೀಶ್ ಅವರ ಕನಸು ನನಸಾಗಿದೆ. ಅವರ ಕೆಲಸ ಇವತ್ತು ಮಾತನಾಡುತ್ತಿದೆ. ಹಿರಿಯ ಅಣ್ಣನ ಸ್ಥಾನದಲ್ಲಿ ವಿ ಸೋಮಣ್ಣ ಇದ್ದಾರೆ. ಸದ್ಯ ನಿಮ್ಮ ಸಮಸ್ಯೆ ಈಡೇರಿಕೆಯಾಗಿದೆ.

ಇದನ್ನು ಓದಿ: ದಂಬಾಲು ಬಿದ್ದು 61 ವರ್ಷದ ಮುದುಕನ ಮದುವೆಯಾದ 18ರ ಯುವತಿ

ಇದರಲ್ಲಿ ಅಧಿಕಾರಿಗಳ ಶ್ರಮ ಕೂಡ ಇದೆ. ಅವರಿಗೆಲ್ಲ ನನ್ನ ಧನ್ಯವಾದಗಳು. ಸಚಿವ ಸೋಮಣ್ಣ ಅವರಿಗೆ ತುಂಬು ಹೃದಯದ ಅಭಿನಂದನೆ. ಸ್ವಾಭಿಮಾನಿ ಮಂಡ್ಯ ಜನತೆಗೆ ಧನ್ಯವಾದಗಳು ಎಂದು ಹೇಳಿದರು.