ಮಂಡ್ಯ: 3 ವರ್ಷದ ಹಿಂದಿನ ಹರಕೆ ತೀರಿಸಲು ನಿಮಿಷಾಂಬ ದೇವಿ ಸನ್ನಿಧಿಗೆ ಆಗಮಿಸಿದ ಶಶಿಕಲಾ ನಟರಾಜನ್

| Updated By: preethi shettigar

Updated on: Mar 11, 2022 | 8:11 PM

3 ವರ್ಷಗಳ ಹಿಂದೆ ದೇಗುಲಕ್ಕೆ ಬಂದಿದ್ದಾಗ ಹರಕೆ ಹೊತ್ತಿದ್ದರು. ಅದನ್ನು ತೀರಿಸುವ ಸಲುವಾಗಿ ಇಂದು ಕುಟುಂಬ ಸಮೇತರಾಗಿ ಶಶಿಕಲಾ ಆಗಮಿಸಿದ್ದಾರೆ. ದೇಗುಲಕ್ಕೆ ಬಂದ ಶಶಿಕಲಾಗೆ ದೇವಾಲಯದ ಅರ್ಚಕರು ವಿಶೇಷ ರೀತಿಯಲ್ಲಿ ಸ್ವಾಗತಿಸಿದ್ದಾರೆ.

ಮಂಡ್ಯ: 3 ವರ್ಷದ ಹಿಂದಿನ ಹರಕೆ ತೀರಿಸಲು ನಿಮಿಷಾಂಬ ದೇವಿ ಸನ್ನಿಧಿಗೆ ಆಗಮಿಸಿದ ಶಶಿಕಲಾ ನಟರಾಜನ್
ಶಶಿಕಲಾ ನಟರಾಜನ್
Follow us on

ಮಂಡ್ಯ: ಜಿಲ್ಲೆಯ ನಿಮಿಷಾಂಬ ದೇಗುಲಕ್ಕೆ(nimishamba temple) ತಮಿಳುನಾಡಿನ ಮಾಜಿ ಸಿಎಂ ದಿ.ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್​(Sasikala Natarajan) ಭೇಟಿ ನೀಡಿದ್ದಾರೆ. ಇಂದು (ಮಾರ್ಚ್​ 11) ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಗಂಜಾಂ ನಿಮಿಷಾಂಬ ದೇಗುಲಕ್ಕೆ ಶಶಿಕಲಾ ಆಗಮಿಸಿದ್ದು, ಹರಕೆ ತೀರಿಸಿದ್ದಾರೆ. 3 ವರ್ಷಗಳ ಹಿಂದೆ ಈ ದೇಗುಲದಲ್ಲಿ ಹರಕೆ ಹೊತ್ತಿದ್ದರು. ಅದನ್ನು ತೀರಿಸುವ ಸಲುವಾಗಿ ಇಂದು ಕುಟುಂಬ ಸಮೇತರಾಗಿ ಶಶಿಕಲಾ ಆಗಮಿಸಿದ್ದಾರೆ. ದೇಗುಲಕ್ಕೆ ಬಂದ ಶಶಿಕಲಾಗೆ ದೇವಾಲಯದ(Temple) ಅರ್ಚಕರು ವಿಶೇಷ ರೀತಿಯಲ್ಲಿ ಸ್ವಾಗತಿಸಿದ್ದಾರೆ.

ಇತ್ತೀಚೆಗಷ್ಟೆ ಶಶಿಕಲಾ ನಟರಾಜನ್ ಜೈಲಿನಿಂದ ಬಿಡುಗಡೆ ಆಗಿದ್ದರು. ಜೈಲಿನಲ್ಲಿದ್ದಾಗ ಅವರ ಬಿಡುಗಡೆಗಾಗಿ ಅಭಿಮಾನಿಗಳು ನಿಮಿಷಾಂಬಾ ದೇವಾಲಯದಲ್ಲಿ ಸೀರೆ ನೀಡುವುದಾಗಿ ಹರಕೆ ಹೊತ್ತಿದ್ದರು. ಅದರಂತೆ ಇಂದು ದೇವಾಲಯಕ್ಕೆ ಆಗಮಿಸಿದ ಅವರು, ನಿಮಿಷಾಂಬಾ ದೇವಿಗೆ ಸೀರೆ ಸಮರ್ಪಿಸಿದ್ದಾರೆ. ದೇವಾಲಯದ ಅರ್ಚಕರು ಶಶಿಕಲಾ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಿಮಿಷಾಂಬಾ ದೇವಾಲಯದ ನಂತರ ಶಶಿಕಾಲ ಶ್ರೀ ರಂಗನಾಥಸ್ವಾಮಿ ದೇವಲಾಯಕ್ಕೆ ಭೇಟಿ ನೀಡಿದರು. ನಂತರ ಅರ್ಚಕರೊಬ್ಬರ ಸಲಹೆಯಂತೆ ಉಕ್ಕಡದ ಅಹಲ್ಯಾದೇವಿ ಮಾರಮ್ಮನ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಇದನ್ನೂ ಓದಿ:
ಮಾತು ಕೇಳದ ವಿ.ಕೆ.ಶಶಿಕಲಾ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿದ ಎಐಎಡಿಎಂಕೆ ನಾಯಕ; ಆಯುಕ್ತರಿಗೆ ದೂರು

ಬಾಂಗ್ಲಾದೇಶದಲ್ಲಿರುವ ಪುರಾತನ ಪ್ರಸಿದ್ಧ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ; ಬೆಳ್ಳಿಯ ಮುಕುಟ ಸಮರ್ಪಣೆ

Published On - 8:04 pm, Fri, 11 March 22