ಕೆ.ಆರ್.ಪೇಟೆ: ಮಂಡ್ಯ ಜಿಲ್ಲೆಯಲ್ಲಿ ಬಿರುಸಿನ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೆ.ಆರ್.ಪೇಟೆಯ ಬೀರುವಳ್ಳಿಯಲ್ಲಿ ಗ್ರಾಮಸ್ಥರೊದಿಗೆ ಮಾತನಾಡಿದ ಸಿದ್ದರಾಮಯ್ಯ ಬೈಎಲೆಕ್ಷನ್‌ನಿಂದಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದರು.
ಉಪಚುನಾವಣೆ ಬರಲು ಬಿಜೆಪಿ ಹಣ-ದರ್ಪ ಕಾರಣ:
ಬಿಜೆಪಿ ಹಣದ ದರ್ಪದಿಂದ ಶಾಸಕರನ್ನು ಖರೀದಿಸಿದೆ. ಬಿಜೆಪಿ ಹಿಂಬಾಗಿಲಿನಿಂದ ಅಧಿಕಾರ ಹಿಡಿದಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಇರಲಿಲ್ಲ. ಬಹುಮತಕ್ಕಾಗಿ 17 ಶಾಸಕರಿಂದ ರಾಜೀನಾಮೆ ಕೊಡಿಸಿದ್ರು. ರಾಜೀನಾಮೆ ಕೊಡಿಸಿ ಬೈಎಲೆಕ್ಷನ್ ತಂದಿದ್ದಾರೆ. ಇಂತಹವರಿಗೆ ಬುದ್ಧಿ ಕಲಿಸಬೇಕಾದವರು ಯಾರು..? ಎಂದು ಪ್ರಚಾರದ ವೇಳೆ ಮತದಾರರ ಬಳಿ ಸಿದ್ದರಾಮಯ್ಯ ಪ್ರಶ್ನೆ ಹಾಕಿದರು. ಸಿದ್ದರಾಮಯ್ಯ ಪ್ರಶ್ನೆಗೆ ಉತ್ತರಿಸಿದ ಮತದಾರರು ನಾವೇ ನಾವೇ ಎಂದು ಕೂಗಿದರು.
ಜೆಡಿಎಸ್ ಅಭ್ಯರ್ಥಿಯನ್ನೂ ಗೆಲ್ಲಿಸಬೇಡಿ, ನಾರಾಯಣಗೌಡನನ್ನೂ ಗೆಲ್ಲಿಸಬೇಡಿ:
ನಾರಾಯಣಗೌಡ ಜೆಡಿಎಸ್‌ನಿಂದ ಗೆದ್ದು ಬಿಜೆಪಿಗೆ ಹೋಗಿದ್ದಾನೆ. ನಾರಾಯಣಗೌಡ ವ್ಯಾಪಾರಕ್ಕೆ ಒಳಗಾಗಿ ಮಾರಾಟವಾಗಿದ್ದಾನೆ. ಇದೀಗ ಜೆಡಿಎಸ್‌ನಿಂದ ದೇವರಾಜು ಅನ್ನೋರು ಸ್ಪರ್ಧಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿಯನ್ನೂ ಗೆಲ್ಲಿಸಬೇಡಿ, ನಾರಾಯಣಗೌಡನನ್ನೂ ಗೆಲ್ಲಿಸಬೇಡಿ. ಕೆ.ಆರ್.ಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಚಂದ್ರಶೇಖರ್‌ನನ್ನು ಗೆಲ್ಲಿಸಿ ಎಂದು ಬೀರುವಳ್ಳಿ ಗ್ರಾಮದ ಮತದಾರರಿಗೆ ಸಿದ್ದರಾಮಯ್ಯ ಮನವಿ ಮಾಡಿದರು.
Published On - 5:34 pm, Thu, 21 November 19