Karnataka Bandh: ಸರ್ಕಾರ ಕಠಿಣ ನಿಲುವು ಪ್ರಕಟಿಸಲೇಬೇಕು, ಕುಡಿಯಲು ನೀರಿಲ್ಲದಾಗ ಅವರ ಬೆಳೆಗಳಿಗೆ ಎಲ್ಲಿಂದ ಕೊಡೋಣ? ದರ್ಶನ್ ಪುಟ್ಟಣ್ಣಯ್ಯ

|

Updated on: Sep 29, 2023 | 12:06 PM

ಕುಡಿಯಲು ನೀರಿಲ್ಲದ ಸ್ಥಿತಿಯಲ್ಲಿ ನಾವಿದ್ದರೆ, ತಮಿಳುನಾಡು ಬೆಳೆಗಳಿಗೆ ನೀರು ಕೇಳುತ್ತಿದೆ. ನೀರು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದರೆ ಕೊಡೋಣ, ಅವರೇನೂ ನಮ್ಮ ವೈರಿಗಳಲ್ಲ; ಆದರೆ ನಮ್ಮಲ್ಲಿ ಹಸು ಕರುಗಳಿಗೆ ಕುಡಿಯಲು ನೀರಿಲ್ಲ ಎಂಬ ಸಂಗತಿಯನ್ನು ಅವರು ಸಹ ಅರ್ಥಮಾಡಿಕೊಳ್ಳಬೇಕು ಎಂದು ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ಮಂಡ್ಯ: ಜಿಲ್ಲೆಯಾದ್ಯಂತ ಕಾವೇರಿ ನದಿ ನೀರಿಗಾಗಿ ನಡೆಯುತ್ತಿರುವ ಹೋರಾಟ ತೀವ್ರಸ್ವರೂಪ ಪಡೆದುಕೊಂಡಿದೆ. ಕನ್ನಡ ಸಂಘಟಮೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ (Darshan Puttannaiah) ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದು ಟಿವಿ9 ಕನ್ನಡ ವಾಹಿನಿಯ ಮಂಡ್ಯ ವರದಿಗಾರ ಶಾಸಕನೊಂದಿಗೆ ಮಾತಾಡಿದ್ದಾರೆ. ಕರ್ನಾಟಕ ಸರ್ಕಾರ (Karnataka Government) ಕಠಿಣ ನಿಲುವು ತಳೆಯಲೇ ಬೇಕಾದ ಸ್ಥಿತಿ ಎದುರಾಗಿದೆ, ಜಲಾಶಯಗಳಲ್ಲಿ ನೀರೇ ಇಲ್ಲ ಇನ್ನು ಬಿಡುವುದೆಲ್ಲಿಂದ ಬಂತು ಅಂತ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (CWMA) ಸ್ಪಷ್ಟ ಮಾತುಗಳಲ್ಲಿ ಹೇಳಬೇಕು ಎಂದು ದರ್ಶನ್ ಹೇಳಿದರು. ಕುಡಿಯಲು ನೀರಿಲ್ಲದ ಸ್ಥಿತಿಯಲ್ಲಿ ನಾವಿದ್ದರೆ, ತಮಿಳುನಾಡು ಬೆಳೆಗಳಿಗೆ ನೀರು ಕೇಳುತ್ತಿದೆ. ನೀರು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದರೆ ಕೊಡೋಣ, ಅವರೇನೂ ನಮ್ಮ ವೈರಿಗಳಲ್ಲ; ಆದರೆ ನಮ್ಮಲ್ಲಿ ಹಸು ಕರುಗಳಿಗೆ ಕುಡಿಯಲು ನೀರಿಲ್ಲ ಎಂಬ ಸಂಗತಿಯನ್ನು ಅವರು ಸಹ ಅರ್ಥಮಾಡಿಕೊಳ್ಳಬೇಕು ಎಂದು ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ